Indu sairisiri

Composer : Shri Kanakadasaru

By Smt.Shubhalakshmi Rao

ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ
ಮುಂದಕೆ ನಿಮ್ಮ ಮನೆಗೆ ಬಾರನಮ್ಮ |ಪ|

ಮಗುವು ಬಲ್ಲುದೆ ಇಷ್ಟು ಬೆಣ್ಣೆಯ ಕದ್ದರೆ
ಬಿಗಿಯ ಬಹುದೇ ಶ್ರೀ ಚರಣವನು |
ಅಗಣಿತ ಮಹಿಮನ ಅಂಜಿಸಲೇಕಮ್ಮ
ಬಗೆಯ ಬಾರದೆ ನಿಮ್ಮ ಮಕ್ಕಳಂತೆ ||೧||

ಹಸು ಮಗುವನು ಕಂಡು ಮುದ್ದಿಸಲೊಲ್ಲದೆ
ಹುಸಿಗ ಕಳ್ಳನೆಂದು ಕಟ್ಟುವಿರಿ |
ವಸುಧೆಯೊಳಗೆ ನಾನೊಬ್ಬಳೆ ಪಡೆದೆನೆ
ನಿಮ್ಮ ಹಸು ಮಗುವಿನಂತೆ ಭಾವಿಸಬಾರದೆ ||೨||

ಎಷ್ಟು ಸಾರಿಯು ನಾ ಬೇಡವೆಂದರೆ ಕೇಳ
ದುಷ್ಟ ಮಕ್ಕಳ ಕೂಡೆ ಒಡನಾಡುವ |
ಕಟ್ಟಿದ ನೆಲುವಿನ ಬೆಣ್ಣೆಯನೀವೆನು
ಬಿಟ್ಟು ಕಳುಹಿರಮ್ಮ ಆದಿಕೇಶವನ ||೩||


iMdu sairisiri SrIkRuShNana tappa
muMdake nimma manege bAranamma |pa|

maguvu ballude iShTu beNNeya kaddare
bigiya bahudE SrI caraNavanu |
agaNita mahimana aMjisalEkamma
bageya bArade nimma makkaLaMte ||1||

hasu maguvanu kaMDu muddisalollade
husiga kaLLaneMdu kaTTuviri |
vasudheyoLage nAnobbaLe paDedene
nimma hasu maguvinaMte BAvisabArade ||2||

eShTu sAriyu nA bEDaveMdare kELa
duShTa makkaLa kUDe oDanADuva |
kaTTida neluvina beNNeyanIvenu
biTTu kaLuhiramma AdikESavana ||3||

Leave a Reply

You might also like

error: Content is protected !!