Composer : Shri Indiresha ankita
ಎಂದಪ್ಪಿಕೊಂಬೆ ರಂಗಯ್ಯನ ಎಂದಪ್ಪಿಕೊಂಬೆ [ಪ]
ಎಂದಪ್ಪಿಕೊಂಬೆನೋ ಎಂದು ಮುದ್ದಾಡುವೆ
ನಂದ ಕಂದನ ಗೋವಿಂದನೆಂಬುವ ಕೂಸ [ಅ.ಪ]
ಕರದಲಿ ತನ್ನಯ ಬೆರಳು ಬಾಯೊಳಗಿಟ್ಟು
ಜುರು ಜುರು ಚೀಪುವ ವರಮುದ್ದು ಬಾಲನ (೧)
ಗುರುಳು ಮಧ್ಯದಿ ರತ್ನ ಅರಳೆಲೆ ಹೊಳೆಯುತ
ಜರದ ಕುಂಚಿಗೆ ಹೊದ್ದು ಚರಿಸುವ ಕೂಸಿನ್ನ (೨)
ಪುಟ್ಟ ಪುಟ್ ಹೆಜ್ಜೆಯನಿಟ್ಟು ಗೋಕುಲದೊಳು
ತುಷ್ಟಿ ನೀಡಲು ಬಾಲಕೃಷ್ಣನೆಂಬುವ ಕೂಸ (೩)
ಬಾಲೆರ ಮನೆಪೊಕ್ಕು ಪಾಲುಮೊಸರು ತಿಂದ
ಲೀಲೆ ಮಾಡುತ ಅಂಬೆಗಾಲನಿಕ್ಕುವ ಕೂಸ (೪)
ಕಾಲಕಡಗ ರುಳಿಯ ಪೂಲು ಪೈಜಣನಿಟ್ಟು
ಮ್ಯಾಲೆ ಉಡುದಾರ ಪೊಳೆವಂಥ ಕೃಷ್ಣನ (೫)
ತಂದೆ ತಾಯರ ಮುಂದೆ ನಿಂದು ಮಾತಾಡಿದ
ನಂದ ಬಾಲಕನಾದ ಇಂದಿರೇಶನೆ ಬೇಗ (೬)
eMdappikoMbe raMgayyana eMdappikoMbe [pa]
eMdappikoMbenO eMdu muddADuve
naMda kaMdana gOviMdaneMbuva kUsa [a.pa]
karadali tannaya beraLu bAyoLagiTTu
juru juru cIpuva varamuddu bAlana (1)
guruLu madhyadi ratna araLele hoLeyuta
jarada kuMcige hoddu carisuva kUsinna (2)
puTTa puT hejjeyaniTTu gOkuladoLu
tuShTi nIDalu bAlakRuShNaneMbuva kUsa (3)
bAlera manepokku pAlumosaru tiMda
lIle mADuta aMbegAlanikkuva kUsa (4)
kAlakaDaga ruLiya pUlu paijaNaniTTu
myAle uDudAra poLevaMtha kRuShNana (5)
taMde tAyara muMde niMdu mAtADida
naMda bAlakanAda iMdirESane bEga (6)

Leave a Reply
You must be logged in to post a comment.