Composer : Shri Prasannavenkata dasaru
ರಂಗನ್ಯಾಕೆ ತಿರುಗಿ ಬಾರನೆ ಅಂತ
ರಂಗಪೀಠದಿ ಮೊಗದೋರನೆ [ಪ.]
ಮಂಗಳಾಂಗನೊಳು ಮಾತಾಡದೆ ಸತಿ
ಕಂಗಳು ದಣಿಯದೆ ನೋಡಿ
ಅಂಗನೆ ಹ್ಯಾಂಗೆ ಜೀವಿಸಲಮ್ಮ
ಎನ್ನಿಂಗಿತವಾರಿಗುಸುರಲಮ್ಮ [೧]
ಕಲ್ಲೆದೆಯಾದೆ ಇನಿತುದಿನ ಜೀವ
ಕೊಲ್ಲದು ಹೋಯೆಂಬ ರೋದನ
ಫುಲ್ಲನಾಭನ ಎಂಜಲುಂಡರೆ ಕಷ್ಟ
ವಿಲ್ಲದೆ ಸುಖ ಕಣ್ಣು ಕಂಡರೆ [೨]
ಕೃಷ್ಣನ ಶುಭಗುಣ ಹೊಗಳುತ ಬಹು
ಕಷ್ಟ ನೀಗಿದೆ ನಕ್ಕು ತತ್ವಶ:
ಸೃಷ್ಟೀಶನ ಪ್ರಸನ್ವೆಂಕಟೇಶನ ನೆನೆ
ವಷ್ಟರೊಳಗೆ ಮಾಯವಾದನೆ [೩]
raMganyAke tirugi bArane aMta
raMgapIThadi mogadOrane [pa.]
maMgaLAMganoLu mAtADade sati
kaMgaLu daNiyade nODi
aMgane hyAMge jIvisalamma
enniMgitavArigusuralamma [1]
kalledeyAde initudina jIva
kolladu hOyeMba rOdana
PullanABana eMjaluMDare kaShTa
villade suKa kaNNu kaMDare [2]
kRuShNana SuBaguNa hogaLuta bahu
kaShTa nIgide nakku tatvasha:
sRuShTISana prasanveMkaTESana nene
vaShTaroLage mAyavAdane [3]

Leave a Reply
You must be logged in to post a comment.