Composer : Shri Indiresha ankita
ಇಷ್ಟು ದಿನ ಇಂಥ ಸುಖ ಕಾಣಲಿಲ್ಲ ಕೃಷ್ಣ
ಈ ದಿನ ನೋಡಿ ತುಷ್ಟನಾದೆನೊ ದೇವಾ [ಪ]
ಆಟಗಳು ಸುಖವಲ್ಲ ಕೃಷ್ಣ ನೋಟಗಳು ಸುಖವಲ್ಲ
ಪಾಠಗಳು ಸುಖವಲ್ಲ ಕೂಟವಲ್ಲ ತೋಟದೊಳು |
ರವಿಸುತನ ಕೂಟದೊಳು ಗೋಪಿಯರ ಆಟಕದ
ಕೊಳಲೂದೊ ನೋಟ ಸ್ಮರಣೆಗೆ ತರುವೆ [೧]
ಏನು ಸೌಂದರ್ಯವೊ ಕೃಷ್ಣ ಏನು ಸೌಭಾಗ್ಯವೊ
ಧೇನುಪಾಲನ ನೋಟಕಾಶ್ಚರ್ಯವೊ |
ನಾನು ಒಲ್ಲೆನು ಸೀದಾ ಆಣೆ ಮಾಡುವೆ ನೀಗ
ಧೇನು ಮುಖ ಸಮ ತೋರಿ ಧ್ಯಾನ ತಪ್ಪಿಸೋ ಜಗದಿ [೨]
ನಿಂದು ಕೊಳಲನು ಕರದಿ ಇಂದು ಬಾಯೊಳಗಿಟ್ಟು
ಮಂದಹಾಸವ ಮಾಡುತ ಇಂದಿರೇಶ |
ಕಂದರ್ಪ ಸಮರೂಪದಿಂದ ನೋಡುವೆನೀಗ
ಸಿಂಧುವಿನೊಳು ಮುಳುಗಿದೆನು ನಂದಬಾಲಕನೆ [೩]
iShTu dina iMtha suKa kANalilla kRuShNa
I dina nODi tuShTanAdeno dEvA [pa]
ATagaLu suKavalla kRuShNa nOTagaLu suKavalla
pAThagaLu suKavalla kUTavalla tOTadoLu |
ravisutana kUTadoLu gOpiyara ATakada
koLalUdo nOTa smaraNege taruve [1]
Enu sauMdaryavo kRuShNa Enu sauBAgyavo
dhEnupAlana nOTakAScaryavo |
nAnu ollenu sIdA ANe mADuve nIga
dhEnu muKa sama tOri dhyAna tappisO jagadi [2]
niMdu koLalanu karadi iMdu bAyoLagiTTu
maMdahAsava mADuta iMdirESa |
kaMdarpa samarUpadiMda nODuvenIga
siMdhuvinoLu muLugidenu naMdabAlakane [3]

Leave a Reply
You must be logged in to post a comment.