Composer : Shri Prasannavenkata dasaru
ಎಂದು ಕಾಂಬೆನೊ ಎನ್ನ ಸಲಹುವ
ತಂದೆ ಉಡುಪಿಯ ಜಾಣನಾ |
ಮಂದಹಾಸ ಪ್ರವೀಣನಾ
ಇಂದಿರಾ ಭೂರಮಣನಾ |ಪ|
ದೇವಕಿಯ ಜಠರದಲಿ ಬಂದನ
ಆವ ಪಳ್ಳಿಲಿ ನಿಂದನಾ |
ಮಾವ ಕಂಸನ ಕೊಂದನಾ
ಕಾವನಯ್ಯ ಮುಕುಂದನಾ ||೧||
ಕಡಲ ದಡದೋಳೆಸೆವ ರಂಗನ
ಕಡಗೋಲ್-ನೆಣನು ಪಿಡಿದನಾ |
ಮೃಡ ಪುರಂದರ ರೊಡೆಯನಾ
ಈರಡಿಗಳಲಿ ಶಿರವಿಡುವೆನಾ ||೨||
ಪೂರ್ಣಪ್ರಜ್ಞರಿಗೊಲಿದು ದ್ವಾರಕೆ
ಮಣ್ಣಿನೊಳ್ ಪ್ರಕಟಿಸಿದನಾ |
ಭವಾರ್ಣವಕೆ ಪ್ಲವನಾದನಾ
ಪ್ರಸನ್ನವೆಂಕಟ ಕೃಷ್ಣನಾ ||೩||
eMdu kAMbeno enna salahuva
taMde uDupiya jANanA |
maMdahAsa pravINanA
iMdirA BUramaNanA |pa|
dEvakiya jaTharadali baMdana
Ava paLLili niMdanA |
mAva kaMsana koMdanA
kAvanayya mukuMdanA ||1||
kaDala daDadOLeseva raMgana
kaDagOl-neNanu piDidanA |
mRuDa puraMdara roDeyanA
IraDigaLali SiraviDuvenA ||2||
pUrNapraj~jarigolidu dvArake
maNNinoL prakaTisidanA |
BavArNavake plavanAdanA
prasannaveMkaTa kRuShNanA ||3||

Leave a Reply
You must be logged in to post a comment.