Composer : Shri Prasannavenkata dasaru
ಆನಮಿಸುವೆ ಯಲಗೂರ ಭೀಮನಾ [ಪ]
ಪೂರ್ಣಜ್ಞಾನಘನ ಶ್ರೀಪವಮಾನನ [ಅ]
ಗದೆ ಪಿಡಿದು ಮೂಲರಕ್ಕಸಕುಲದಾ |
ಮದಮುರಿದಾ ಹನುಮ ಭೀಮನಾಗಿ
ವಾದಿಗಳೆದೆ ಬಗೆದಾ ತತ್ವವಾದದಿ |
ಮಧ್ವರಾಯರೆಂಬೊ ಅಭಿಧಾನಾದಲಿ [೧]
ಸಾಮಜವರದ ಶ್ರೀರಾಮ ಕೃಷ್ಣರನು |
ನೇಮದಿ ಭಜಿಸಿದ ಮರುತಾವೇಶನ |
ಧೂಮಗೈಸಿ ಅಧಮ ಶಾಸ್ತ್ರಗಳ |
ಸುಮನಸ ಮುನಿಯೆನಿಪಾನಂದತೀರ್ಥರ [೨]
ಶಂಖ ಚಕ್ರ ಮುದ್ರಾಂಕಿತ ಹರಿಯಾ |
ಕಿಂಕರರೊಳಗೆ ಭಯಂಕರನೆನಿಸಿದ |
ಸಂಕರುಷಣ ಪ್ರಸನ್ವೆಂಕಟಕೃಷ್ಣನ |
ಬಿಂಕದ ದಾಸ ನಿರಂಕುಶನ [೩]
Anamisuve yalagUra BImanA [pa]
pUrNaj~jAnaGana SrIpavamAnana [a]
gade piDidu mUlarakkasakuladA |
madamuridA hanuma BImanAgi
vAdigaLede bagedA tatvavAdadi |
madhvarAyareMbo aBidhAnAdali [1]
sAmajavarada SrIrAma kRuShNaranu |
nEmadi Bajisida marutAvESana |
dhUmagaisi adhama SAstragaLa |
sumanasa muniyenipAnaMdatIrthara [2]
SaMKa cakra mudrAMkita hariyA |
kiMkararoLage BayaMkaranenisida |
saMkaruShaNa prasanveMkaTakRuShNana |
biMkada dAsa niraMkuSana [3]
Leave a Reply