Composer : Shri Helavanakatte Giriyamma
Composed during Shri Sumateendra teerthara Rama devara pooje
ರಾಮ ಶ್ರೀ ರಘುನಂದನ ಶರಣು ಸಾರ್ವ-
ಭೌಮ ಭೂಸುರವಂದ್ಯ
ಸೋಮಶೇಖರಮಿತ್ರ ಕಾಮಿತ ಫಲದಾತ
ಕಾಮಧೇನು ವಿಶ್ವಭೀಮ ಸನ್ನುತ ಸೀತಾ ||ಪ.||
ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ-
ಭಾರಹರ ಭಜಕ ಜನೋದ್ಧಾರ ವೇದಾಂತಸಾರ
ಚಾರುವದನ ಮಣಿಹಾರ ಕುಂಡಲಧರ
ವೀರರಾಘವ ವಿಶ್ವಾಧಾರ ಕರುಣಿಸು ಸೀತಾ [೧]
ಪಾಪರಹಿತ ಪಾವನ ಚರಿತ ಅಹಲ್ಯಾ
ಶಾಪ ಹರಣ ದಿವ್ಯರೂಪ ರಮಾರಮಣ
ತಾಪ ವಿಚ್ಛೇದನ ತಾಮಸ ಗುಣಹರಣ ದ-
ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ [೨]
ಮದನಕೋಟಿ ಮೋಹನಾಂಗ ಮಾಧವ ಪುಣ್ಯಚರಿತ
ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ
ಸದಾನಂದ ಸುಮತೀಂದ್ರ ಹೃದಯ ಪಂಕಜ ಭೃಂಗ
ಕದನ ವಿಕ್ರಮ ಬಾಹು ಕೋದಂಡಧೃತ ಮೂಲ ಸೀತಾ [೩]
rAma SrI raGunaMdana SaraNu sArva-
Bauma BUsuravaMdya
sOmaSEKaramitra kAmita PaladAta
kAmadhEnu viSvaBIma sannuta sItA ||pa.||
krUra dAnava saMhAra kausalyAkumAra BU-
BArahara Bajaka janOddhAra vEdAMtasAra
cAruvadana maNihAra kuMDaladhara
vIrarAGava viSvAdhAra karuNisu sItA [1]
pAparahita pAvana carita ahalyA
SApa haraNa divyarUpa ramAramaNa
tApa vicCEdana tAmasa guNaharaNa da-
yApara brahmasvarUpa mUruti sItA [2]
madanakOTi mOhanAMga mAdhava puNyacarita
karuNApAMga heLavanakaTTe raMgayya
sadAnaMda sumatIMdra hRudaya paMkaja BRuMga
kadana vikrama bAhu kOdaMDadhRuta mUla sItA [3]
Leave a Reply