Composer : Shri Shyamasundara dasaru
ಶರಧಿ ಸಂಭೂತೆ ಕಾಯೆ | ಶಿರಬಾಗಿ ಬೇಡುವೆ ತಾಯೆ |
ಸುರಮುನಿಜನ ಸೇವಿತೆ | ಕರಪಿಡಿ ಸುಖದಾತೆ [ಪ]
ಸೀತೆ ಜಾನಕಿಯೆ | ಶೀತಾಂಶು ಬಿಂಬಾನಯೆ |
ಮಾತೆ ನೀ ಬಂದು ಪಾಲಿಸೆ | ಎನ್ನವಗುಣ ಬಿಡಿಸೆ [೧]
ಮಂದಜಾಸನ ಜನನಿ | ಕುಂದಕುಮ್ಮಲರ ದನಿ
ವಂದಿಪೆ ವನಜ ಮಂದಿರೆ | ಗೋವಿಂದನ ತೋರೆ [೨]
ಶಾಮಸುಂದರನ ರಾಣಿ | ಭೂಮಿನಭ ಸಂಚರಿಸಿ |
ಭಾಮೆ ನಂಬಿದೆ ಅಂಭ್ರಣಿ | ಘನ ಮಂಜುಳವಾಣಿ [೩]
Saradhi saMBUte kAye | SirabAgi bEDuve tAye |
suramunijana sEvite | karapiDi suKadAte [pa]
sIte jAnakiye | SItAMSu biMbAnaye |
mAte nI baMdu pAlise | ennavaguNa biDise [1]
maMdajAsana janani | kuMdakummalara dani
vaMdipe vanaja maMdire | gOviMdana tOre [2]
SAmasuMdarana rANi | BUminaBa saMcarisi |
BAme naMbide aMBraNi | Gana maMjuLavANi [3]
Leave a Reply