Composer : Shri Abhinava janardana vittala
ಮಂಗಳಂ ಮಂಗಳಂ ವಾದಿರಾಜ ಮಂಗಳಂ |
ಮಂಗಳ ಸುಗುಣ ತರಂಗ ಕೃಪಾಂಗ [ಪ]
ಮುನಿಕುಲೋತ್ತುಂಗ ದುರ್ಜನಮದ ಭಂಗ |
ಸಜ್ಜನ ಅಂತರಂಗ ಹೇ ಅನಘ ನಿಸ್ಸಂಗ [೧]
ಹಯವದನನ ಪದದ್ವಯ ಭಜಿಪ ಅಗಾಧ |
ದಯಸಾಗರನಾದ ಭಯ ನಿವಾರಣ ಶ್ರೀದ [೨]
ಪವಮಾನನುತ ಅಭಿನವ ಜನಾರ್ದನ ವಿಠ್ಠಲ
ಅವನಿ ಪತಿಯೆ ಶ್ರೀ ಪಾದವನೆ ಭಜಿಪ ಗುರು [೩]
maMgaLaM maMgaLaM vAdirAja maMgaLaM |
maMgaLa suguNa taraMga kRupAMga [pa]
munikulOttuMga durjanamada bhaMga |
sajjana aMtaraMga hE anagha nissaMga [1]
hayavadanana padadvaya bhajipa agAdha |
dayasAgaranAda bhaya nivAraNa SrIda [2]
pavamAnanuta abhinava janArdana viThThala
avani patiye shrI pAdavane bhajipa guru [3]
Leave a Reply