Composer : Shri Vyasarajaru on Shri Jayatirtharu
ಎದುರಾರೈ ಗುರುವೆ ಸಮರಾರೈ ||ಪ||
ಮದನ ಗೋಪಾಲನ ಪ್ರಿಯ ಜಯರಾಯ ||ಅ.ಪ||
ಕಡು ಗರ್ಜಿಸುವ ಕೇಸರಿಯಂತೆ ನಿಮ್ಮ ವಾದ
ಗಡಣೆಯ ಕೇಳುತ ನುಡಿ ಮುಂದೋಡದೆ
ಗಡಗಡ ನಡುಗುತ ಮಾಯ್ಗೋ ಮಾಯ್ಗಳು
ಅಡವಿಯೋಳಡಗೋರು ನಿಮ್ಮ ಭೀತಿಯಲಿ ||೧||
ಕುಟಿಲ ಮತಗಳೆಂಬೊ ಚಟುಲಾಂಧಕಾರಕ್ಕೆ
ಪಟುತರ ತತ್ವ ಪ್ರಕಾಶಿಕೆ ಯೆಂಬ
ಚಟುಲಾ ತಪದಿಂದ ಖಂಡಿಸಿ,
ತೇಜೋ-ತ್ಕಟದಿ ಮೆರೆದೆ ಬುಧ ಕಟಕಾಬ್ಜ ಮಿತ್ರ ||೨||
ಅಮಿತ ದ್ವಿಜಾವಳಿ ಕುಮುದಗಳರಳಿಸಿ
ವಿಮತರ ಮುಖ ಕಮಲಂಗಳ ಬಾಡಿಸಿ
ಸ್ವಮತರ ಹೃತ್ ಸಂತಾಪಗಳೋಡಿಸಿ
ವಿಮಲ ಸುಕೀರ್ತಿಯ ಪಡೆದೆಯೊ ಚಂದ್ರ ||೩||
ವ್ಯಾಸ ಸೂತ್ರಗಳೆಂಬೊ ಮಂದರವನು
ವೇದ ರಾಶಿಯೆಂಬೊ ವಾರಾಶಿಯೊಳಿಟ್ಟು
ಶ್ರೀ ಸರ್ವಜ್ಞರ ವಾಕ್ ಪಾಶದಿ ಸುತ್ತಿ ಭಾಸುರ
ನ್ಯಾಯಸುಧೆ ಪಡೆದೆ ಯತೀಂದ್ರ ||೪||
ಅರ್ಥಿ ಮಂದಾರ ವೇದಾರ್ಥ ವಿಚಾರ
ಸ-ಮರ್ಥ ಶ್ರೀಕೃಷ್ಣ ಪಾದಾಂಬುಜ ಭೃಂಗ
ಪ್ರ-ತ್ಯರ್ಥಿ ಮತ್ತೇಭ ಕಂಠೀರವಾಕ್ಷೋಭ್ಯ-
ತೀರ್ಥ ಕರಜ ಜಯತೀರ್ಥ ಯತೀಂದ್ರ ||೫||
edurArai guruve samarArai ||pa||
madana gOpAlana priya jayarAya ||a.pa||
kaDu garjisuva kEsariyaMte nimma vAda
gaDaNeya kELuta nuDi muMdODade
gaDagaDa naDuguta mAygO mAygaLu
aDaviyOLaDagOru nimma BItiyali ||1||
kuTila matagaLeMbo chaTulAMdhakArakke
paTutara tatva prakASike yeMba
caTulA tapadiMda khaMDisi,
tEjO-tkaTadi merede budha kaTakAbja mitra ||2||
amita dvijAvaLi kumudagaLaraLisi
vimatara mukha kamalaMgaLa bADisi
svamatara hRut saMtApagaLODisi
vimala sukIrtiya paDedeyo caMdra ||3||
vyAsa sUtragaLeMbo maMdaravanu
vEda rASiyeMbo vArAshiyoLiTTu
shrI sarvaj~jara vAk pASadi sutti BAsura
nyAyasudhe paDede yatIMdra ||4||
arthi maMdAra vEdArtha vicAra
sa-martha SrIkRuShNa pAdAMbuja bhRuMga
pra-tyarthi mattEBa kaMThIravAkShOBya-
tIrtha karaja jayatIrtha yatIMdra ||5||
Leave a Reply