Raghurama paramapta

Composer : Shri Prasannavenkata dasaru

By Smt.Shubhalakshmi Rao

Shri Raghuttama Tirtha – 1548 – 1596
Manampoondi,Tirukoilur -TN
bhAvabodhakR^itaM seve
raghuttamamahAgurum |
yacChiShyashiShyashiShyAdyAH
TippaNyAcAryasaMj~nitAH |
Aradhane : Pousha Shukla Ekadashi


ರಘುರಾಮ ಪರಮಾಪ್ತ ರಘೂತ್ತಮತೀರ್ಥ |
ಮುಗಿವೆ ಕರಗಳ ಅಡಿಗೆ ತಿಳಿಸು ಪರತತ್ವದರ್ಥ ||ಪ||

ಪುರಂದರ ದಾಸರಿಗೆ ಪರಮಾರ್ಥ ಜ್ಞಾನಾ |
ಪರಮ ಹರುಷದಿ ನೀಡಿದಿ ದುರಿತವಹನಾ |
ದುರಿತ ರಾಶಿಯ ತರಿದು ಹರಿಯ ಪರಧ್ಯಾನಾ
ಮರೆಯದೆ ಕೊಡೆನಗೆ ಮರುತ ಮತ ಲಾಂಛನಾ ||೧||

ಪೂರ್ಣಪ್ರಜ್ಞಾರಣ್ಯದೊಳುಗ್ರ ವ್ಯಾಘ್ರ |
ಜೀರ್ಣಿಸುತ ಪ್ರೇಮತತ್ವ ಪೊರೆದಮರನರ್ಗೆ |
ತೂರ್ಣದಿರಿ ನೂಕಿ ಭವ ದಾಟುವಾಗಾಧಗತಿ |
ಚೂರ್ಣ ಜ್ಞಾನವ ನೀಡಿದಾದಮ್ಯ ಬೋಧಯತಿ ||೨||

ಅಲವ ಬೋಧರ ಮತಕೆ ಸುಲಭ ಸೇತುವೆ ನೀ
ಕಲಿಯ ಕಲ್ಮಷ ತೊಳೆದ ಪರತತ್ವ ಜ್ಞಾನಿ |
ಲಲಿತ ಗ್ರಂಥವ ರಚಿಸಿ ಆನಂದತೀರ್ಥರಿಗೆ |
ಸಲ್ಲಿಸಿ ಸುಖತೀರ್ಥ ನಿಧಿಯೆನಿಸಿ ಮೆರೆದೆ ||೩||

ಗರ್ವದಿಂಹುಂಕರಿಸಿ ಘೀಂಕರಿಸಿದಾ ದುಷ್ಟ |
ದುರ್ವಾದಿಗಳ ಹುಟ್ಟ ನಡಗಿಸಿಟ್ಮೋ ದಿಟ್ಟ |
ಪರ್ವತವ ನೆಗೆವ ಮಹತತ್ವ ಮತಸಾರಾ
ಉರ್ವಿಯೊಳಧಿಕೆಂದು ಸಾರಿದ್ಯೂ ಧೀರಾ ||೪||

ಪಂಚ ಕೃಷ್ಣಾರಣ್ಯ ಪಿನಾಕಿನಿ ತಟದಿ |
ಪಂಚಭೇದವ ಭೋದಿಸುವ ಭಾವಬೋಧಿ |
ಕಂಚೀಶ ಸಿರಿ ಪ್ರಸನ್ವೆಂಕಟ ರಾಯನ್ನ | ನಿ_
ಶ್ಚಿಂತದಲಿ ನೆನೆದು ಮೆರೆದ್ಯೋ ಮಹಾತ್ಮಾ ||೫||


raGurAma paramApta raGUttamatIrtha |
mugive karagaLa aDige tiLisu paratatvadartha ||pa||

puraMdara dAsarige paramArtha j~jAnA |
parama haruShadi nIDidi duritavahanA |
durita rASiya taridu hariya paradhyAnA
mareyade koDenage maruta mata lAMCanA ||1||

pUrNapraj~jAraNyadoLugra vyAGra |
jIrNisuta prEmatatva poredamaranarge |
tUrNadiri nUki Bava dATuvAgAdhagati |
cUrNa j~jAnava nIDidAdamya bOdhayati ||2||

alava bOdhara matake sulaBa sEtuve nI
kaliya kalmaSha toLeda paratatva j~jAni |
lalita graMthava racisi AnaMdatIrtharige |
sallisi suKatIrtha nidhiyenisi merede ||3||

garvadiMhuMkarisi GIMkarisidA duShTa |
durvAdigaLa huTTa naDagisiTmO diTTa |
parvatava negeva mahatatva matasArA
urviyoLadhikeMdu sAridyU dhIrA ||4||

paMca kRuShNAraNya pinAkini taTadi |
paMcaBEdava BOdisuva BAvabOdhi |
kaMcISa siri prasanveMkaTa rAyanna | ni_
SciMtadali nenedu meredyO mahAtmA ||5||

Leave a Reply

Your email address will not be published. Required fields are marked *

You might also like

error: Content is protected !!