Composer : Shri Vadirajaru
ರಂಗ ಬಾರೊ ನರಸಿಂಗ ಬಾರೊ ||ಪ||
ಅಂಗಜನಯ್ಯ ಕೋನೇರಿ ತಿಮ್ಮ ರಂಗ ಬಾರೊ ||ಅ.ಪ.||
ಸಾಸಿರ ಮೂರುತಿ ವಾಸವವಂದ್ಯನೆ | ಸಾಸಿರ ನಾಮದೊಡೆಯನೆ |
ಸಾಸಿರ ನಾಮದೊಡೆಯನೆ ನರಹರಿ | ಕೇಶವ ನಮ್ಮ ಮನೆದೈವ ||೧||
ವಾರಣ ವಂದ್ಯನೆ ಕಾರುಣ್ಯ ರೂಪನೆ | ಪುರಾಣಗಳಲ್ಲಿ ಪೊಗಳುವ |
ಪುರಾಣಗಳಲ್ಲಿ ಪೊಗಳುವ ನರಹರಿ | ನಾರಾಯಣ ನಮ್ಮ ಮನೆದೈವ ||೨||
ಯಾದವಕುಲದಲ್ಲಿ ಸಾಧುಗಳರಸನೆ | ಭೇದಿಸಿ ದನುಜರ ಗೆಲಿದನೆ |
ಭೇದಿಸಿ ದನುಜರ ಗೆಲಿದನೆ ನರಹರಿ | ಮಾಧವ ನಮ್ಮ ಮನೆದೈವ ||೩||
ದೇವೇಂದ್ರ ಮಳೆಗರೆಯೆ ಗೋವರ್ಧನ ಗಿರಿಯೆತ್ತಿ | ಆ ಗಿರಿಯ ಶ್ರೀಕೃಷ್ಣ ಕೊಡೆಮಾಡಿ |
ಆ ಗಿರಿಯ ಶ್ರೀಕೃಷ್ಣ ಕೊಡೆಮಾಡಿ ಕಾಯಿದನೆ | ಗೋವಿಂದ ನಮ್ಮ ಮನೆದೈವ ||೪||
ಸೃಷ್ಟಿಗೆ ಕರ್ತನೆ ದುಷ್ಟ ಕಂಸನ ಗೆಲಿದು | ಶಿಷ್ಟ ಪರಿಪಾಲನೆನಿಸಿದ |
ಶಿಷ್ಟ ಪರಿಪಾಲನೆನಿಸಿದ ನರಹರಿ | ವಿಷ್ಣುವೆ ನಮ್ಮ ಮನೆದೈವ ||೫||
ಮಧುವೆಂಬೊ ದೈತ್ಯನ ಮುದದಿಂದ ಗೆಲಿದನೆ | ವಿದುರನ ಮನೆಯಲಿ ನಲಿದುಂಡ |
ವಿದುರನ ಮನೆಯಲಿ ನಲಿದುಂಡ ನರಹರಿ | ಮಧುಸೂದನ ನಮ್ಮ ಮನೆದೈವ ||೬||
ಚಕ್ರವ ಪಿಡಿದನೆ ಭೂಚಕ್ರವ ಗೆಲಿದನೆ | ಅಕ್ರೂರನೊಡನೆ ಮಧುರೆಗೆ |
ಅಕ್ರೂರನೊಡನೆ ಮಧುರೆಗೆ ಪೋದ | ತ್ರಿ-ವಿಕ್ರಮ ನಮ್ಮ ಮನೆದೈವ ||೭||
ಸಾಮವನೋದುತ್ತ ದಾನವ ಬೇಡುತ್ತ | ನಾಮದ ಮಹಿಮೆ ಪೊಗಳುತ್ತ |
ನಾಮದ ಮಹಿಮೆ ಪೊಗಳುತ್ತ ನರಹರಿ | ವಾಮನ ನಮ್ಮ ಮನೆದೈವ ||೮||
ಶ್ರೀಧರ ಎನಿಸಿದ ಶ್ರೀವತ್ಸ ಲಾಂಛನ | ಶ್ರೀಧರ ಗೋಪೀತನಯನೆ |
ಶ್ರೀಧರ ಗೋಪೀತನಯನೆ ನರಹರಿ | ಶ್ರೀಧರ ನಮ್ಮ ಮನೆದೈವ ||೯||
ಋಷಿಜನ ವಂದ್ಯನೆ ಬಿಸಜನಾಭನೆ ದೇವ | ಋಷಿಜನರಿಗೆಲ್ಲ ಅಭಯವ |
ಋಷಿ ಜನರಿಗೆಲ್ಲ ಅಭಯವ ಕೊಡುವೋನೆ | ಹೃಷಿಕೇಶನೆ ನಮ್ಮ ಮನದೈವ ||೧೦||
ಪದುಮ ಸಂಭವಪಿತ ಪದುಮ ದಾಮೋದರ | ಪದುಮದಿಂದಭಯವ ಕೊಡುವೋನೆ |
ಪದುಮದಿಂದಭಯವ ಕೊಡುವೋನೆ ನರಹರಿ | ಪದುಮನಾಭನೆ ನಮ್ಮ ಮನೆದೈವ ||೧೧||
ನಾಮದ ಮಹಿಮೆಯ ಪ್ರೇಮದಿ ಪೊಗಳಲು | ಕಾಮಿತಾರ್ಥಗಳ ಕೊಡುವೋನೆ |
ಕಾಮಿತಾರ್ಥಗಳ ಕೊಡುವೋನೆ ನರಹರಿ | ದಾಮೋದರ ನಮ್ಮ ಮನೆದೈವ ||೧೨||
ಸಂಕಟಗಳ ತರಿವೋನೆ ಪಂಕಜನಾಭನೆ | ಶಂಕೆ ಇಲ್ಲದ ಅಸುರರ |
ಶಂಕೆ ಇಲ್ಲದ ಅಸುರರ ಸಂಹರಿಸಿದ | ಸಂಕರ್ಷಣ ನಮ್ಮ ಮನೆದೈವ ||೧೩||
ವಸುದೇವ ತನಯನೆ ಶಿಶುಪಾಲನ ಗೆಲಿದನೆ | ವಶವ ಮಾಡಿದೆಯೊ ತ್ರಿಪುರರ |
ವಶವ ಮಾಡಿದೆಯೊ ತ್ರಿಪುರರ ನರಹರಿ | ವಾಸುದೇವ ನಮ್ಮ ಮನೆದೈವ ||೧೪||
ಶುದ್ಧ ಸ್ವರೂಪನೆ ಶುದ್ಧ ಭಕ್ತರನು ಸಲಹಯ್ಯ | ಹದ್ದು ವಾಹನನಾದ ದೇವನೆ |
ಹದ್ದು ವಾಹನನಾದ ದೇವನೆ ನರಹರಿ | ಪ್ರದ್ಯುಮ್ನ ನಮ್ಮ ಮನೆದೈವ ||೧೫||
ವನಜಲೋಚನ ಹರಿ ವಿನಯ ಉಳ್ಳವನೆ | ಧ್ವನಿಕೇಳಿ ಬಂದು ಕುಬುಜೆಯ |
ಧ್ವನಿಕೇಳಿ ಬಂದು ಕುಬುಜೆಯ ನರಹರಿ | ಅನಿರುದ್ಧ ನಮ್ಮ ಮನೆದೈವ ||೧೬||
ಪಾರಿಜಾತದ ಹೂವ ನಾರಿಗೆ ಇತ್ತನೆ | ವೀರ ದಾನವರ ಗೆಲಿದನೆ |
ವೀರ ದಾನವರ ಗೆಲಿದನೆ ನರಹರಿ | ಪುರುಷೋತ್ತಮ ನಮ್ಮ ಮನೆದೈವ ||೧೭||
ಅಕ್ಷಯಪದವೀವ ಪಕ್ಷಿವಾಹನ ಸ್ವಾಮಿ | ಕುಕ್ಷಿಯೊಳೀರೇಳು ಭುವನವ |
ಕುಕ್ಷಿಯೊಳೀರೇಳು ಭುವನವನಾಳಿದ ನರಹರಿ ಅ | ಧೋಕ್ಷಜ ನಮ್ಮ ಮನೆದೈವ ||೧೮||
ನರಕಾಸುರನ ಕೊಂದು ಹಿರಣ್ಯನ ಮರ್ದಿಸಿ | ಕರುಳ ಬಗೆದು ವನಮಾಲೆ ಹಾಕಿ |
ಕರುಳ ಬಗೆದು ವನಮಾಲೆ ಹಾಕಿದ ಹರಿ | ನರಸಿಂಹನೆ ನಮ್ಮ ಮನೆದೈವ ||೧೯||
ಅಚ್ಯುತಾನಂತನೆ ಸಚ್ಚಿದಾನಂದನೆ | ಮಚ್ಚಾವತಾರದಿ ನಲಿದನೆ |
ಮಚ್ಚಾವತಾರದಿ ನಲಿದನೆ ನರಹರಿ | ಅಚ್ಯುತ ನಮ್ಮ ಮನೆದೈವ ||೨೦||
ಜಾನಕಿರಮಣನೆ ದಾನವಾಂತಕನೆ | ದೀನರಕ್ಷಕ ಸಲಹಯ್ಯ |
ದೀನರಕ್ಷಕ ಸಲಹಯ್ಯ ನರಹರಿ | ಜನಾರ್ದನ ನಮ್ಮ ಮನೆದೈವ ||೨೧||
ಅಪರಿಮಿತ ಮಹಿಮನೆ ವಿಪರೀತ ಚರಿತನೆ | ಗುಪಿತ ವೇಷಗಳ ತಾಳಿದನೆ
ಗುಪಿತ ವೇಷಗಳ ತಾಳಿದ ನರಹರಿ | ಉಪೇಂದ್ರ ನಮ್ಮ ಮನೆದೈವ ||೨೩||
ಹರನ ಭಸ್ಮಾಸುರನು ಮರಳಿ ಬೆನ್ಹತ್ತಲು | ತರುಣಿ ರೂಪವನು ತಾಳಿದನೆ |
ತರುಣಿ ರೂಪವನು ತಾಳಿದ ನರಹರಿ | ಶ್ರೀಹರಿಯೆ ನಮ್ಮ ಮನೆದೈವ ||೨೩||
ಕೃಷ್ಣಾವತಾರದಲಿ ದುಷ್ಟರ ಗೆಲಿದನೆ | ವೃಷ್ಣಿಯರ ಕುಲ ತಿಲಕನೆ |
ವೃಷ್ಣಿಯರ ಕುಲ ತಿಲಕನೆ ನರಹರಿ | ಶ್ರೀ ಕೃಷ್ಣನೆ ನಮ್ಮ ಮನೆದೈವ ||೨೪||
ಇಪ್ಪತ್ತು ನಾಲ್ಕು ನಾಮಂಗಳ ಪಾಡುವೆನು | ಅಪ್ಪ ಕೇಶವನ ಚರಿತೆಯನು |
ಅಪ್ಪ ಕೇಶವನ ಚರಿತೆಯನು ಪಾಡಲು | ಒಪ್ಪಿಸಿಕೊಳ್ಳುವ ಹಯವದನ ||೨೫||
raMga bAro narasiMga bAro ||pa||
aMgajanayya kOnEri timma raMga bAro ||a.pa.||
sAsira mUruti vAsavavaMdyane | sAsira nAmadoDeyane |
sAsira nAmadoDeyane narahari | kESava namma manedaiva ||1||
vAraNa vaMdyane kAruNya rUpane | purANagaLalli pogaLuva |
purANagaLalli pogaLuva narahari | nArAyaNa namma manedaiva ||2||
yAdavakuladalli sAdhugaLarasane | bhEdisi danujara gelidane |
bhEdisi danujara gelidane narahari | mAdhava namma manedaiva ||3||
dEvEMdra maLegareye gOvardhana giriyetti | A giriya SrIkRuShNa koDemADi |
A giriya SrIkRuShNa koDemADi kAyidane | gOviMda namma manedaiva ||4||
sRuShTige kartane duShTa kaMsana gelidu | SiShTa paripAlanenisida |
SiShTa paripAlanenisida narahari | viShNuve namma manedaiva ||5||
madhuveMbo daityana mudadiMda gelidane | vidurana maneyali naliduMDa |
vidurana maneyali naliduMDa narahari | madhusUdana namma manedaiva ||6||
cakrava piDidane bhUcakrava gelidane | akrUranoDane madhurege |
akrUranoDane madhurege pOda | tri-vikrama namma manedaiva ||7||
sAmavanOdutta dAnava bEDutta | nAmada mahime pogaLutta |
nAmada mahime pogaLutta narahari | vAmana namma manedaiva ||8||
SrIdhara enisida SrIvatsa lAMCana | SrIdhara gOpItanayane |
SrIdhara gOpItanayane narahari | SrIdhara namma manedaiva ||9||
RuShijana vaMdyane bisajanAbhane dEva | RuShijanarigella abhayava |
RuShi janarigella abhayava koDuvOne | hRuShikESane namma manadaiva ||10||
paduma saMbhavapita paduma dAmOdara | padumadiMdabhayava koDuvOne |
padumadiMdabhayava koDuvOne narahari | padumanAbhane namma manedaiva ||11||
nAmada mahimeya prEmadi pogaLalu | kAmitArthagaLa koDuvOne |
kAmitArthagaLa koDuvOne narahari | dAmOdara namma manedaiva ||12||
saMkaTagaLa tarivOne paMkajanAbhane | SaMke illada asurara |
SaMke illada asurara saMharisida | saMkarShaNa namma manedaiva ||13||
vasudEva tanayane SiSupAlana gelidane | vaSava mADideyo tripurara |
vaSava mADideyo tripurara narahari | vAsudEva namma manedaiva ||14||
Suddha svarUpane Suddha bhaktaranu salahayya | haddu vAhananAda dEvane |
haddu vAhananAda dEvane narahari | pradyumna namma manedaiva ||15||
vanajalOcana hari vinaya uLLavane | dhvanikELi baMdu kubujeya |
dhvanikELi baMdu kubujeya narahari | aniruddha namma manedaiva ||16||
pArijAtada hUva nArige ittane | vIra dAnavara gelidane |
vIra dAnavara gelidane narahari | puruShOttama namma manedaiva ||17||
akShayapadavIva pakShivAhana svAmi | kukShiyoLIrELu bhuvanava |
kukShiyoLIrELu bhuvanavanALida narahari a | dhOkShaja namma manedaiva ||18||
narakAsurana koMdu hiraNyana mardisi | karuLa bagedu vanamAle hAki |
karuLa bagedu vanamAle hAkida hari | narasiMhane namma manedaiva ||19||
achyutAnaMtane saccidAnaMdane | maccAvatAradi nalidane |
maccAvatAradi nalidane narahari | achyuta namma manedaiva ||20||
jAnakiramaNane dAnavAMtakane | dInarakShaka salahayya |
dInarakShaka salahayya narahari | janArdana namma manedaiva ||21||
aparimita mahimane viparIta caritane | gupita vEShagaLa tALidane
gupita vEShagaLa tALida narahari | upEMdra namma manedaiva ||23||
harana bhasmAsuranu maraLi benhattalu | taruNi rUpavanu tALidane |
taruNi rUpavanu tALida narahari | SrIhariye namma manedaiva ||23||
kRuShNAvatAradali duShTara gelidane | vRuShNiyara kula tilakane |
vRuShNiyara kula tilakane narahari | SrI kRuShNane namma manedaiva ||24||
ippattu nAlku nAmaMgaLa pADuvenu | appa kESavana cariteyanu |
appa kESavana cariteyanu pADalu | oppisikoLLuva hayavadana ||25||

Leave a Reply
You must be logged in to post a comment.