Composer : Shri Vadirajaru
ಜಯ ಇನ ಕುಲೋದ್ಧರಣ ಜಯ ಮುನಿಕೃತ ಶರಣ
ಜಯ ದನುಜ ವಿದಾರಣ ಜಯ ತಮಹರಣ ||ಜಯ ಜಯ||
ಈ ಮುದ್ದು ಮುಖವೊ ಮತ್ತೆ ತನುವಿನ ಕಾಂತಿ
ಈ ಬಿಲ್ಲು ಈ ಬಾಣ ನಿಂತ ಭಾವ
ಈ ತನುವು ಈ ರಾಣಿ ಈ ಬಂಟ ಈ ಭಾಗ್ಯ
ಆವ ದೇವರಿಗುಂಟು ಮೂಲೋಕದೊಳಗೆ /೧/ಜಯ ಜಯ
ಧರೆಯೊಳು ಅತಿಭಾರವನು ಇಳುಹಿ ಕಮಲಜ ಮುಖ್ಯ
ಸುರರ ಮೊರೆಯನು ಕೇಳ್ದು ನರರೂಪ ತಾಳ್ದು
ದಶರಥನ ಗರ್ಭದಲಿ ಜನಿಸಿ ಮುನ್ನ ಮುನಿಯ
ಮನೋರಥವ ತಾ ಕಾಯ್ದ ಪುಣ್ಯಚರಿತ /೨/ಜಯ ಜಯ
ದೇವರ್ಗಳು ಹರುಷದಲಿ ಹೂಮಳೆಯಗರೆಯೆ
ಭೂಮಿಜೆಯ ಸಹಿತ ಸೌಮಿತ್ರಿಯೊಡಗೂಡಿ
ನೇಮದಿಂ ಅಯೋಧ್ಯ ಪುರದಿ ಸುಖದಲ್ಲಿರ್ದ
ಸ್ವಾಮಿ ಶ್ರೀ ಹಯವದನ ರಘುಕುಲ ತಿಲಕ /೩/ಜಯ ಜಯ
jaya ina kulOddharaNa jaya munikRuta sharaNa
jaya danuja vidAraNa jaya tamaharaNa ||jaya jaya||
I muddu muKavo matte tanuvina kAMti
I billu I bANa niMta bhAva
I tanuvu I rANi I baMTa I bhAgya
Ava dEvariguMTu mUlOkadoLage /1/jaya jaya
dhareyoLu atibhAravanu iLuhi kamalaja muKya
surara moreyanu kELdu nararUpa tALdu
dasharathana garbhadali janisi munna muniya
manOrathava tA kAyda puNyacarita /2/jaya jaya
dEvargaLu haruShadali hUmaLeyagareye
bhUmijeya sahita saumitriyoDagUDi
nEmadiM ayOdhya puradi suKadallirda
svAmi shrI hayavadana raghukula tilaka /3/jaya jaya
Leave a Reply