Sankshipta Ramayana

Composer : Shri Harapanahalli Bheemavva

By Smt.Shubhalakshmi Rao

ಕಂದನೆಂದೆನಿಸಿದ ಕೌಸಲ್ಯ ದೇವಿಗೆ ರಾಮ ಎನಬಾರದೆ
ಇಂದಿರಾಪತಿ ರಾಮಚಂದ್ರಗೆ ಶ್ರೀರಘುರಾಮ ಎನಬಾರದೆ ||೧||

ಶಿಶುವಾಗಿ ಅವತಾರ ಮಾಡಿ ದಶರಥನಲಿ ರಾಮ ಎನಬಾರದೆ
ಋಷಿಯಜ್ಞ ಸಲಹಿ ರಕ್ಕಸರನೆ ಕೊಂದ ಶ್ರೀರಾಮ ಎನಬಾರದೆ ||೨||
ಶ್ರೀರಾಮ ಎನಬಾರದೆ

ನೀಟಾಗಿ ನೆನೆ ಭಾನು ಕೋಟಿ ತೇಜ ಶ್ರೀರಾಮ ಎನಬಾರದೆ
ಸಾತ್ವಿಕ ದೈವವೆ ತಾಟಕಾಂತಕ ಶ್ರೀರಾಮ ಎನಬಾರದೆ ||೩||

ಪಾದ ನಖವು ಸೋಕಿ ಪಾಪ ನಾಶನವಾಗೆ ರಾಮ ಎನಬಾರದೆ
ಶ್ರೀಪತಿ ಕರುಣದಿ ಶಿಲೆಯು ಸ್ತ್ರೀಯಾಗಲು ರಾಮ ಎನಬಾರದೆ ||೪||
ಶ್ರೀರಾಮ ಎನಬಾರದೆ

ಸಕಲ ಸದ್ಗುಣ ಪೋಗಿ ಮಿಥಿಲಾ ಪಟ್ಟಣದಲ್ಲಿ ರಾಮ ಎನಬಾರದೆ
ತ್ರಿಪುರ ಸಂಹಾರ ತ್ರಿನೇತ್ರನ ಧನುವೆತ್ತಿ ರಾಮ ಎನಬಾರದೆ ||೫||

ಚೆಲ್ವ ಜಾನಕಿ ಮಲ್ಲಿಗೆಯ ವನಮಾಲೆಯು ರಾಮ ಎನಬಾರದೆ
ವಲ್ಲಭಗ್ಹಾಕಲು ಪುಲ್ಲಲೋಚನೆ ಸೀತಾರಾಮ ಎನಬಾರದೆ ||೬||
ಸೀತಾರಾಮ ಎನಬಾರದೆ

ಮಂಗಳ ಮಹಿಮೆ ಸೀತಾಂಗನೆ ಕೊರಳಿಗೆ ರಾಮ ಎನಬಾರದೆ
ಮಾಂಗಲ್ಯ ಬಂಧನ ಮಾಡಿದ ಮಹಾತ್ಮನು ರಾಮ ಎನಬಾರದೆ ||೭||

ಜಗದೇಕ ಸುಂದರಿ ಜಾನಕಿಯನೆ ಗೆದ್ದ ರಾಮ ಎನಬಾರದೆ
ಜಗದೀಶ ಜನಕಗೆ ಜಾಮಾತನೆನಿಸಿದೆ ರಾಮ ಎನಬಾರದೆ ||೮||

ಮುದ್ದು ಜಾನಕಿ ಕೂಡಿ ಅಯೋಧ್ಯಕೆ ಬರುತಿರೆ ರಾಮ ಎನಬಾರದೆ
ಮಧ್ಯ ಮಾರ್ಗದಿ ಬಂದಿದ್ದನು ಭಾರ್ಗವ ರಾಮ ಎನಬಾರದೆ ||೯||

ತನ್ನ ತಾನೇ ಗೆದ್ದು ಧನ್ಯನೆಂದೆನಿಸಿದ ರಾಮ ಎನಬಾರದೆ
ಬ್ರಹ್ಮ ಶಂಕರರಿಂದಿನ್ನು ಉತ್ತಮನಾದ ರಾಮ ಎನಬಾರದೆ ||೧೦||
ಶ್ರೀರಾಮ ಎನಬಾರದೆ

ಪಟ್ಟಗಟ್ಟಲು ಪರಮೋತ್ಸವ ಕಾಲಕ್ಕೆ ರಾಮ ಎನಬಾರದೆ
ದುಷ್ಟ ಕೈಕೆಯಿ ನಿಷ್ಠೂರ್ವೊಚನವ ಕೇಳಿದ ರಾಮ ಎನಬಾರದೆ ||೧೧||

ಅಲಕುಮಿ ಮಾತಲಕ್ಷ್ಯವ ಮಾಡದೆ ಶ್ರೀ ರಾಮ ಎನಬಾರದೆ
ಲಕ್ಷ್ಮಣ ಲಕ್ಷ್ಮಿ ಕೂಡಿ ವನವಾಸ ತಿರುಗಿದ ರಾಮ ಎನಬಾರದೆ ||೧೨||
ಸೀತಾರಾಮ ಎನಬಾರದೆ

ಸೋಸಿಲಿಂದಲಿ ಸತಿ ಆದೇನೆಂದಸುರೆಯ ರಾಮ ಎನಬಾರದೆ
ನಾಶರಹಿತ ಕಿವಿ ನಾಸಿಕನಳಿದ ಶ್ರೀ ರಾಮ ಎನಬಾರದೆ ||೧೩||

ದಂಡಕಾರಣ್ಯದಿ ಕಂಡು ಮಾರೀಚನ್ನ ರಾಮ ಎನಬಾರದೆ
ಹಿಂದ್ ಹೋಗೆ ರಾಘವ ಬಂದು ರಾವಣನಲ್ಲಿ ರಾಮ ಎನಬಾರದೆ ||೧೪||

ಘಾತಕ ರಾವಣ ಜಗನ್ ಮಾತೆನೊಯ್ಯಲು ರಾಮ ಎನಬಾರದೆ
ಸೋತು ಜಟಾಯು ಯುದ್ಧವ ಮಾಡಿ ತಾ ಬೀಳಲು ರಾಮ ಎನಬಾರದೆ ||೧೫||

ಒಲಿದು ಸುಗ್ರೀವಗೆ ವಾಲಿ ವಧೆ ಮಾಡಿ ರಾಮ ಎನಬಾರದೆ
ವಾನರಗಳ ಕೂಡಿ ವಾರಿಧಿ ಕಟ್ಟಿದ ರಾಮ ಎನಬಾರದೆ||೧೬||
ಶ್ರೀರಾಮ ಎನಬಾರದೆ

ಲೋಕ ಮಾತೆಯ ಲಂಕಾ ನಾಥ ತಾ ಒಯ್ದಾಗ ರಾಮ ಎನಬಾರದೆ
ಸೀತಾಕೃತಿಯನಿಟ್ಟಶೋಕ ವನದೊಳು ರಾಮ ಎನಬಾರದೆ ||೧೭||

ಮಂಡೋದರಿಯ ಗಂಡನ್ನ ದಶ ಶಿರಗಳ ರಾಮ ಎನಬಾರದೆ
ಚೆಂಡನಾಡಿದ ಕೋದಂಡ ಪಾಣಿಯ ಶ್ರೀರಾಮ ಎನಬಾರದೆ ||೧೮||
ಕೋದಂಡರಾಮ ಎನಬಾರದೆ

ಪ್ರೀತಿಯಿಂ ವಿಭೀಷಣಗೆ ಪಟ್ಟವ ಗಟ್ಟಿದ ರಾಮ ಎನಬಾರದೆ
ಸೀತಾ ಸಮೇತನಾಗಿ ಸಿಂಧು ದಾಟಿದ ರಾಮ ಎನಬಾರದೆ ||೧೯||

ಆದಿ ಲಕ್ಷುಮಿ ಕೂಡಿ ಅಯೋಧ್ಯಕ್ಕೆ ಬರುತಿರೆ ರಾಮ ಎನಬಾರದೆ
ಶ್ರೀದೇವಿ ಸಹಿತ ಪಟ್ಟಣ ಹೊಕ್ಕ ಪಟ್ಟಾಭಿರಾಮ ಎನಬಾರದೆ||೨೦||

ಭರತ ಸುಮಿತ್ರ ಕೌಸಲ್ಯಗೆ ಸುಖವಿಟ್ಟ ರಾಮ ಎನಬಾರದೆ
ಮುಕ್ತಿ ದಾಯಕ ಮುಂದೆ ಬಿಡದೆ ಕಾಪಾಡುವ ರಾಮ ಎನಬಾರದೆ||೨೧||

ಪತ್ನಿ ವಾರ್ತೆಯ ತಂದ ಪವನ ಸುತಗೆ ಒಲಿದ ರಾಮ ಎನಬಾರದೆ
ಸತ್ಯ ಲೋಕದ ಆಧಿಪತ್ಯವ ಕೊಟ್ಟ ಶ್ರೀ ರಾಮ ಎನಬಾರದೆ||೨೨||
ಶ್ರೀ ರಾಮ ಎನಬಾರದೆ

ರಾಮ ರಾಮನು ಎಂದು ಕರೆಯೇ ಭಕ್ತಿಯ ರಾಮ ಎನಬಾರದೆ
ಪ್ರೇಮದಿ ತನ್ನ ನಿಜಧಾಮವ ಕೊಡುವೋನು ರಾಮ ಎನಬಾರದೆ ||೨೩||

ಅರಸನಾಗಯೋಧ್ಯೆಯನಾಳಿ ಯದುಕುಲದಲ್ಲಿ ರಾಮ ಎನಬಾರದೆ
ಹರುಷದಿ ಭೀಮೇಶ ಕೃಷ್ಣನಾಗ್ಯುದಿಸಿದ ರಾಮ ಎನಬಾರದೆ ||೨೪||
ಶ್ರೀ ರಾಮ ಎನಬಾರದೆ


kaMdaneMdenisida kausalya dEvige rAma enabArade
iMdirApati rAmacaMdrage SrIraGurAma enabArade |1|

SiSuvAgi avatAra mADi daSarathanali rAma enabArade
RuShiyaj~ja salahi rakkasarane koMda SrIrAma enabArade |2|
SrIrAma enabArade

nITAgi nene BAnu kOTi tEja SrIrAma enabArade
sAtvika daivave tATakAMtaka SrIrAma enabArade |3|

pAda naKavu sOki pApa nASanavAge rAma enabArade
SrIpati karuNadi Sileyu strIyAgalu rAma enabArade |4|
SrIrAma enabArade

sakala sadguNa pOgi mithilA paTTaNadalli rAma enabArade
tripura saMhAra trinEtrana dhanuvetti rAma enabArade |5|

celva jAnaki malligeya vanamAleyu rAma enabArade
vallaBag hAkalu pullalOcane sItArAma enabArade |6|
sItArAma enabArade

maMgaLa mahime sItAMgane koraLige rAma enabArade
mAMgalya baMdhana mADida mahAtmanu rAma enabArade |7|

jagadEka suMdari jAnakiyane gedda rAma enabArade
jagadISa janakage jAmAtaneniside rAma enabArade |8|

muddu jAnaki kUDi ayOdhyake barutire rAma enabArade
madhya mArgadi baMdiddanu BArgava rAma enabArade |9|

tanna tAnE geddu dhanyaneMdenisida rAma enabArade
brahma SaMkarariMdinnu uttamanAda rAma enabArade |10|
SrIrAma enabArade

paTTagaTTalu paramOtsava kAlakke rAma enabArade
duShTa kaikeyi niShThUrvocanava kELida rAma enabArade |11|

alakumi mAtalakShyava mADade shrI rAma enabArade
lakShmaNa lakShmi kUDi vanavAsa tirugida rAma enabArade |12|
sItArAma enabArade

sOsiliMdali sati AdEneMdasureya rAma enabArade
nASarahita kivi nAsikanaLida SrI rAma enabArade |13|

daMDakAraNyadi kaMDu mArIcanna rAma enabArade
hiMd hOge rAGava baMdu rAvaNanalli rAma enabArade |14|

GAtaka rAvaNa jagan mAtenoyyalu rAma enabArade
sOtu jaTAyu yuddhava mADi tA bILalu rAma enabArade |15|

olidu sugrIvage vAli vadhe mADi rAma enabArade
vAnaragaLa kUDi vAridhi kaTTida rAma enabArade |16|
SrIrAma enabArade

lOka mAteya laMkA nAtha tA oydAga rAma enabArade
sItAkRutiyaniTTaSOka vanadoLu rAma enabArade |17|

maMDOdariya gaMDanna daSa SiragaLa rAma enabArade
ceMDanADida kOdaMDa pANiya SrIrAma enabArade |18|
kOdaMDarAma enabArade

prItiyiM viBIShaNage paTTava gaTTida rAma enabArade
sItA samEtanAgi siMdhu dATida rAma enabArade |19|

Adi lakShumi kUDi ayOdhyakke barutire rAma enabArade
SrIdEvi sahita paTTaNa hokka paTTABirAma enabArade |20|

Barata sumitra kausalyage suKaviTTa rAma enabArade
mukti dAyaka muMde biDade kApADuva rAma enabArade |21|

patni vArteya taMda pavana sutage olida rAma enabArade
satya lOkada Adhipatyava koTTa SrI rAma enabArade |22|
SrI rAma enabArade

rAma rAmanu eMdu kareyE Baktiya rAma enabArade
prEmadi tanna nijadhAmava koDuvOnu rAma enabArade |23|

arasanAgayOdhyeyanALi yadukuladalli rAma enabArade
haruShadi BImESa kRuShNanAgyudisida rAma enabArade |24|
SrI rAma enabArade

Leave a Reply

You might also like

error: Content is protected !!