Composer : Shri Mahipati dasaru
ಉಧೋ ಉಧೋ ಉಧೋ ಉಧೋ |
ಉಧೋ ಯನ್ನಲು ಉಧೋ ಮುದೋ [ಪ]
ತಮ್ಮನು ಪೊಗಳಾಪೆ-ನಮೊಮ್ಮಾ |
ಬೊಮ್ಮನ ಪಡೆದಿಹ ಜಗದಮ್ಮಾ |
ಸುಮ್ಮನೆ ಹೊಂದಿಹ ಬಾಲಕ ನಿಮ್ಮಾ |
ಝಮ್ಮನೆ ಸ್ಮರಣೆಗೆ ಬಾರಮ್ಮಾ [೧]
ಛಂದ ವಿವೇಕದ ಚೌಡಕಿ ಹಿಡಿದು |
ಒಂದೇ ನಿಷ್ಠೆಯ ತಂತಿಯ ಬಿಗಿದು |
ಸುಂದರ ಭಕ್ತಿಯ ರಂಗಕ ಬಂದು |
ಗೊಂದಳ ಹಾಕುವೆ ನಾನಿಂದು [೨]
ನಾಮಾವಳಿ ಕವಡೆಯ ಸರಥರಿಸಿ |
ಪ್ರೇಮದ ಬಂಡಾರವ ಸುರಿಸಿ |
ಆ ಮಹಾ ಜ್ಞಾನದ ಪೊತ್ತ ಪ್ರಜ್ವಲಿಸಿ |
ನಾಮ ಗೆಜ್ಜಿಲಿ ಕುಣಿವೆನು ಘಲಿಸಿ [೩]
ಆವನಿಯ ಸುಜನರ ಮೊರೆಯನು ಕೇಳಿ |
ಅವತಾರವ ಹೊಸ ಪರಿ ತಾಳಿ |
ಭವ ಮಹಿಷಾಸುರ ನಸುವನು ಹೋಳಿ |
ಜವದಲಿ ಮಾಡಿದೆ ತನುಶೀಳಿ [೪]
ಮುನಿ ಮಾನಸ ತುಳಜಾಪೂರ ಗೇಹಿ |
ಖೂನದೊರಿಸೀ ನಿಜ ಸೋಹೀ |
ಏನೇ ನರಿಯದವನೆಂದರಿತು ಕಾಯೀ |
ಘನಗುರು ಮಹಿಪತಿ ವರದಾಯಿ [೫]
udhO udhO udhO udhO |
udhO yannalu udhO mudO [pa]
tammanu pogaLApe-namommA |
bommana paDediha jagadammA |
summane hoMdiha bAlaka nimmA |
Jammane smaraNege bArammA [1]
CaMda vivEkada cauDaki hiDidu |
oMdE niShTheya taMtiya bigidu |
suMdara Baktiya raMgaka baMdu |
goMdaLa hAkuve nAniMdu [2]
nAmAvaLi kavaDeya saratharisi |
prEmada baMDArava surisi |
A mahA j~jAnada potta prajvalisi |
nAma gejjili kuNivenu Galisi [3]
Avaniya sujanara moreyanu kELi |
avatArava hosa pari tALi |
Bava mahiShAsura nasuvanu hOLi |
javadali mADide tanuSILi [4]
muni mAnasa tuLajApUra gEhi |
KUnadorisI nija sOhI |
EnE nariyadavaneMdaritu kAyI |
Ganaguru mahipati varadAyi [5]
Leave a Reply