-
Udho Udho
Composer : Shri Mahipati dasaru ಉಧೋ ಉಧೋ ಉಧೋ ಉಧೋ |ಉಧೋ ಉಧೋ ಯನ್ನಲು ಉಧೋ ಮುದೋ [ಪ] ತಮ್ಮನು ಪೊಗಳಾಪೆ-ನಮಮ್ಮಾ |ಬೊಮ್ಮನ ಪಡೆದಿಹ ಜಗದಮ್ಮಾ |ಸುಮ್ಮನೆ ಹೊಂದಿಹ ಬಾಲಕ ನಿಮ್ಮಾ |ಝಮ್ಮನೆ ಸ್ಮರಣೆಗೆ ಬಾರಮ್ಮಾ [೧] ಛಂದ ವಿವೇಕದ ಚೌಡಕಿ ಹಿಡಿದು |ಒಂದೇ ನಿಷ್ಠೆಯ ತಂತಿಯ ಬಿಗಿದು |ಸುಂದರ ಭಕ್ತಿಯ ರಂಗಕೆ ಬಂದು |ಗೊಂದಳ ಹಾಕುವೆ ನಾನಿಂದು [೨] ನಾಮಾವಳಿ ಕವಡೆಯ ಸರಧರಿಸಿ |ಪ್ರೇಮದ ಬಂಡಾರವ ಸುರಿಸಿ |ಆ ಮಹಾ ಜ್ಞಾನದ ಪೊತ್ತ ಪ್ರಜ್ವಲಿಸಿ…
