Composer : Shri Vijayadasaru
ಕೈಲಾಸವಾಸ ಗೌರೀಶ ಈಶಾ ||ಪ||
ತೈಲಧಾರೆಯಂತೆ ಮನಸು ಕೊಡೋ ಹರಿಯಲ್ಲಿ ಶಂಭೋ ||ಅ.ಪ||
ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೊ ಮಹದೇವನೇ |
ಅಹಿ ಭೂಷಣನೆ ಯೆನ್ನ ಅವಗುಣಗಳೆಣಿಸದಲೆ
ವಿಹಿತ ಧರ್ಮದಿ ವಿಷ್ಣು ಭಕುತಿಯನೆ ಕೊಡು ಶಂಭೋ ||೧||
ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೇ |
ದನುಜಗಜ ಮದವೈರಿ ದಂಡ ಪ್ರಣಾಮವ ಮಾಳ್ಪೆ
ಮಣಿಸೊ ಈ ಶಿರವ ಸಜ್ಜನ ಚರಣ ಕಮಲದಲಿ ಶಂಭೋ ||೨||
ಭಾಗೀರಥೀಧರನೇ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೋ ಸಂತತ ಶರ್ವ ದೇವಾ |
ಭಾಗವತ ಜನಪ್ರೀಯ ವಿಜಯ ವಿಟ್ಠಲನಂಘ್ರಿ
ಜಾಗುಮಾಡದೆ ಭಜಿಪ ಭಾಗ್ಯವನೆ ಕೊಡು ಶಂಭೋ ||೩||
kailAsavAsa gaurISa ISA ||pa||
tailadhAreyaMte manasu koDO hariyalli SaMBO ||a.pa||
ahOrAtriyali nAnu anucarAgraNiyAgi
mahiyoLage carisideno mahadEvanE |
ahi BUShaNane yenna avaguNagaLeNisadale
vihita dharmadi viShNu Bakutiyane koDu SaMBO ||1||
manasu kAraNavalla pApa puNyakkella
analAkSha ninna prEraNeyilladE |
danujagaja madavairi daMDa praNAmava mALpe
maNiso I Sirava sajjana caraNa kamaladali SaMBO ||2||
BAgIrathIdharanE Bayava pariharisayya
lEsAgi nI salahO saMtata Sarva dEvA |
BAgavata janaprIya vijaya viTThalanaMGri
jAgumADade Bajipa BAgyavane koDu SaMBO ||3||
Leave a Reply