Composer : Shri Gopala dasaru on Shri Vadirajaru
ವಾದಿರಾಜ ಮುನಿಪಾ ಹಯಮುಖ
ಪಾದಕಮಲ ಮಧುಪಾ [ ಪ ]
ನೀ ದಯದಲಿ ತವ ಪಾದ ಧ್ಯಾನವನು
ಆದರದಲಿ ಕೊಟ್ಟಾದರಿಸೆನ್ನನು [ಅ.ಪ ]
ಮೂಷಕ ಬಿಲದಿಂದ ಉದರಪೋಷಕ ಬರಲಂದು
ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ
ಕ್ಲೇಶ ಕಳೆದು ಸಂತೋಷಗೈಸಿದೆ [ ೧ ]
ಮುಂದೆ ಭೂತನರನಾ ಪ್ರೇರಿಸಿ ಹಿಂದೆ-ವೊಬ್ಬ ನರನಾ
ನಿಂದಿರಿಸಿದೆ ಆನಂದದಿಂದ ಜನ
ವೃಂದ ನೋಡುತಿರೆ ಅಂದಣ ನಡಿಸಿದ್ಯೋ [ ೨ ]
ಕ್ಷಿತಿಯೊಳು ಸತಿ ತನ್ನಾ ವಲ್ಲಭ
ಮೃತಿಯೈದಿರೆ ಮುನ್ನಾ
ಅತಿಶೋಕದಿ ಬಂದು ನುತಿಸಲು ಆ
ಪತಿಯನು ಬದುಕಿಸಿ ಹಿತದಿ ರಕ್ಷಿಸಿದೆ [ ೩ ]
ನರಪತಿ ವ್ಯಾಧಿಯಲಿ ಬಳಲ್ವದ
ತ್ವರಿತದಿ ನೀ ಕೇಳಿ
ಹರುಷದಿ ವ್ಯಾಧಿಯ ಪರಿಹರಿಸ್ಯವನಿಗೆ
ಹರುಷದಿಂದಲಭಯವ ತೋರಿದೆಯೊ [ ೪ ]
ಶಾಸ್ತ್ರ ಪ್ರಸಂಗದಲಿ ನಾರಾಯಣ ಭೂತರ ಗೆಲಿದಿಲ್ಲಿ
ಆತುರದಿಂದಲಿ ಮಾತನಾಡಿದ ಶ್ರೀ
ನಾಥನ ಮೂರ್ತಿಯ ಪ್ರೀತಿಲಿ ತರಿಸಿದೆ [ ೫ ]
ತುರಗವದನ ಪಾದಾ ಭುಜದಲಿ ಧರಿಸಿಕೊಂಡ ಮೋದ
ಭರಿತರಾಗಿ ಹಯಗೊರಳ ಮಡ್ಡಿ ತವ
ಕರದಿಂದುಣಿಸಿದ ಗುರುವರ ಶುಖಕರ [ ೬ ]
ಆ ಮಹಾ ಗೋಪಾಲವಿಠ್ಠಲನ ಪದಯುಗ ತಾಮರಸಗಳನ್ನ
ಪ್ರೇಮದಿ ಭಜಿಸುವ ಧೀಮಂತರಿಗೆ
ಸುಕಾಮಿತವನು ಕೊಟ್ಟಾ ಮುನಿಪಗೇ [೭]
vAdirAja munipA hayamuKa
pAdakamala madhupA [ pa ]
nI dayadali tava pAda dhyAnavanu
Adaradali koTTAdarisennanu [a.pa ]
mUShaka biladiMda udarapOShaka baralaMdu
vAsuki Bayadi nimmAsanadeDe bare
klESa kaLedu saMtOShagaiside [ 1 ]
muMde BUtanaranA prErisi hiMde-vobba naranA
niMdiriside AnaMdadiMda jana
vRuMda nODutire aMdaNa naDisidyO [ 2 ]
kShitiyoLu sati tannA vallaBa
mRutiyaidire munnA
atiSOkadi baMdu nutisalu A
patiyanu badukisi hitadi rakShiside [ 3 ]
narapati vyAdhiyali baLalvada
tvaritadi nI kELi
haruShadi vyAdhiya pariharisyavanige
haruShadiMdalaBayava tOrideyo [ 4 ]
SAstra prasaMgadali nArAyaNa BUtara gelidilli
AturadiMdali mAtanADida SrI
nAthana mUrtiya prItili tariside [ 5 ]
turagavadana pAdA Bujadali dharisikoMDa mOda
bharitarAgi hayagoraLa maDDi tava
karadiMduNisida guruvara SuKakara [ 6 ]
A mahA gOpAlaviThThalana padayuga
tAmarasagaLanna
prEmadi bhajisuva dhImaMtarige
sukAmitavanu koTTA munipagE [7]

Leave a Reply
You must be logged in to post a comment.