Composer : Shri Vijaya dasaru on Shri Vadirajaru
ಗುರು ರಾಜರಿರುವ ಸಂಭ್ರಮ ನೋಡೆ ರಾಜವದನೆ ನೀ [ಪ]
ರಾಜಿಸುವ ವಾಜಿ ವದನನ ಪೂಜಿಸುವ ಯತಿವರನೆ [ಅ.ಪ]
ದೂಷಿಪ ದುರ್ಜನರ
ತಾಸು ಬಾಳದಂತೆ ಮಾಡುವವನೇ
ವಿಶೇಷದಿಂದ ಭಜಿಸುವರ
ಪೋಷಿಸುವ ಯತಿವರನೆ [೧]
ಪಾದ ನಂಬಿದವರಿಗೆ
ಮೋದವೀವ ದೇವನೆ
ಬೀದಿ ಬಿಡುವ ನಂಬದವರ
ವಾದಿರಾಜ ದೊರೆವರನೆ [೨]
ಅಜಪದಕೆ ಅರ್ಹನೆಂದು
ಗಜವರದನ ದಾಸನೆಂದು
ಭಜನೆ ಮಾಡುವ ನಿಜವ ಪೇಳುವ
ವಿಜಯವಿಠ್ಠಲನ ಸೇವಕರಿವರೇ [೩]
guru rAjariruva saMBrama nODe rAjavadane nI [pa]
rAjisuva vAji vadanana pUjisuva yativarane [a.pa]
dUShipa durjanara
tAsu bALadaMte mADuvavanE
viSEShadiMda Bajisuvara
pOShisuva yativarane [1]
pAda naMbidavarige
mOdavIva dEvane
bIdi biDuva naMbadavara
vAdirAja dorevarane [2]
ajapadake arhaneMdu
gajavaradana dAsaneMdu
Bajane mADuva nijava pELuva
vijayaviThThalana sEvakarivarE [3]

Leave a Reply
You must be logged in to post a comment.