Composer : Shri Tande venkatesha vittala on Shri Vadirajaru
ವಾದಿರಾಜರ ಭಜಿಸಿರೋ [ಪ]
ವಾದಿರಾಜರ ಭಜಿಸಿ ಮೋದಮಪ್ಪುದು ನಿಮಗೆ
ಮೋದಮುನಿ ದರ್ಶನ ಸುಭೋಧವಾಗುವುದಹಿತ
ಬಾಧೆ ತಪ್ಪಿಸಿ ವೇದವಾದೋದಿತನ ಪದ್ಮಪಾದ ಯುಗ್ಮವ ತೋರುವ [ಅ]
ಪೂವಿನಾಕರದ ದ್ವಿಜದೇವ ರಾಮನು ಗೌರಿ
ದೇವಿಯುದರದಿ ಶಾರ್ವರೀ ವತ್ಸರದಿ ಮೌನಿ
ದೇವ ವಾಗೀಶರ ಶುಭಾವಹಾಣತಿಯಂತೆ ಭೂವರಾಹಾಖ್ಯದಿ ಜನ್ಮಿಸಿ,
ಕೋವಿದೋತ್ತಮ ಹಯಗ್ರೀವ ಪದಸಂಸಕ್ತ
ಭಾವ ಭವಿಷ್ಯದ್ವಾಯು ಶ್ರೀವಾದಿರಾಜಯತಿ
ಭಾವುಕಾಬ್ಜಾಮಲ ವಿಭಾವಸೋದ್ಧಾಮಕವಿ ಶ್ರೀವ್ಯಾಸರಲಿ ಓದಿದ [೧]
ಸೋದೆಯೊಳು ಶ್ರೀಮಾಧ್ವ ವೇದ ಪೀಠವನೇರಿ
ಸಾಧುಸಂಸೇವ್ಯ ಪ್ರತಿವಾದಿ ನಿಗ್ರಹಶೀಲ
ಈ ಧರಾವಲಯ ಮರುನಾದಗುಡೆ ಕೀರ್ತಿಯ ಮಹೋದಧಿಯ ಘೋಷದಿಂದ
ಬಾದರಾಯಣರ ಸಿರಿಪಾದದಲಿ ಪಂಚಮೋ
ವೇದಕ್ಕೆ ವ್ಯಾಖ್ಯಾನವಾದ ಲಕ್ಷಾಭರಣ
ಮೋದದಿಂದರ್ಪಿಸಿ ವಿದ್ಯಾಧಿ ದೇವತೆಯಂತೆ ವಾದದಿಗ್ವಿಜಯ ಮಾಡ್ದ [೨]
ಕ್ಷೇತ್ರವೆಲ್ಲವ ತಿರುಗಿ ಸೂತ್ರಾಖ್ಯ ಸಮಯ ಸ-
ರ್ವತ್ರ ಡಂಗುರ ಹೊಯ್ಸಿ ಪಾತ್ರರಾದವರ ಪರ
ಮಾರ್ಥ ಸಾಧನೆಗೆ ಗುರುವರ್ಥ ದೀಪಿಕಮುಖ ಪವಿತ್ರ ಸೋಳಗ್ರಂಥವ
ತತ್ರಾಪಿ ಕರ್ನಾಟಕ ಭ್ರಾತ್ರರಿಗೆ ವೇದಾಂತ
ಸೂತ್ರಾರ್ಥ ತಿಳಿಸಿ ಕೃತಾರ್ಥರನು ಮಾಡಲ
ತ್ಯರ್ಥ ಪ್ರಸಾದ ಕರವರ್ಷಿಸುವ ತೆರದಿ ಹರಿಕೀರ್ತನೆಯ ಮಾಡಿ ಮೆರೆದ [೩]
ವಾಜಿಮುಖನಂಘ್ರಿ ದ್ವಯರಾಜೀವ ಮಧುರಾಜ
ಸೋಜಿಗಾಮಲಚರ್ಯ ಭೋಜಕುಲ ಗುರುರಾಜ
ರಾಜಿಸುವ ಶರಣ ಸುರಭೂಜ ಸಕಲ ಸುಕಲಾ ಭ್ರಾಜಿತಯಶಾಧಿರಾಜ
ಪೂಜಿತ ಮಹಾ ಭೂತರಾಜ ಭೋ ಪರಿವ್ರಾಜ
ಈ ಜಗತ್ರಯಭಾರ ಯೋಜನನೆ ಋಜುರಾಜ
ಬೀಜಮಂತ್ರಾರ್ಥ ನಿರ್ವ್ಯಾಜ ಭಕ್ತಿಲಿ ಮುಕ್ತಿ ಭಾಜನೆನಿಸೆನ್ನ ಸಹಜ [೪]
ಭೋಗಪುರಿ ರಾಜನ ಕುರೋಗವನು ಕಳೆದು ನೀ
ಭೋಗಿಭಯ ಬಿಡಿಸಿಲಿಯ ಯೋಗಕ್ಷೇಮವ ಮಾಡಿ
ಯೋಗ ಸಾಮರ್ಥ್ಯದಿಂದ ಘಟನಾಘಟನಗಳ ಆಗುಮಾಡುತ ಸರ್ವದಾ
ಆಗದವ ಗರ ಬಡಿಸೆ ಲಾಘವದಲರಗಿಸಿದೆ
ಈಗ ಸಮಯಲ್ಲೆಂದು ಖೇಗದೂತರನಟ್ಟಿ
ಭೂಗಗನ ಪಾತಾಳಕಾಗರ ತ್ರಿವಿಕ್ರಮನ ದೇಗುಲದೊಳಿರಿಸಿ ಮೆರೆದೇ [೫]
ಕೊಚ್ಚಿ ಕೇರಳ ಚೋಳ ಕಚ್ಚಕ ಕರ್ನಾಟ ಪುರಿ
ಮಚ್ಛಲೀ ಗಯ ಕಾಶಿ ಉಚ್ಚ ಬದರೀ ಸೇತು
ಸ್ವೇಚ್ಛಾಯಟನದಿಂದುಚ್ಛ್ರಾಯರಾಗಿ ಬಹುಮೆಚ್ಚು ಕಾಣಿಕೆ ಪಡೆಯುತಾ
ಸಚ್ಛಾಸ್ತ್ರ ಪ್ರಣವ ಮಂತ್ರೋಚ್ಚಾರಣೆಯೊಳಖಿಳ
ತುಚ್ಚರನು ಸದೆಬಡಿದು ಸಚ್ಚರಿತ್ರರ ಮಾಡಿ
ಅಚ್ಚ ಸುಖತೀರ್ಥ ಮತದ್ ಹೆಚ್ಚಾಳಿಕೆಯ ಮೆರೆಸಿ ಪ್ರಚ್ಛನ್ನ ಕಲಿಯ ಕೊಂದು [೬]
ಉಡುಪಿಲಿ ಪರ್ಯಾಯವೇರ್ಪಡಿಸಿ ದಿಗ್ಸಂಚಾರ
ನಡೆವವೊಲು ಸಚ್ಚಿಷ್ಯಗಡಣವನು ನಿರ್ಮಿಸಿಕೊಂ
ಡಡೆಹಾಯ್ದ ಕಷ್ಟಗಳ ಹುಡಿಮಾಡಿ ಶ್ರೀಕೃಷ್ಣನಡಿದಾವರೆಗಳಲ್ಲೀ
ಬಡಗು ಮೂಡಲು ತೆಂಕ ಪಡುವಲಾಸ್ಯದ ಕಪ್ಪ
ಕಡಗೋಲುಕರನ ಮೆಲ್ಲಡಿಯ ಸೇವೆಗೆ ನಿತ್ಯ
ಸಡಿಲವಾಗದ ಸಿಸ್ತಿನೊಡನೆ ಸಂಸ್ಥಾಪಿಸಿದ ಪೊಡವಿಜನ ಪೊಗಳುತಿರಲು [೭]
ಹರಿಕಥಾಮೃತಲಹರಿ ಎರಡು ದಡಮೀರ್ದುದೋ
ಪರಿಪರಿ ಪುರಾಣೋಕ್ತಿ ಕರಣಾನುಭವವಾಯ್ತೋ
ಸರುಪೋಪನಿಷದರ್ಥ ಪುರುಷಾಕೃತಿಯ ತಾಳ್ದು ನೆರೆಮಾರ್ಗ ತೋರುತಿಹುದೋ
ಅರರೆ ಬ್ರಹ್ಮ ಜ್ಞಾನ ಗುರುವಾಗಿ ಬಂದಿಹುದೋ
ಸರುವಜ್ಞ ತೀರ್ಥಾರ್ಯರ ಪರಾವತಾರವೋ
ಅರಿಯಲರಿದೆಂದಖಿಳ ಧರಣೀ ಸುರರಚ್ಚರಿಯ ಶರಧಿಯಳಗೋಲಾಡ್ದರು [೮]
ಪೂರ್ವೋಕ್ತ ಮಹಿಮೆ ನೂರಾರು ವರ್ಷವು ತೋರಿ
ಶಾರ್ವರೀ ಫಾಲ್ಗುಣದ ಪರಮೂರು ಸೋದೆಯಲಿ
ಸರ್ವಜನ ಸ್ತುತಿಸುತಿರೆ ಸರ್ವಲೋಕ ಶರಣ್ಯಗರ್ಪಿಸಿದನೈ ದೇಹವ
ಊರ್ವಿಲುದಯದಿ ಭಕ್ತಿ ಪೂರ್ವಕೀ ಪದ ಪಠಿಸೆ
ದುರ್ವಿಭಾವ್ಯನು ತಂದೆವೆಂಕಟೇಶವಿಠ್ಠಲನು
ಸರ್ವಾರ್ಥ ಪ್ರದನಾಗಿ ನಿರ್ವಾಹ ಮಾಡುವನು ಉರ್ವಭವ ಬಂಧದಿಂದ [೯]
vAdirAjara BajisirO [pa]
vAdirAjara Bajisi mOdamappudu nimage
mOdamuni darSana suBOdhavAguvudahita
bAdhe tappisi vEdavAdOditana padmapAda yugmava tOruva [a]
pUvinAkarada dvijadEva rAmanu gauri
dEviyudaradi SArvarI vatsaradi mauni
dEva vAgISara SuBAvahANatiyaMte BUvarAhAkhyadi janmisi,
kOvidOttama hayagrIva padasaMsakta
BAva BaviShyadvAyu SrIvAdirAjayati
BAvukAbjAmala viBAvasOddhAmakavi SrIvyAsarali Odida [1]
sOdeyoLu SrImAdhva vEda pIThavanEri
sAdhusaMsEvya prativAdi nigrahaSIla
I dharAvalaya marunAdaguDe kIrtiya mahOdadhiya GOShadiMda
bAdarAyaNara siripAdadali paMcamO
vEdakke vyAKyAnavAda lakShABaraNa
mOdadiMdarpisi vidyAdhi dEvateyaMte vAdadigvijaya mADda [2]
kShEtravellava tirugi sUtrAKya samaya sa-
rvatra DaMgura hoysi pAtrarAdavara para
mArtha sAdhanege guruvartha dIpikamuKa pavitra sOLagraMthava
tatrApi karnATaka BrAtrarige vEdAMta
sUtrArtha tiLisi kRutArtharanu mADala
tyartha prasAda karavarShisuva teradi harikIrtaneya mADi mereda [3]
vAjimuKanaMghri dvayarAjIva madhurAja
sOjigAmalacarya BOjakula gururAja
rAjisuva SaraNa suraBUja sakala sukalA BrAjitayaSAdhirAja
pUjita mahA BUtarAja BO parivrAja
I jagatrayabhAra yOjanane RujurAja
bIjamaMtrArtha nirvyAja Baktili mukti BAjanenisenna sahaja [4]
bhOgapuri rAjana kurOgavanu kaLedu nI
bhOgibhaya biDisiliya yOgakShEmava mADi
yOga sAmarthyadiMda ghaTanAghaTanagaLa AgumADuta sarvadA
Agadava gara baDise lAghavadalaragiside
Iga samayalleMdu khEgadUtaranaTTi
bhUgagana pAtALakAgara trivikramana dEguladoLirisi meredE [5]
kocchi kEraLa chOLa kacchaka karnATa puri
macCalI gaya kASi ucca badarI sEtu
svEcCAyaTanadiMducCrAyarAgi bahumeccu kANike paDeyutA
sacCAstra praNava maMtrOcchAraNeyoLakhiLa
tuccaranu sadebaDidu saccaritrara mADi
acca suKatIrtha matad heccALikeya meresi pracCanna kaliya koMdu [6]
uDupili paryAyavErpaDisi digsaMchAra
naDevavolu sacciShyagaDaNavanu nirmisikoM
DaDehAyda kaShTagaLa huDimADi SrIkRuShNanaDidAvaregaLallI
baDagu mUDalu teMka paDuvalAsyada kappa
kaDagOlukarana mellaDiya sEvege nitya
saDilavAgada sistinoDane saMsthApisida poDavijana pogaLutiralu [7]
harikathAmRutalahari eraDu daDamIrdudO
paripari purANOkti karaNAnuBavavAytO
sarupOpaniShadartha puruShAkRutiya tALdu neremArga tOrutihudO
arare brahma j~jAna guruvAgi baMdihudO
saruvaj~ja tIrthAryara parAvatAravO
ariyalarideMdaKiLa dharaNI suraraccariya SaradhiyaLagOlADdaru [8]
pUrvOkta mahime nUrAru varShavu tOri
SArvarI PAlguNada paramUru sOdeyali
sarvajana stutisutire sarvalOka SaraNyagarpisidanai dEhava
Urviludayadi Bakti pUrvakI pada paThise
durviBAvyanu taMdeveMkaTESaviThThalanu
sarvArtha pradanAgi nirvAha mADuvanu urvaBava baMdhadiMda [9]

Leave a Reply
You must be logged in to post a comment.