Composer : Shri Vijayadasaru on Shri Vadirajaru
ವಾದಿರಾಜ ಧೀರ ಯತಿವರ ವಾದದಲಿ ಶೂರ
ಮೋದತೀರ್ಥರ ಮತವ ಪೊಂದಿದ
ಸಾಧುಗಳನು ಉದ್ಧಾರ ಮಾಡುವ [ಪ]
ರಂಗ ಮಂಗಳ ಉತ್ತುಂಗ ವಿಕ್ರಮ ಎನುತ
ಶೃಂಗೇರಿ ಮಠದಿ ಜಯಕೇತನ ಹಾಕಿದ
ಒಡೆಯ ಹಯವಕ್ತ್ರನಿಗೆ ಕಡಲೆ ಹೂರಣ ಮಾಡಿ
ಅಡಿಗಡಿಗೆ ಅವನ ಪಾದಬಿಡದೆ ಆರಾಧಿಸುವ [೧]
ವಾದಿಗಜ ಪಂಚಾನನನೆನಿಸಿ ಮೇದಿನಿಯೊಳಗೆ ಮೆರೆದ
ಮಾಧವನ ಪ್ರಿಯ ದಾಸ ಸದಾ ಆನಂದದೊಳಿರುವ
ಅಜಪದಕೆ ಅರ್ಹನಾದ ಋಜುಗಣ ಜೀವೋತ್ತಮನ
ನಿಜ ಪದಕ್ಕೆ ಬರುವ ವಿಜಯವಿಠ್ಠಲನ ದಾಸ [೨]
vAdirAja dhIra yativara vAdadali SUra
mOdatIrthara matava poMdida
sAdhugaLanu uddhAra mADuva [pa]
raMga maMgaLa uttuMga vikrama enuta
SRuMgEri maThadi jayakEtana hAkida
oDeya hayavaktranige kaDale hUraNa mADi
aDigaDige avana pAdabiDade ArAdhisuva [1]
vAdigaja paMchAnananenisi mEdiniyoLage mereda
mAdhavana priya dAsa sadA AnaMdadoLiruva
ajapadake arhanAda RujugaNa jIvOttamana
nija padakke baruva vijayaviThThalana dAsa [2]

Leave a Reply
You must be logged in to post a comment.