Composer: Shri Vijaya dasaru on Shri Skanda
ಸುಬ್ಬರಾಯ ಶುಭ ಕಾಯ
ಸುಬ್ಬರಾಯ ನಿಜ ಕಾಯಂಗಜ ನೀನೆ ||
ನಿಬ್ಬರ ಮಹಿಮಾ ಮಹಾಂಬುಧಿ ಸ್ಕಂದಾ ||ಪ||
ಮಾರಾ ಭರತನೆ ಶಂಬ | ರಾರಿ ಸನತ್ಕುಮಾರ ಕು |
ಮಾರಾ ಸಾಂಬಾ |
ಸಾರಿದೆ ನಿನ್ನವತಾರ ಮೂಲರೂಪ |
ಸಾರಿ ಸಾರಿಗೆ ಸಂಸಾರಕೆ ಮನ ವಿ |
ಸ್ತಾರವಾಗದಂತೆ
ಹಾರಿಸದರ ವ್ಯಾಪಾರ ಗುಣ ಪಾರಾವಾರಾ ||೧||
ಮಾಡುವೆ ವಂದನೆ ಸತತ | ಸಜ್ಜನರೊಳ |
ಗಾಡಿಸು ಭಕ್ತ ಪ್ರೀತಾ | ಪಾಡಿದವರ ಕಾ |
ಪಾಡುವ ರತಿ-ಪತಿ |
ಈಡಾರು ನಿನಗೀ ನಾಡಿನೊಳಗೆಲ್ಲ |
ಬೇಡುವೆ ದಯವನ್ನು | ಮಾಡುವಿರಕುತಿಯ |
ನೀಡು ಬಿಡದಲೆ ನೋಡು ||೨||
ಕುಕ್ಕೆಪುರಿಯ ನಿಲಯಾ | ಶ್ರೀಧರ ಬೊಮ್ಮ |
ಮುಕ್ಕಣ್ಣಗಳ ತನಯ |
ಸೊಕ್ಕಿದ ತಾರಕ ರಕ್ಕಸ ಹರ ದೇ |
ವಕ್ಕಳ ನಿಜ ದಳಕೆ ನಾಯಕನಾದೆ |
ಪಕ್ಷಿವಾಹನ ಸಿರಿ ವಿಜಯವಿಠ್ಠಲನ |
ಚಕ್ರ ಐದೊಂದು ವಕ್ರಾ ||೩||
subbarAya shubha kAya
subbarAya nija kAyaMgaja nIne ||
nibbara mahimA mahAMbudhi skaMdA ||pa||
mArA Baratane SaMba | rAri sanatkumAra ku |
mArA sAMbA |
sAride ninnavatAra mUlarUpa |
sAri sArige saMsArake mana vi |
stAravAgadaMte
hArisadara vyApAra guNa pArAvArA ||1||
mADuve vaMdane satata | sajjanaroLa |
gADisu Bakta prItA | pADidavara kA |
pADuva rati-pati |
IDAru ninagI nADinoLagella |
bEDuve dayavannu | mADuvirakutiya |
nIDu biDadale nODu ||2||
kukkepuriya nilayA | SrIdhara bomma |
mukkaNNagaLa tanaya |
sokkida tAraka rakkasa hara dE |
vakkaLa nija daLake nAyakanAde |
pakShivAhana siri vijayaviThThalana |
cakra aidoMdu vakrA ||3||
Leave a Reply