Mathade gowri

Composer : Shri Shrida vittala dasaru

Smt.Lakshmi

ಮಾತಾಡೇ ಎನ್ನ ಮೌನದ ಗೌರೀ
ಯಾತಕಚಲಮನ ಸೋತವನೊಡನೆ
ಮಾತಾಡೇ ಗೌರಿ ಮಾತಾಡೇ |ಪ|

ನಸುನಗೆ ಮುಖವಿದು ಬಾಡಿ ಕೆಂದುಟಿಯು
ಎಸೆದಿರಲು ನಾನೋಡಿ ,
ವಸುಧೆಯೊಳಗೆ ನಾ ಜೀವಿಸಲಾರೆ,
ಘಸಘಸವ್ಯಾತಕೆ ತುಂಬಿತು ಅರಗಿಣಿ |೧|

ಕ್ಷಣ ಬಿಟ್ಟಿರಲಾರೆ ಅಮ್ಮ
ಷಣ್ಮುಖ ಗಣಪರ ತಾಯೆ ನೀ ಬಾರೇ,
ವಸುಧೆಯೊಳಗೆ ನಾ ಜೀವಿಸಲಾರೆ,
ಘಸಘಸವ್ಯಾತಕೆ ತುಂಬಿತು ಅರಗಿಣಿ |೨|

ಕ್ರೋಧವ್ಯಾತಕೆ ಎನ್ನೊಳು ಗೌರೀ ಏನಪ-
ರಾಧವು ಇದ್ದರು ತಾಳೇ,
ಶ್ರೀದವಿಠಲನ ಪಾದ ಕಿಂಕಿಣಿಯೇ,
ಆದರಿಸುವೆ ನಾ ಆದರಿಸುವೆನೇ |೩|


mAtADE enna maunada gaurI
yAtakacalamana sOtavanoDane
mAtADE gauri mAtADE |pa|

nasunage muKavidu bADi keMduTiyu
esediralu nAnODi ,
vasudheyoLage nA jIvisalAre,
GasaGasavyAtake tuMbitu aragiNi |1|

kShaNa biTTiralAre amma
ShaNmuKa gaNapara tAye nI bArE,
vasudheyoLage nA jIvisalAre,
GasaGasavyAtake tuMbitu aragiNi |2|

krOdhavyAtake ennoLu gaurI Enapa-
rAdhavu iddaru tALE,
SrIdaviThalana pAda kiMkiNiyE,
Adarisuve nA AdarisuvenE |3|

Leave a Reply

You might also like

error: Content is protected !!