Composer: Shri Venugopala dasaru
ವಂದಿಪೆ ಪುರಂದರದಾಸರ ಪಾದ
ದ್ವಂದ್ವಕೆ ನಾನು ನಿರಂತರ [ಪ]
ಮಂದರೋದ್ಧರ ಗೋವಿಂದ ಮುಕುಂದನ
ಎಂದಿಗೂ ವಂದಿಸುತಿರ್ಪರ [ಅ.ಪ]
ಒದಗಿದಜ್ಞಾನವನೋಡಿಸಿ ಮತ್ತೆ
ಸದಮಲ ಜ್ಞಾನವ ಪಾಲಿಸಿ
ಪದುಮನಾಭನ ಕಥೆ ಕೇಳಿಸಿ ಸನ್
ಮುದದಿ ಪಾಲಿಪರ ಧ್ಯಾನಿಸಿ [೧]
ಮೊರೆ ಹೊಕ್ಕ ಸುಜನರಿ-ಗಿಹಪರದ ಸುಖ
ತರಗಳನೊದಗಿಸಿ ಹರಿಪದದ
ಪರಮ ಭಕ್ತಿಯ ನೀವರೆಂದರೆ ದಾವಾಗ
ಸ್ಮರಿಸುವೆ-ನವರಿಗೆ ಕರಮುಗಿದು [೨]
ಅನಾಥಜನರನು ಮನ್ನಿಸಿ ವೇಣು-
ಗೋಪಾಲ ವಿಠಲನ್ನ ಕಾಣಿಸಿ
ಜ್ಞಾನಭಕ್ತಿಯ ಪಥ ತೋರಿಸಿ ಕಾಯ್ವ
ಜ್ಞಾನಿಗಳರಸನ ತುತಿಸಿ ತುತಿಸಿ [೩]
vaMdipe puraMdaradAsara pAda
dvaMdvake nAnu niraMtara [pa]
maMdarOddhara gOviMda mukuMdana
eMdigU vaMdisutirpara [a.pa]
odagidaj~jAnavanODisi matte
sadamala j~jAnava pAlisi
padumanABana kathe kELisi san
mudadi pAlipara dhyAnisi [1]
more hokka sujanari-gihaparada suKa
taragaLanodagisi haripadada
parama Baktiya nIvareMdare dAvAga
smarisuve-navarige karamugidu [2]
anAthajanaranu mannisi vENu-
gOpAla viThalanna kANisi
j~jAnaBaktiya patha tOrisi kAyva
j~jAnigaLarasana tutisi tutisi [3]
Leave a Reply