Composer : Shri Venkata Ankita dasaru
Shri Satyakama tIrtharu – 1785-1793
puNyadina – puShya bahuLa ShaShThi
Vrundavana – AtakUru
satyakAmArNavOdBataH SrImatsatyEShTa sadguru : |
satAM ciMtAmaNiriva ciMtitArthapradOrBuvi ||
ಸತ್ಯಕಾಮಾರ್ಣವೋದ್ಭತಃ ಶ್ರೀಮತ್ಸತ್ಯೇಷ್ಟ ಸದ್ಗುರು : |
ಸತಾಂ ಚಿಂತಾಮಣಿರಿವ ಚಿಂತಿತಾರ್ಥಪ್ರದೋರ್ಭುವಿ ||
ಸತ್ಯಕಾಮಗುರುಗಳ ನೋಡೆ
ಸದ್ವರಗಳ ಬೇಡೆ ||ಪ||
ನಿತ್ಯಾನಿತ್ಯಾತ್ಮಕವೆಂಬ ಈ ಜಗಕೆ
ಸತ್ಯ ಹರಿವಾಯುಗಳೆಂಬಂಥ
ಶ್ರುತ್ಯರ್ಥ ಸರಥಕ್ಕೆ ಸಾ
ರಥಿಗಳಾಗಿ ಮೆರೆವರಿವರು [೧]
ವರ ವೈಷ್ಣವಾಗ್ರಣಿ ಸ
ಮೀರಮತ ವಿರೋಧಿ ಮೇಘಕೆ
ದೂರವೋಡಿಸುವೋ ಝಂಝೂ-
ಮಾರುತೋಪಮ ಮಹಿಮರಿವರು [೨]
ಸಾಸಿರಾಖ್ಯ ಮೊದಲು ಬ್ರ-
ಹ್ಮೇಶ್ವರಿಗಸಾಧ್ಯ ವೆಂಕಟ
ದಾಸಭಾವ ತಿಳಿದು ಹೃ-
ದ್ವಾಸನಾಗಿರುವನಿಲ್ಲೀ [೩]
satyakAmagurugaLa nODe
sadvaragaLa bEDe ||pa||
nityAnityAtmakaveMba I jagake
satya harivAyugaLeMbaMtha
Srutyartha sarathakke sA
rathigaLAgi merevarivaru [1]
vara vaiShNavAgraNi sa
mIramata virOdhi mEGake
dUravODisuvO JaMjhU-
mArutOpama mahimarivaru [2]
sAsirAKya modalu bra-
hmESvarigasAdhya veMkaTa
dAsaBAva tiLidu hRu-
dvAsanAgiruvanillI [3]
Leave a Reply