Gangadhara deva

Composer : Shri Pranesha dasaru

By Smt.Nandini Sripad , Blore.

ಗಂಗಾಧರದೇವ ಜಯಗೀಷವ್ಯಾ – |
ನಂಗಾರಿ ಗಿರಿಜಾಧವ || ಪ ||
ಮಂಗಳಪ್ರದನೆ ಅಮಂಗಳಶೀಲ ಭು – |
ಜಂಗ ರೂಪದಿ ಪಾಂಡುರಂಗಘಾಸಿಗೆಯಾದ || ಅ.ಪ ||

ವೈಕಾರಿಕಾಹಂಕಾರ ತತ್ವದೊಡೆಯ
ನಾಕುಮೊಗನ ಕುಮಾರ |
ಶ್ರೀಕಂಠ ಸ್ಥಾಣು ವಿಶ್ಖೋಜನಕ ಚಂದ್ರ –
ಶೇಖರ ಈಶ ಪಿನಾಕಿ ಭಕ್ತವತ್ಸಲ ||
ಶೋಕನಾಶಕ ಶಂಭು ಪಶುಪತಿ
ಹೇ ಕರುಣಿ ಸದ್ಗುಣ ಸುಖಾರ್ಣವ
ಪಾಕಶಾಸನ ಪ್ರಮುಖವಂದ್ಯ ವಿ –
ಶೋಕ ಎನ್ನಭಿಲಾಷೆ ಪೂರ್ತಿಸು || ೧ ||

ಪ್ರಾಣನಂದನ ತೈಜಸಾಹಂಕಾರಾಭಿ
ಮಾನಿ ಶ್ರೀಶುಕ ದೂರ್ವಾಸ |
ಕ್ಷೋಣಿಸಂಧೃತ ಧನ್ವಿ ದಾನವಾಂತಕ ಶೂಲ
ಪಾಣಿ ಪ್ರಮಥಾಧಿಪ ಬಾಣವರದಯನ್ನ ||
ಮಾನ ನಿನ್ನದು ಚಕ್ರಿ ಪದಕಂಜ
ರೇಣು ತೋರಿಸು ತವಕದಿಂದಲಿ
ದ್ರೌಣಿ ಶಿವ ಪ್ರಣತಜನ ಸುಮನಸ
ಧೇನು ತವ ಪದ ಸಾರ್ವೆ ಸತತ || ೨ ||

ತಾಮಸಾಹಂಕಾರೇಶ ಸಂಕರ್ಷಣ –
ನಾ ಮಗನೇ ಕೊಡು ಲೇಸ |
ರಾಮನಾಮ ಮಂತ್ರ ಪ್ರೇಮದಿ ಜಪಿಸುವ
ಸ್ವಾಮಿ ಅನಲ ವಹ್ನಿ ಸೋಮಲೋಚನ ಹರ ||
ವಾಮದೇವ ಕಪರ್ದಿ ಭವಭಯ
ಭೀಮ ಶ್ರೀ ಪ್ರಾಣೇಶವಿಠಲನ
ಪ್ರೇಮ ಪುಟ್ಟಿಸೋ ರೌಪ್ಯ ಪರ್ವತ
ಧಾಮ ಶ್ರೀ ವಿರೂಪಾಕ್ಷ ಗುರುವೇ || ೩ ||


gaMgAdharadEva jayagIShavyA – |
naMgAri girijAdhava || pa ||
maMgaLapradane amaMgaLaSIla Bu – |
jaMga rUpadi pAMDuraMgaGAsigeyAda || a.pa ||

vaikArikAhaMkAra tatvadoDeya
nAkumogana kumAra |
SrIkaMTha sthANu viSKOjanaka caMdra –
SEKara ISa pinAki Baktavatsala ||
SOkanASaka SaMBu paSupati
hE karuNi sadguNa suKArNava
pAkaSAsana pramuKavaMdya vi –
SOka ennaBilAShe pUrtisu || 1 ||

prANanaMdana taijasAhaMkArABi
mAni SrISuka dUrvAsa |
kShONisaMdhRuta dhanvi dAnavAMtaka SUla
pANi pramathAdhipa bANavaradayanna ||
mAna ninnadu cakri padakaMja
rENu tOrisu tavakadiMdali
drauNi Siva praNatajana sumanasa
dhEnu tava pada sArve satata || 2 ||

tAmasAhaMkArESa saMkarShaNa –
nA maganE koDu lEsa |
rAmanAma maMtra prEmadi japisuva
svAmi anala vahni sOmalOcana hara ||
vAmadEva kapardi BavaBaya
BIma SrI prANESaviThalana
prEma puTTisO raupya parvata
dhAma SrI virUpAkSha guruvE || 3 ||

Leave a Reply

Your email address will not be published. Required fields are marked *

You might also like

error: Content is protected !!