-
Gangadhara deva
Composer : Shri Pranesha dasaru ಗಂಗಾಧರದೇವ ಜಯಗೀಷವ್ಯಾ – |ನಂಗಾರಿ ಗಿರಿಜಾಧವ || ಪ ||ಮಂಗಳಪ್ರದನೆ ಅಮಂಗಳಶೀಲ ಭು – |ಜಂಗ ರೂಪದಿ ಪಾಂಡುರಂಗಘಾಸಿಗೆಯಾದ || ಅ.ಪ || ವೈಕಾರಿಕಾಹಂಕಾರ ತತ್ವದೊಡೆಯನಾಕುಮೊಗನ ಕುಮಾರ |ಶ್ರೀಕಂಠ ಸ್ಥಾಣು ವಿಶ್ಖೋಜನಕ ಚಂದ್ರ –ಶೇಖರ ಈಶ ಪಿನಾಕಿ ಭಕ್ತವತ್ಸಲ ||ಶೋಕನಾಶಕ ಶಂಭು ಪಶುಪತಿಹೇ ಕರುಣಿ ಸದ್ಗುಣ ಸುಖಾರ್ಣವಪಾಕಶಾಸನ ಪ್ರಮುಖವಂದ್ಯ ವಿ –ಶೋಕ ಎನ್ನಭಿಲಾಷೆ ಪೂರ್ತಿಸು || ೧ || ಪ್ರಾಣನಂದನ ತೈಜಸಾಹಂಕಾರಾಭಿಮಾನಿ ಶ್ರೀಶುಕ ದೂರ್ವಾಸ |ಕ್ಷೋಣಿಸಂಧೃತ ಧನ್ವಿ ದಾನವಾಂತಕ ಶೂಲಪಾಣಿ…
