Composer : Shri Pranesha dasaru
ವೈರಾಗ್ಯವೆ ಜಪತಪ ಮಖಯೋಗ ಯಾತ್ರಿ ಧರ್ಮಾದಾನ |
ಮಾರಮಣನ ಪ್ರೀತಿದರಿಂದಾಹುದು |
ಎಂಬುವನೇ ಪ್ರವೀಣಾ ||ಪ||
ಉಂಡು ಉಂಡು ನಾ ಉಂಡಿಲ್ಲೆಂಬುದೆ ಮಹ ವೈರಾಗ್ಯ |
ಕಂಡೂ ಕಂಡು ನಾ ಕಂಡಿಲ್ಲೆಂಬುದೆ ಬಲು ವೈರಾಗ್ಯ |
ಹೆಂಡತಿ ಸಂಗವ ಮಾಡಿ ಮಾಡಿಲ್ಲೆಂಬುದೆ ವೈರಾಗ್ಯ
ಹಿಂಡೂ ಬಳಗದೊಳು ಇದ್ದೂ, ಇದ್ದೂ ಇಲ್ಲೆಂಬುದೆ ವೈರಾಗ್ಯ || ೧ ||
ನಡದು ನಡದು ನಾ ನಡದೆ ಇಲ್ಲೆಂಬುದೆ ವೈರಾಗ್ಯ
ನುಡಿದು ನುಡಿದು ನಾ ನುಡಿದೇ ಇಲ್ಲೆಂಬುದೆ ವೈರಾಗ್ಯ |
ಹಿಡಿದು ಹಿಡಿದು ನಾ ಹಿಡಿದೇ ಇಲ್ಲೆಂತಿಪ್ಪುದೆ ವೈರಾಗ್ಯ |
ಉಡಿಗಿ ಉಟ್ಟು ನಾ ಉಟ್ಟೆ ಇಲ್ಲೆಂತೆಂಬುದೆ ವೈರಾಗ್ಯ || ೨ ||
ಬಿಟ್ಟೂ ಬಿಟ್ಟೂ ನಾ ಬಿಟ್ಟೆ ಯಿಲ್ಲೆಂಬುದೆ ವೈರಾಗ್ಯ
ಕೆಟ್ಟು ಕೆಟ್ಟೂ ನಾ ಕೆಟ್ಟಿಲ್ಲವೆಂಬುದೆ ವೈರಾಗ್ಯ |
ಕೊಟ್ಟೂ ಕೊಟ್ಟೂ ನಾ ಕೊಟ್ಟೆಯಿಲ್ಲೆಂತೆಂಬುದೆ ವೈರಾಗ್ಯ |
ಅಷ್ಟೂ ಶ್ರೀ ಪ್ರಾಣೇಶವಿಠ್ಠಲಗರ್ಪಿತವೆಂಬುದೆ ವೈರಾಗ್ಯ || ೩ ||
vairAgyave japatapa maKayOga yAtri dharmAdAna |
mAramaNana prItidariMdAhudu |
eMbuvanE pravINA ||pa||
uMDu uMDu nA uMDilleMbude maha vairAgya |
kaMDU kaMDu nA kaMDilleMbude balu vairAgya |
heMDati saMgava mADi mADilleMbude vairAgya
hiMDU baLagadoLu iddU, iddU illeMbude vairAgya || 1 ||
naDadu naDadu nA naDade illeMbude vairAgya
nuDidu nuDidu nA nuDidE illeMbude vairAgya |
hiDidu hiDidu nA hiDidE illeMtippude vairAgya |
uDigi uTTu nA uTTe illeMteMbude vairAgya || 2 ||
biTTU biTTU nA biTTe yilleMbude vairAgya
keTTu keTTU nA keTTillaveMbude vairAgya |
koTTU koTTU nA koTTeyilleMteMbude vairAgya |
aShTU SrI prANESaviThThalagarpitaveMbude vairAgya || 3 ||

Leave a Reply
You must be logged in to post a comment.