Composer : Shri Helavanakatte Giriyamma
ಪದುಮನಾಭನೆ ನಿನ್ನ ಪಾದ ಕಿಂಕರ ನನ್ನ
ಕೈಬಿಡು-ವುದುಚಿತವೇ ರಂಗ [ಪ]
ಮುದದಿಂದ ನಿನ್ನ ಪಾದಗೆರಗುವೆ ನಾನು ತ್ವರಿ-
ತದಿ ನೀ ಕಾಯೊ ಎನ್ನೊಡೆಯ ರಂಗ [ಅ.ಪ]
ಅಜಗರ ಶಯನನೆ ಬುಧಜನ ನಮಿತನೆ
ತ್ರಿಜಗವಂದಿತಪಾದ ಪದುಜನ ಜನಕನೆ [೧]
ಶಿಶುವಾಗಿ ಗೋಕುಲದ ಪಶುಗಳ ಸಲಹಿದ
ಶಶಿಭೂಷಣ ಸಖ ಶಿಶುವ ಕಾಪಾಡೊ [೨]
ಸಾಂದೀಪಗೊಲಿದೆ ಸಂದೇಹವಿಲ್ಲ
ತಂದೆ ಹೆಳವನಕಟ್ಟೆ ರಂಗ ಕೃಪಾಂಗ [೩]
padumanABane ninna pAda kiMkara nanna
kaibiDu-vuducitavE raMga [pa]
mudadiMda ninna pAdageraguve nAnu tvari-
tadi nI kAyo ennoDeya raMga [a.pa]
ajagara Sayanane budhajana namitane
trijagavaMditapAda padujana janakane [1]
SiSuvAgi gOkulada paSugaLa salahida
SaSiBUShaNa saKa SiSuva kApADo [2]
sAMdIpagolide saMdEhavilla
taMde heLavanakaTTe raMga kRupAMga [3]

Leave a Reply
You must be logged in to post a comment.