Honnu taa gubbi

Composer : Shri Helavanakatte Giriyamma

By Smt.Shubhalakshmi Rao

ಹೊನ್ನು ತಾ ಗುಬ್ಬಿ ಹೊನ್ನು ತಾ |
ಚಿನುಮಯ ಮೂರುತಿ ಚೆಲ್ವ ರಂಗನ ಕೈಗೆ
ತಾ ಗುಬ್ಬಿ ತಾ ತಾ ಗುಬ್ಬಿ ,
ಹೊನ್ನು ತಾ ಗುಬ್ಬಿ ಹೊನ್ನು ತಾ |ಅ.ಪ.|

ಆಗಮವ ತಂದು ಅಜಗಿತ್ತ ಕೈಗೆ
ಸಾಗರವ ಮಥಿಸಿ ಸುಧೆ ತಂದ ಕೈಗೆ
ತೂಗಿ ಮಾತಾಡುವ ಸ್ಥೂಲ ಕಾಯನ ಕೈಗೆ
ಸಾಗರಪತಿ ನರಸಿಂಹನ ಕೈಗೆ..
ತಾ ಗುಬ್ಬಿ ತಾ ತಾ ಗುಬ್ಬಿ.. |೧|

ಬಲಿಯ ದಾನವ ಬೇಡಿ ಕೊಂಡಂಥ ಕೈಗೆ
ಛಲದಿಂದ ಕ್ಷತ್ರಿಯರ ಅಳಿದಂಥ ಕೈಗೆ
ಒಲವಿಂದ ವಿಭೀಷಣಗೆ ಅಭಯವಿತ್ತ ಕೈಗೆ
ಬಲು ಬೆಟ್ಟ ಬೆರಳಲ್ಲಿ ಹೊತ್ತಂಥ ಕೈಗೆ…
ತಾ ಗುಬ್ಬಿ ತಾ ತಾ ಗುಬ್ಬಿ.. |೨|

ಪತಿವ್ರತೆಯರ ವ್ರತವ ಅಳಿದಂಥ ಕೈಗೆ
ಹಿತವಾಜಿಯನೇರಿ ಮರ್ದಿಸಿದ ಕೈಗೆ
ಪತಿ ಶಿರೋಮಣಿ ಲಕ್ಷ್ಮೀ ಕಾಂತನ ಕೈಗೆ
ಚತುರ ಹೆಳವನ ಕಟ್ಟೆ ರಂಗನ ಕೈಗೆ…
ತಾ ಗುಬ್ಬಿ ತಾ ತಾ ಗುಬ್ಬಿ.. |೩|


honnu tA gubbi honnu tA |
cinumaya mUruti celva raMgana kaige
tA gubbi tA tA gubbi ,
honnu tA gubbi honnu tA |a.pa.|

Agamava taMdu ajagitta kaige
sAgarava mathisi sudhe taMda kaige
tUgi mAtADuva sthUla kAyana kaige
sAgarapati narasiMhana kaige..
tA gubbi tA tA gubbi.. |1|

baliya dAnava bEDi koMDaMtha kaige
CaladiMda kShatriyara aLidaMtha kaige
olaviMda viBIShaNage aBayavitta kaige
balu beTTa beraLalli hottaMtha kaige…
tA gubbi tA tA gubbi.. |2|

pativrateyara vratava aLidaMtha kaige
hitavAjiyanEri mardisida kaige
pati SirOmaNi lakShmI kAMtana kaige
catura heLavana kaTTe raMgana kaige…
tA gubbi tA tA gubbi.. |3|

Leave a Reply

You might also like

error: Content is protected !!