Composer : Shri Helavanakatte Giriyamma
ಶ್ರೀ ನರಸಿಂಹದೇವ ಶರಣ ರಕ್ಷಕನೆ
ದಾನವಾರಿ ಸುಭಕ್ತಾಧೀನ ಮೂರುತಿಯೆ ||ಪ.||
ಹರಿ ತನ್ನ ದೈವವೆಂದು ಸ್ಮರಿಸುತಿರಲು ಬಾಲ
ನಿರವ ಕಾಣದೆ ದುಷ್ಟ ಹಿರಣ್ಯಕಾಸುರನು
ಪರಿ ಪರಿ ಹಿಂಸಿಸೆ ಮೊರೆದು ಕೋಪದೊಳೆದ್ದು
ತರಳಗೊಲಿದೆ ಬಹು ಕರುಣಾನಿಧಿಯೆ [೧]
ಛಿಟಿ ಛಿಟಿಲೆಂದಾರ್ಭಟಿಸಿ ಕಂಬವು ಸಿಡಿಯೆ
ಕಟಿ ಕಟಿ ಮಸಿದಗ್ನಿ ನಿಟ್ಟುಸಿರಿನಿಂ ಹಲ್ಗಳ
ಕಟಿ ಕಟಿ ಕಡೆವುತುಬ್ಬಸ ತೋರಿ ನಿಂದ
ಕಠಿಣ ಮೂರುತಿಯೆ ಶ್ರೀ ನರಸಿಂಹ [೨]
ಕೊಬ್ಬಿದ ಹಿರಣ್ಯಕನುಬ್ಬ ಮುರಿವೆನೆಂದು
ಹೆಬ್ಬಾಗಿಲೊಳು ಸಂಜೆ ಮಬ್ಬಿನಲಿ ದನುಜನ
ಗರ್ಭವ ನಖದಿಂದ ಇಬ್ಭಾಗವನು ಮಾಡಿ
ಹಬ್ಬಿದ ಕರುಳನು ಹರುಷದಿ ಧರಿಸಿದೆ [೩]
ಭೀತರಾದ ಸುರವ್ರಾತ ಪ್ರಾರ್ಥಿಸೆ ಬಹು
ಪ್ರೀತಿಯ ಭಕ್ತನ ಮಾತನು ಮನ್ನಿಸಿ ಅತಿ
ಶಾಂತನಾಗಿ ಸಂತೋಷ ಪಡಿಸಿದ ಅ-
ನಾಥ ರಕ್ಷಕನೆ ಕಾತರವಳಿದೆ [೪]
ಖಳನ ಮರ್ದಿಸಿ ಬಹು ಇಳೆಯ ಪಾಲಿಸಿದೆ
ನಳಿನ ಸಂಭವಗೆ ಬಲು ಹರುಷವನಿತ್ತೆ
ಹೆಳವನಕಟ್ಟೆ ಶ್ರೀ ರಂಗ ದಾಗಿನ ಕಟ್ಟೆ
ನೆಲೆವಾಸ ಕಂಬದ ನರಸಿಂಹದೇವ [೫]
SrI narasiMhadEva SaraNa rakShakane
dAnavAri suBaktAdhIna mUrutiye ||pa.||
hari tanna daivaveMdu smarisutiralu bAla
nirava kANade duShTa hiraNyakAsuranu
pari pari hiMsise moredu kOpadoLeddu
taraLagolide bahu karuNAnidhiye [1]
CiTi CiTileMdArBaTisi kaMbavu siDiye
kaTi kaTi masidagni niTTusiriniM halgaLa
kaTi kaTi kaDevutubbasa tOri niMda
kaThiNa mUrutiye SrI narasiMha [2]
kobbida hiraNyakanubba muriveneMdu
hebbAgiloLu saMje mabbinali danujana
garBava naKadiMda ibBAgavanu mADi
habbida karuLanu haruShadi dhariside [3]
BItarAda suravrAta prArthise bahu
prItiya Baktana mAtanu mannisi ati
SAMtanAgi saMtOSha paDisida a-
nAtha rakShakane kAtaravaLide [4]
KaLana mardisi bahu iLeya pAliside
naLina saMBavage balu haruShavanitte
heLavanakaTTe SrI raMga dAgina kaTTe
nelevAsa kaMbada narasiMhadEva [5]

Leave a Reply
You must be logged in to post a comment.