Composer : Shri Helavanakatte Giriyamma
ರಕ್ಷಿಸೆ ಏಕನಾಥ ತಾಯೆ ದಯದಿಂದೆ ಎನ್ನನು
ಸೊಕ್ಕಿದ ದೈತ್ಯ ಸಂಹಾರೆ ಶರಣೆ ಜನೋದ್ಧಾರೆ [ಪ.]
ಶರ್ವಾಣಿ ಶಂಕರಿ ದುರಿತ ದುಃಖ ನಿವಾರಿ
ಶರಣರ ಸಲಹುವ ದಾತೆ ಪಿಳರೆದೆಗಂತೆ ನೀಡಿ
ಗರುಳ ಬಾಲೆ ಪಲ್ಲವಪಾಣಿ
ಸುರರ ನಾಯಕಿ ಅಖಿಳ ದೇವಮಾತೆ ವಿಖ್ಯಾತೆ (೧)
ಅಳುವಾಡುವ ರಂಗನ ಅದೇನರಿತು ಭಂಗ
ಬಾಳ ಬಡಿಸಿದೆಯವ್ವ ಭಕ್ತರುದ್ಧಾರಿ
ಕಾಳಗದೊಳು ಕಂಠೀರವೆ ಕರೆದಭಯವನೀವೆ
ಪೇಳಲೆನ್ನಳವೆ ಸುಕೃತ ಪಂಥಗಾರ್ತಿ (೨)
ಹಿಂಡು ಭೂತಂಗಳಿಗೆಲ್ಲ ಹೆಚ್ಚಿನ ಬಿರುದನೆ ತಾಳ್ದೆ
ಚಂಡಿ ಚಾಮುಂಡಿ ತ್ರೈಲೋಕ್ಯನಾಥೇ
ಅಂಡ ಪವಿತ್ರೆ ಶುಭಗಾತ್ರೆ ನಂಬಿದ ಭಕ್ತರ ಸಂಪ್ರೀತೆ
ಕಂಡು ನಮಿಸುವರ ಕಾಯ್ವೆ ಕಾಮಿತದಾತೆ (೩)
ಇಂದ್ರಾದಿ ದಿಕ್ಪಾಲಕರು ವಂದಿಸಿ
ಸ್ತುತಿ ಮಾಡಲವರ
ಬಂಧನವ ಪರಿಹರಿಸಿಯೆ ಚಂದ್ರಮುಖಿಯೆ
ಇಂದು ಬಂದೆ ಬಂಧನವ ಬಿಡಿಸಿ
ಎಂದೂ ಎನ್ನ ನೀ ಕಾಯೆ ತಾಯೆ (೪)
ಮಲೆತ ಮಹಿಷಾಸುರನ ಕೊಂದೆ ಮಲೆ
ಬೆನ್ನೂರಿನಲಿ ನಿಂದೆ
ಬಲುನೇಮವಂತೆ ಸಂತೆ ಹರಿವಿಲಿ ನಿಂತೆ
ಪುಲ್ಲಲೋಚನೆ ಪ್ರಖ್ಯಾತೆ ಪರಶುರಾಮನ ಮಾತೆ
ಹೆಳವನಕಟ್ಟೆ ರಂಗನ ಸಹೋದರಿ (೫)
rakShise EkanAtha tAye dayadiMde ennanu
sokkida daitya saMhAre SaraNe janOddhAre [pa.]
SarvANi SaMkari durita duHKa nivAri
SaraNara salahuva dAte piLaredegaMte neeDi
garuLa bAle pallavapANi
surara nAyaki aKiLa dEvamAte viKyAte (1)
aLuvADuva raMgana adEnaritu BaMga
bALa baDisideyavva BaktaruddhAri
kALagadoLu kaMThIrave karedaBayavanIve
pELalennaLave sukRuta paMthagArti (2)
hiMDu BUtaMgaLigella heccina birudane tALde
caMDi cAmuMDi trailOkyanAthE
aMDa pavitre SuBagAtre naMbida Baktara saMprIte
kaMDu namisuvara kAyve kAmitadAte (3)
iMdrAdi dikpAlakaru vaMdisi
stuti mADalavara
baMdhanava pariharisiye caMdramuKiye
iMdu baMde baMdhanava biDisi
eMdU enna nI kAye tAye (4)
maleta mahiShAsurana koMde male
bennUrinali niMde
balunEmavaMte saMte harivili niMte
pullalOcane praKyAte paraSurAmana mAte
heLavanakaTTe raMgana sahOdari (5)
Leave a Reply