Composer : Shri Helavanakatte Giriyamma
ಮನವೆನ್ನ ಮಾತ ಕೇಳದು ಮಂದ ಜ್ಞಾನದಿ |
ತನುವಿನಾಶಯ ಬಿಡಲೊಲ್ಲದು [ಪ]
ವನಜನಾಭನೆ ನಿನ್ನ ನಾಮಸ್ಮರಣೆ ಮಾಡದೆ |
ಕಂಡಕಂಡೆಡೆಗೆ ಅಲೆಯುತಲಿದ (೧)
ಸಾದುಸಜ್ಜನರ ಸಂಗವ ಮಾಡಿ ಪರಾಗತಿ |
ಆದರವನು ಮಾಡಲೊಲ್ಲದು (೨)
ಕ್ರೋಧ ಕುಹಕ ದುಷ್ಟರೊಡನಾಡಿ ಕಾಲನ
ಬಾಧೆಗೆ ಒಳಗಾಗುವಂತೆ ಮಾಡಿದಿರೆನ್ನ (೩)
ಮದನನಯ್ಯನ ಮರೆದು ಮುಂದುಗಾಣದೆ |
ಹುದುವಿನೊಳಗೆ ಬಿದ್ದಂತಾದೆನು (೪)
ಹೃದಯಕಮಲದಿ ನಿಂದು ರಕ್ಷಿಸು ಎನ್ನನಿಂದು |
ಮೋಕ್ಷ ನೀಡಿ ಹೆಳವನಕಟ್ಟೆ ರಂಗಯ್ಯ (೫)
manavenna mAta kELadu maMda j~jAnadi |
tanuvinASaya biDalolladu [pa]
vanajanABane ninna nAmasmaraNe mADade |
kaMDakaMDeDege aleyutalida (1)
sAdusajjanara saMgava mADi parAgati |
Adaravanu mADalolladu (2)
krOdha kuhaka duShTaroDanADi kAlana
bAdhege oLagAguvaMte mADidirenna (3)
madananayyana maredu muMdugANade |
huduvinoLage biddaMtAdenu (4)
hRudayakamaladi niMdu rakShisu ennaniMdu |
mOkSha nIDi heLavanakaTTe raMgayya (5)
Leave a Reply