Composer : Shri Vijayadasaru
ಪಾಂಡುರಂಗನ ಈಕ್ಷಿಸುವ ಸುಖವೇ ಸಾಕೂ
ಅಪಾರ ಮಹಿಮ ಅನಂತಾನಂತ ರೂಪನಾ [ಪ]
ಶಶಿ ನಖ ನಾಲ್ಬೆರಳು ಎರಡು
ಜಾನು ಜಂಘೀ ಎಸೆವ ಊರು ಕಟಿ
ನಾಭಿ ಉದರ ಉರುತರ ಕಂಠಾ
ಮಿಸಣಿಪ ವದನ ನಾಸ ಕದಪು
ಕರ್ಣ ನಯನಾ ನೊಸಲು ಶಿರ ಜಗವ
ವ್ಯಾಪಿಸಿದ ರಕ್ಕಸ ಹರನಾ [೧]
ಮಕುಟ ಮಣಿ ಕುಂಡಲ ತಿಲಕ
ಸರಿಗೆ ಕೌಸ್ತಭ ವಿಕಸಿತ ಕಮಲ
ತುಲಸಿಹಾರ ಮುತ್ತಿನಸರ ಪದಕ
ಅಂಗದ ಕಂಕಣ ಮುದ್ರೆ
ಕಟಿಸೂತ್ರ ಸುಖದಂದಿಗೆ
ಪೆಂಡೆಗೆಜ್ಜೆ ಸುಕುಮಾರನಾ [೨]
ಶ್ರುತಿ ತತಿಗೆ ದೂರ ಉನ್ನತ
ಲೀಲ ಸಾಕಾರ ಸತತ ಭಕ್ತರಾಧಾರ
ಅಪ್ರಾಕೃತ ಶರೀರ
ಯತಿಗಳ ಮನೋಹರ ಮತಿಗೆ
ಅಗೋಚರ ಪತಿತಪಾವನ
ಸಿರಿ ಪತಿ ವಿಜಯವಿಠ್ಠಲನಾ [೩]
pAMDuraMgana IkShisuva suKavE sAkU
apAra mahima anaMtAnaMta rUpanA [pa]
SaSi naKa nAlberaLu eraDu
jAnu jaMGI eseva Uru kaTi
nABi udara urutara kaMThA
misaNipa vadana nAsa kadapu
karNa nayanA nosalu Sira jagava
vyApisida rakkasa haranA [1]
makuTa maNi kuMDala tilaka
sarige kaustaBa vikasita kamala
tulasihAra muttinasara padaka
aMgada kaMkaNa mudre
kaTisUtra suKadaMdige
peMDegejje sukumAranA [2]
Sruti tatige dUra unnata
lIla sAkAra satata BaktarAdhAra
aprAkRuta SarIra
yatigaLa manOhara matige
agOcara patitapAvana
siri pati vijayaviThThalanA [3]

Leave a Reply
You must be logged in to post a comment.