Composer : Shri Vijayadasaru
ಹರೇ ವಿಠ್ಠಲಾ ಪಾಂಡುರಂಗ
ಪರಿಪಾಲಯ ಕಂಸಾರೆ [ಪ]
ಕರಕಮಲದ್ವಯ ಕಟಿಯ ಮೇಲೆಯಿಟ್ಟ |
ಪರಮ ಪುರುಷ ಶೌರೇ ಮುರಾರೇ [ಅ.ಪ.]
ಜಲಜ ಭವಾದಿ ಸುರಸನ್ನುತ ಪಾದ
ಜಲಜನಾಭನಾದ
ಕಲುಷ ದೂರ ಕರುಣಾಕರ ರಂಗ
ಸುಲಲಿತ ಮಹಿಮ ಹರೇ ಮುರಾರೆ [೧]
ಪುಂಡಲೀಕ ವರದಾತ ಮುಕುಂದ
ಕುಂಡಲಿಶಯನ ಹರೇ |
ಅಂಡಜವಾಹನ ಅಪ್ರಾಕೃತಕಾಯ
ಕುಂಡಲಧರ ಹರೇ ಮುರಾರೇ [೨]
ದಿಟ್ಟತನದಿ ಹರಿಭಕ್ತ ಕೊಟ್ಟ ಇಟ್ಟಿಗಿ
ಮೇಲೆ ನಿಂದ ದೇವ
ಸೃಷ್ಟಿಗೊಡೆಯ ಶ್ರೀ ವಿಜಯವಿಠ್ಠಲ
ದುಷ್ಟ ಕುಲಾಂತಕನೇ ಶ್ರೀ ಕೃಷ್ಣ [೩]
harE viThThalA pAMDuraMga
paripAlaya kaMsAre [pa]
karakamaladvaya kaTiya mEleyiTTa |
parama puruSha SaurE murArE [a.pa.]
jalaja BavAdi surasannuta pAda
jalajanABanAda
kaluSha dUra karuNAkara raMga
sulalita mahima harE murAre [1]
puMDalIka varadAta mukuMda
kuMDaliSayana harE |
aMDajavAhana aprAkRutakAya
kuMDaladhara harE murArE [2]
diTTatanadi hariBakta koTTa iTTigi
mEle niMda dEva
sRuShTigoDeya SrI vijayaviThThala
duShTa kulAMtakanE SrI kRuShNa [3]

Leave a Reply
You must be logged in to post a comment.