Bheema nadi teeravasa

Composer : Shri Vishwendra Tirtharu [Sode maTha]

By Smt.Shubhalakshmi Rao

ಭೀಮಾನದೀ ತೀರಾವಾಸ
ಪಾಹಿ ಪಾಹಿ ಪಾಂಡುರಂಗ [ಪ]

ಜಾರಚೋರನೆಂಬರೆಂದು
ಗೋಕುಲವ ಬಿಟ್ಟು ಬಂದೆ
ಜಾರಚೋರನೆಂದು ನಿನ್ನ
ಪುಂಡರೀಕ ಮುನಿಕರೆದ ||ಪಾಂಡುರಂಗ|| ೧

ಅನ್ಯ ಭೋಗಗಳನು ಬಿಟ್ಟು
ನಿನ್ನ ಪಾದವ ಧ್ಯಾನಿಸುವರ
ಮನದಿಷ್ಟ ನೀವನೆಂದು
ತೋರಿಸುವಿ ಚಿಹ್ನೆಯಿಂದ ||ಪಾಂಡುರಂಗ|| ೨

ರಾಜೇಶ ಶ್ರೀಹಯಮುಖ ಜ್ಞಾನಶೂನ್ಯಾರ್ತರ್ಗೆ
ಸಾಯುಜ್ಯವಿತ್ತು ಪೊರೆವ ವಿಠಲ-
ನೆಂದು ಭೂಮಿಯೊಳು ಮೆರೆವ ||ಪಾಂಡುರಂಗ|| ೩


BImAnadI tIrAvAsa
pAhi pAhi pAMDuraMga [pa]

jAracOraneMbareMdu
gOkulava biTTu baMde
jAracOraneMdu ninna
puMDarIka munikareda ||pAMDuraMga|| 1

anya BOgagaLanu biTTu
ninna pAdava dhyAnisuvara
manadiShTa nIvaneMdu
tOrisuvi cihneyiMda ||pAMDuraMga|| 2

rAjESa SrIhayamuKa j~jAnaSUnyArtarge
sAyujyavittu poreva viThala-
neMdu BUmiyoLu mereva ||pAMDuraMga|| 3

Leave a Reply

You might also like

error: Content is protected !!