Composer : Shri Vijayadasaru
ಶ್ರೀ ಭಾಗೀರಥಿ ತಾಯೇ ಶೃಂಗಾರ ಶುಭಕಾಯೆ |
ಶ್ರೀ ಭೂರಮಣನ ತನಯೇ [ಪ]
ನಿನ್ನ ಯಾತ್ರಿಗೋಸುಗ ಎನ್ನ ಮನಸು ಪುಟ್ಟಿತು |
ಇನ್ನು ನೀ ಮರಿಸದೇ |
ಪುಣ್ಯನರನ ಮಾಡೊ ಪೂತೋಭಾವವೆಂದು |
ಧನ್ಯ ಜನ ಮಾನ್ಯಾ ಭಕ್ತಜನ ಪ್ರಸನ್ನೇ [೧]
ಶಿವ ನಿನ್ನ ಶಿರದಲ್ಲಿ ಧರಿಸಿದ ಕಾರಣ
ಪವಿತ್ರಂಗನಾದನೆಂದು |
ಅವನಿಯೊಳಗೆ ಮಹಾ | ಕವಿಜನ ಪೇಳಿದ
ಶ್ರವಣದಿಂದಲಿ ಭಕುತಿಯಿಂದಲಿ ನಿಂದೆ [೨]
ದೂರದಿಂದಲಿ ನಿನ್ನ ಸ್ಮರಿಸಿದವರ ಪಾಪ |
ಹಾರಿಹೋಗುವದು ಸಿದ್ದಾ |
ಶ್ರೀರಮಣ ವಿಜಯವಿಠ್ಠಲರೇಯನ ಪಾದ |
ವಾರಿಜ ಪೊಗಳುವಂತೆ ಬುದ್ಧಿ ಪಾಲಿಸುವದು [೩]
SrI BAgIrathi tAyE SRuMgAra SuBakAye |
SrI BUramaNana tanayE [pa]
ninna yAtrigOsuga enna manasu puTTitu |
innu nI marisadE |
puNyanarana mADo pUtOBAvaveMdu |
dhanya jana mAnyA Baktajana prasannE [1]
Siva ninna Siradalli dharisida kAraNa
pavitraMganAdaneMdu |
avaniyoLage mahA | kavijana pELida
SravaNadiMdali BakutiyiMdali niMde [2]
dUradiMdali ninna smarisidavara pApa |
hArihOguvadu siddA |
SrIramaNa vijayaviThThalarEyana pAda |
vArija pogaLuvaMte buddhi pAlisuvadu [3]
Leave a Reply