Shobhanavennire swarga

Composer : Shri Vijayadasaru

By Smt.Shubhalakshmi Rao

ಶೋಭಾನವೆನ್ನಿರೆ ಸ್ವರ್ಗಾರೋಹಿಣಿಗೆ |
ಶೋಭಾನವೆನ್ನಿ ಶುಭವೆನ್ನಿ [ಪ]

ಹರಿಪಾದ ನಖದಿಂದ ಬ್ರಹ್ಮಾಂಡವ ಶೀಳಲು |
ಭರದಿಂದ ಇಳಿದು ಸತ್ಯಲೋಕ |
ಭರದಿಂದ ಇಳಿದು ಸತ್ಯಲೋಕಕೆ ಬಂದ |
ವಿರಜೆಗಾರುತಿ ಬೆಳಗಿರೇ (೧)
ಸರಸಿಜಾಸನನಂದು ಹರಿಪಾದ ತೊಳೆಯಲು |
ಸರಸ ಸದ್ಗುಣ ಸುರಲೋಕ |
ಸರಸ ಸದ್ಗುಣದಿ ಸುರಲೋಕಕೈದಿದಾ |
ಸ್ವರ್ಣೆಗಾರುತಿಯ ಬೆಳಗಿರೇ (೨)
ಇಂದ್ರಲೋಕವ ಸಾರಿ ಧ್ರುವನ ಮಂಡಲಕಿಳಿದು |
ಚಂದದಿಂದಲಿ ಮೇರುಗಿರಿಗೆ |
ಚಂದದಿಂದಲಿ ಮೇರುಗಿರಿಗೆ ಬಂದಾ |
ಸಿಂಧುವಿಗಾರುತಿಯ ಬೆಳಗಿರೇ (೩)
ಶತಕೋಟಿ ಎಂತೆಂಬ ಅಜನ ಮಂದಿರ ಪೊಕ್ಕು |
ಚತುರ್ಭಾಗವಾಗಿ ಕರೆಸಿದ |
ಚತುರ್ಭಾಗವಾಗಿ ಕರೆಸಿದ ಶ್ರೀ ಭೋಗ |
ವತಿಗಾರುತಿ ಬೆಳಗಿರೇ (೪)
ಇಂದ್ರ ದಿಕ್ಕಿಗೆ ಸಿತಾ ಚಕ್ಷು ಪಶ್ಚಿಮ ದಿಕ್ಕು |
ಚಂದ್ರ ಯಮ ದಿಕ್ಕಿಗೆ ಭದ್ರದೇವಿ |
ಚಂದ್ರ ಯಮ ದಿಕ್ಕಿಗೆ ಭದ್ರದೇವಿ ಅಳಕ |
ನಂದಿನಿಗಾರುತಿಯ ಬೆಳಗಿರೇ (೫)
ಕುಂದ ಮಂದರೆ ಇಳಿದು ಗಂಧ ಮಾದನಗಿರಿಗೆ |
ಹಿಂಗದೆ ಪುಟಿದು ವಾರಿನಿಧಿಯ |
ಹಿಂಗದೆ ಪುಟಿದು ವಾರಿನಿಧಿಯ ನೆರದ |
ಗಂಗೆಗಾರುತಿಯ ಬೆಳಗಿರೇ (೬)
ಗಿರಿಜೆ ಸೂಪಾರಶ್ವಕೆ ಧುಮುಕಿ ಮಾಲ್ಯವಂತಕೆ ಜಿಗಿದು |
ಪರಿದಂಬುಧಿಯ ಕೂಡಿ ಮೆರದು |
ಪರಿದಂಬುಧಿಯ ಕೂಡಿ ಮೆರದಾ |
ತ್ರಿದಶೇಶ್ವರಿಗಾರುತಿ ಬೆಳಗಿರೇ (೭)
ಕುಮುದಾದ್ರಿಗೆ ಇಳಿದು ನಲಾ ಶತ ಶೃಂಗ |
ಕ್ಷಮಧಾರಿಗಳಿಗೆ ಹಾರಿ ವನಧಿ |
ಕ್ಷಮಧಾರಿಗಳಿಗೆ ಹಾರಿ ವನಧಿ ಕೂಡಿದಾ |
ಸುಮತಿಗಾರುತಿಯ ಬೆಳಗಿರೇ (೮)
ಮೇರು ಮಂದರಕಿಳಿದು ನಿಷಿಧ ಕಾಂಚನ ಕೂಟ |
ಮೀರಿ ಹಿಮಗಿರಿಗೆ ಹಾರಿ ಬದರಿಗೆ |
ಮೀರಿ ಹಿಮಗಿರಿಗೆ ಹಾರಿ ಬದರಿಗೆ ಬಂದಾ |
ನಾರಿಗಾರುತಿಯ ಬೆಳಗಿರೇ (೯)
ಅನ್ದು ಕ್ಷಿತಿಪ ಭಗೀರಥನ ತಪಕೆ ಒಲಿದು|
ಅತಿಶಯವಾಗಿ ಧರೆಗಿಳಿದು |
ಅತಿಶಯವಾಗಿ ಧರೆಗಳಿದು ಬಂದಾ |
ಭಾಗೀರಥಿಗಾರುತಿ ಬೆಳಗಿರೇ (೧೦)
ಮುನಿ ಜನ್ಹು ಮುದದಿಂದ ಆಪೋಶನವ ಮಾಡೆ |
ಜನನಿ ಜಾಹ್ನವಿ ಎನಿಸಿದಾ|
ಜನನಿ ಜಾಹ್ನವಿ ಎನಿಸಿದಾ ಮೂರ್ಜಗದ |
ಜನನಿಗಾರುತಿಯ ಬೆಳಗಿರೇ (೧೧)
ವಿಷ್ಣು ಪ್ರಜಾಪತಿ ಕ್ಷೇತ್ರದಲಿ ನಿಂದು |
ಇಷ್ಟಾರ್ಥ ನಮಗೆ ಕೊಡುವಳು ಸತತ |
ಇಷ್ಟಾರ್ಥ ನಮಗೆ ಕೊಡುವಳು ಸತತ ಸಂ |
ತುಷ್ಟಿಗಾರುತಿಯ ಬೆಳಗಿರೇ (೧೨)
ಕ್ರಮದಿಂದ ಬಂದು ನಲಿವುತ ಸರಸ್ವತಿ |
ಯಮುನೇರ ನೆರೆದು ತ್ರಿವೇಣಿ |
ಯಮುನೇರ ನೆರೆದು ತ್ರಿವೇಣಿ ಎನಿಸಿದಾ |
ವಿಮಲೆಗಾರುತಿಯ ಬೆಳಗಿರೇ (೧೩)
ಸತ್ವ ರಜೋ ತಮ ತ್ರಿವಿಧ ಜೀವರು ಬರಲು |
ಅತ್ಯಂತವಾಗಿ ಅವರವರ |
ಅತ್ಯಂತವಾಗಿ ಅವರವರ ಗತಿ ಕೊಡುವ |
ಮಿತ್ರೆಗಾರುತಿಯ ಬೆಳಗಿರೇ (೧೪)
ಪತಿಯ ಸಂಗತಿಯಿಂದ ನಡೆತಂದು ಭಕುತಿಯಲಿ |
ಸತಿಯಲ್ಲಿ ವೇಣಿಕೊಡಲಾಗಿ |
ಸತಿಯಲ್ಲಿ ವೇಣಿ ಕೊಡಲಾಗಿ ಕಾವ ಮಹಾ |
ಪತಿವ್ರತೆಗಾರುತಿ ಬೆಳಗಿರೇ (೧೫)
ವೇಣಿಯ ಕೊಟ್ಟಂಥ ನಾರಿಯ ಭಾಗ್ಯವು |
ಏನೆಂಬೆನಯ್ಯ ಪಡಿಗಾಣೆ |
ಏನೆಂಬೆನಯ್ಯಾ ಪಡಿಗಾಣೆ ಸುಖವೀವ |
ಕಲ್ಯಾಣಿಗಾರುತಿ ಬೆಳಗಿರೇ (೧೬)
ಒಂದು ಜನ್ಮದಲಿ ವೇಣಿಯಿತ್ತವಳಿಗೆ |
ಎಂದೆಂದು ಬಿಡದೆ ಮುತ್ತೈದೆತನವ |
ಎಂದೆಂದು ಬಿಡದೆ ಮುತ್ತೈದೆತನವೀವ ಸುಖ |
ಸಾಂದ್ರೆಗಾರುತಿಯ ಬೆಳಗಿರೇ (೧೭)
ವಾಚಾಮಗೋಚರೆ ವರುಣನರ್ಧಾಂಗಿನಿ |
ಪ್ರಾಚೀನ ಕರ್ಮಾವಳಿ ಹಾರಿ |
ಪ್ರಾಚೀನ ಕರ್ಮಾವಳಿ ಹಾರಿ ಮಕರ |
ವಾಚಳಿಗಾರುತಿ ಬೆಳಗಿರೇ (೧೮)
ಅಂತರ ಬಾಹಿರ ಪಾಪ ಅನೇಕವಾಗಿರೆ |
ಸಂತೋಷದಿಂದಲಿ ಭಜಿಸಲು |
ಸಂತೋಷದಿಂದಲಿ ಭಜಿಸಲು ಪೊರೆವ ಮಹಾ |
ಕಾಂತೆಗಾರುತಿಯ ಬೆಳಗಿರೇ (೧೯)
ಗುರುಭಕುತಿ ತಾರತಮ್ಯ ಇಹಪರದಲ್ಲಿ ತಿಳಿದು |
ಹರಿ ಪರನೆಂದು ಪೊಗಳುವರ |
ಹರಿ ಪರನೆಂದು ಪೊಗಳುವರ ಪೊರೆವ |
ಕರುಣಿಗಾರುತಿಯ ಬೆಳಗಿರೇ (೨೦)
ಜಗದೊಳು ಪ್ರಯಾಗ ಕ್ಷೇತ್ರದಲ್ಲಿ ನಿಂದು |
ಬಗೆ ಬಗೆ ಶುಭವ ಕೊಡುವಳು |
ಬಗೆ ಬಗೆ ಶುಭವ ಕೊಡುವ ವಿಜಯವಿಠ್ಠಲನ |
ಮಗಳಿಗಾರುತಿಯ ಬೆಳಗಿರೇ ಶೋಭಾನೆ (೨೧)


SOBAnavennire svargArOhiNige |
SOBAnavenni SuBavenni [pa]

haripAda naKadiMda brahmAMDava SILalu |
BaradiMda iLidu satyalOka |
BaradiMda iLidu satyalOkake baMda |
virajegAruti beLagirE (1)
sarasijAsananaMdu haripAda toLeyalu |
sarasa sadguNa suralOka |
sarasa sadguNadi suralOkakaididA |
svarNegArutiya beLagirE (2)
iMdralOkava sAri dhruvana maMDalakiLidu |
caMdadiMdali mErugirige |
caMdadiMdali mErugirige baMdA |
siMdhuvigArutiya beLagirE (3)
SatakOTi eMteMba ajana maMdira pokku |
caturBAgavAgi karesida |
caturBAgavAgi karesida SrI BOga |
vatigAruti beLagirE (4)
iMdra dikkige sitA cakShu paScima dikku |
caMdra yama dikkige BadradEvi |
caMdra yama dikkige BadradEvi aLaka |
naMdinigArutiya beLagirE (5)
kuMda maMdare iLidu gaMdha mAdanagirige |
hiMgade puTidu vArinidhiya |
hiMgade puTidu vArinidhiya nerada |
gaMgegArutiya beLagirE (6)
girije sUpAraSvake dhumuki mAlyavaMtake jigidu |
paridaMbudhiya kUDi meradu |
paridaMbudhiya kUDi meradA |
tridaSESvarigAruti beLagirE (7)
kumudAdrige iLidu nalA Sata SRuMga |
kShamadhArigaLige hAri vanadhi |
kShamadhArigaLige hAri vanadhi kUDidA |
sumatigArutiya beLagirE (8)
mEru maMdarakiLidu niShidha kAMcana kUTa |
mIri himagirige hAri badarige |
mIri himagirige hAri badarige baMdA |
nArigArutiya beLagirE (9)
andu kShitipa BagIrathana tapake olidu|
atiSayavAgi dharegiLidu |
atiSayavAgi dharegaLidu baMdA |
BAgIrathigAruti beLagirE (10)
muni janhu mudadiMda ApOSanava mADe |
janani jAhnavi enisidA|
janani jAhnavi enisidA mUrjagada |
jananigArutiya beLagirE (11)
viShNu prajApati kShEtradali niMdu |
iShTArtha namage koDuvaLu satata |
iShTArtha namage koDuvaLu satata saM |
tuShTigArutiya beLagirE (12)
kramadiMda baMdu nalivuta sarasvati |
yamunEra neredu trivENi |
yamunEra neredu trivENi enisidA |
vimalegArutiya beLagirE (13)
satva rajO tama trividha jIvaru baralu |
atyaMtavAgi avaravara |
atyaMtavAgi avaravara gati koDuva |
mitregArutiya beLagirE (14)
patiya saMgatiyiMda naDetaMdu Bakutiyali |
satiyalli vENikoDalAgi |
satiyalli vENi koDalAgi kAva mahA |
pativrategAruti beLagirE (15)
vENiya koTTaMtha nAriya BAgyavu |
EneMbenayya paDigANe |
EneMbenayyA paDigANe suKavIva |
kalyANigAruti beLagirE (16)
oMdu janmadali vENiyittavaLige |
eMdeMdu biDade muttaidetanava |
eMdeMdu biDade muttaidetanavIva suKa |
sAMdregArutiya beLagirE (17)
vAcAmagOcare varuNanardhAMgini |
prAcIna karmAvaLi hAri |
prAcIna karmAvaLi hAri makara |
vAcaLigAruti beLagirE (18)
aMtara bAhira pApa anEkavAgire |
saMtOShadiMdali Bajisalu |
saMtOShadiMdali Bajisalu poreva mahA |
kAMtegArutiya beLagirE (19)
guruBakuti tAratamya ihaparadalli tiLidu |
hari paraneMdu pogaLuvara |
hari paraneMdu pogaLuvara poreva |
karuNigArutiya beLagirE (20)
jagadoLu prayAga kShEtradalli niMdu |
bage bage SuBava koDuvaLu |
bage bage SuBava koDuva vijayaviThThalana |
magaLigArutiya beLagirE SOBAne (21)

Leave a Reply

Your email address will not be published. Required fields are marked *

You might also like

error: Content is protected !!