Namo namo Krishnaveni

Composer : Shri Prasannavenkata dasaru

By Smt.Shubhalakshmi Rao

ನಮೋ ನಮೋ ಕೃಷ್ಣವೇಣಿ
ನಮೋ ನಮೋ ಕೃಷ್ಣವೇಣಿ ಕಲ್ಯಾಣಿ [ಪ.]

ಈ ಜನ್ಮದಘವು ನಾನಾ ಜನ್ಮ ಕೃತ ದೋಷ
ಆರ್ಜಿತವಾದ ಪಂಚ ಮಹಾಪಾಪವು
ತ್ರಿಜಗತ್ಪಾವನಿಯೆ ನಿನ್ನ ಕಂಡು ನಾ ಕಳೆದೆ
ರಾಜಿಸುವ ದಿವ್ಯಗತಿಯೀಯೆ ಎನ್ನತಾಯೆ (೧)

ವಿಪ್ರಮುನಿ ಸುರನರರು ಕನ್ಯಕ್ಕೆ ಗುರು ಬರಲು
ಕ್ಷಿಪ್ರ ನೆರೆದರು ಉಭಯತೀರವಿಡಿದು
ಸುಪ್ರಾರ್ಥನೆಯ ಮಾಡಿ ಆನಂದದಿ ಹರಿಯನೆ
ಪ್ರಸನ್ನೀ ಕರಿಸಿಕೊಳ್ಳುವರಮ್ಮ (೨)

ನಿರ್ಮಳಾತ್ಮಕ ಗಂಗೆ ಸಂಗೆ ಗುಣೋತ್ತುಂಗೆ
ಹಿಂಗಿಸು ಭವವ ಪಾವನತರಂಗೆ
ಜಂಗಮ ಜಡಾತ್ಮರನುದ್ಧರಿಸುತಿಹೆ ಸದಾ
ಮಂಗಳ ಶ್ರೀಪ್ರಸನ್ವೆಂಕಟನೊಲುಮೆಯಲ್ಲಿ (೩)


namO namO kRuShNavENi
namO namO kRuShNavENi kalyANi [pa.]

I janmadaGavu nAnA janma kRuta dOSha
ArjitavAda paMca mahApApavu
trijagatpAvaniye ninna kaMDu nA kaLede
rAjisuva divyagatiyIye ennatAye (1)

vipramuni suranararu kanyakke guru baralu
kShipra neredaru uBayatIraviDidu
suprArthaneya mADi AnaMdadi hariyane
prasannI karisikoLLuvaramma (2)

nirmaLAtmaka gaMge saMge guNOttuMge
hiMgisu Bavava pAvanataraMge
jaMgama jaDAtmaranuddharisutihe sadA
maMgaLa SrIprasanveMkaTanolumeyalli (3)

Leave a Reply

Your email address will not be published. Required fields are marked *

You might also like

error: Content is protected !!