Jaya Krishnaveni

Composer : Shri Vijayadasaru

By Smt.Shubhalakshmi Rao

ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ
ನೀ ತಮತಗುಣ ಶ್ರೇಣಿ ನಿತ್ಯ ಕಲ್ಯಾಣಿ [ಪ]

ಹರಿಜಡಿಯಲಿ ಜನಿಸಿ ಹರಿಪಾದ ಜಲವೆನಿಸಿ
ಮುರಹರನ ವರ್ಣ ಪೆಸರವನೇ ಪೊತ್ತು
ಧರೆಯೊಳಗೆ ಮಹಾಬಳೇಶ್ವರದಲ್ಲಿ ನೆಲೆಯಾಗಿ
ಪೊರಿದೆ ಶರಣಾಗತರ ದುರಿತಗಳ ತರಿದೆ (೧)

ದೋಷರಹಿತಾಥೆರೆಯೊಳು ಸಾಸಿರ ಭಾಗದಲಿ
ಆ ಸಲಿಲ ಬಿಂದು ಪವಮಾನ ಬಂದೂ
ಬೀಸಿದಾ ಸಮಯದಲಿ ಜೀವರಾಸಿಯ ಮೇಲೆ
ಸೂಸಿ ಬೀಳಲು ಕ್ಲೇಶ ಶೋಕ ವಿನಾಶ (೨)

ಅಷ್ಟಾರ್ಥಮಾಸ ಕೃಷ್ಣಪಕ್ಷ ಚತುರ್ದಶಿ
ಕೃಷ್ಣವಾರ ವಿಷ್ಣು ತಾರೆಯಲ್ಲೀ
ಕೃಷ್ಣಕೃಷ್ಣಾ ಎಂದು ನಿಷ್ಠೆಯಿಂದಲಿ ಮನ
ಮುಟ್ಟಿ ಸ್ನಾನವ ಮಾಡೆ ಕಷ್ಟ ಪರಿಹರಿಪ (೩)

ಸೂರಪಾಲಿ ಕಪಟ ಸಂಗಮಛಾಯಾ
ಶ್ರೀ ಶೈಲ ವರ ಚತುಸ್ಥಾನಗಳಲಿ ವಾಸಮಾಡಿ ಇರಲು
ವಾರಣಾಶಿಯ ಫಲಗರೆದು ಜೀವನ್ಮು
ಕ್ತರನು ಮಾಡಿ ಪೊರೆದೇ (೪)

ಕಲಿಯುಗದಿ ಕೃಷ್ಣಾ ಸ್ನಾನ ಕೃಷ್ಣ ಸ್ಮರಣಿ ವೆ
ಗ್ಗಳವೆಂದು ಅಜನ ಸತಿ ಪೊಗಳಲು
ಜಲನಿಧಿಯ ಉಭಯಮುಖದಲಿ ಕೂಡಿ ಭಕ್ತರಿಗೆ
ಒಲಿದು ಸಿರಿ ವಿಜಯವಿಠ್ಠಲ ಕಾಣಿಸಿದಿಯಾ (೫)


jaya kRuShNavENi durjanara gaMTalagANi
nI tamataguNa SrENi nitya kalyANi [pa]

harijaDiyali janisi haripAda jalavenisi
muraharana varNa pesaravanE pottu
dhareyoLage mahAbaLESvaradalli neleyAgi
poride SaraNAgatara duritagaLa taride (1)

dOSharahitAthereyoLu sAsira BAgadali
A salila biMdu pavamAna baMdU
bIsidA samayadali jIvarAsiya mEle
sUsi bILalu klESa SOka vinASa (2)

aShTArthamAsa kRuShNapakSha caturdaSi
kRuShNavAra viShNu tAreyallI
kRuShNakRuShNA eMdu niShTheyiMdali mana
muTTi snAnava mADe kaShTa pariharipa (3)

sUrapAli kapaTa saMgamaCAyA
SrI Saila vara catusthAnagaLali vAsamADi iralu
vAraNASiya Palagaredu jIvanmu
ktaranu mADi poredE (4)

kaliyugadi kRuShNA snAna kRuShNa smaraNi ve
ggaLaveMdu ajana sati pogaLalu
jalanidhiya uBayamuKadali kUDi Baktarige
olidu siri vijayaviThThala kANisidiyA (5)

Leave a Reply

Your email address will not be published. Required fields are marked *

You might also like

error: Content is protected !!