Smarisi teerthakshetra

Composer : Shri Jagannatha dasaru

By Smt.Shubhalakshmi Rao

ಸ್ಮರಿಸಿ ತೀರ್ಥಕ್ಷೇತ್ರ ಸಜ್ಜನರು ನಿತ್ಯದಲಿ
ಅರಣೋದಯದಲೆದ್ದು ಭಕ್ತಿ ಪೂರ್ವಕವಾಗಿ
ಕಠಿಣಶ್ರಮದಿ ಮಾಳ್ಪ ಪಾಪ ರಾಶಿಗಳ
ಪರಿಹರಿಸುತ್ತ ಸಂತಯಿಸುವಾ ||ಪ||

ಭಾಗೀರಥಿ ಸರಸ್ವತಿ ಯಮುನಾ ವಾರಾಣಾ
ಶ್ರೀ ಗೋದ ಫಲ್ಗುಣಿ ಶೋಣ ಭದ್ರಾ ನರ್ಮ
ದಾ ಗಂಡಕಿ ಭಿಮರಥಿ ತುಂಗಭದ್ರೆ
ಪ್ರಯಾಗ ತ್ರಿವೇಣಿ ಹೇಮಾ
ವೇಗವತಿ ಗಾಯತ್ರೀ ಕಾಶಿ ಮಣಿಕರ್ಣಿ
ಕಾ ಗೌತಮಿ ವಿಯದ್ಗಂಗಾ ಕುಮುದ್ವತೀ
ಕಾಗಿನೀ ನೇತ್ರಾವತಿ ಹೈಮ ಸಿಂಧು
ಪಾಪಾಘನಾಶಿನೀ (೧)

ಸರಯು ಜಯಮಂಗಳ ಜಮದಗ್ನಿ ವರತಾಮ್ರ
ಪರಣಿ ಯೋಗಾನಂದ ಕೃತಮಾಲಕುಹು ಮಹೇ
ಶ್ವರಿ ಶಂಖ ಚಕ್ರವತಿ ಭವನಾಶಿನಿ ಗದಾಧರ ಮೇನಕಾ
ಧುನಾಶಿ ಗರುಡ ಮದಿರಾ
ಮರುದ್ವತಿ ಸ್ವರ್ಣಮುಖರಿ ವರ ಝರತಾಪಿನಿ ಕಾಳಿ ಸೌ
ಪರಣಿ ದಕ್ಷಿಣೋತ್ತರ ಪಿನಾಕಿ ಕಪಿಲ ಶೀತಳ ಕಾನಂದ
ಕುರಮುಖಿ ಪ್ರಣವಸಿದ್ಧ (೨)

ಕಾವೇರಿ ಸಿಧು ಮಾಲತಿ ಗಾರ್ಗಿಣಿ ಹರಿ
ದ್ರವತಿ ಇಂದ್ರಾಣಿ ಕುಂದ ಕುಂದಿನಿ ಶೈವ
ದೇವವತಿ ಪಾತಾಳ ಗಂಗಾ ಪುನಹ ನೀರಾ ಕುಮಾರಧಾರಾ
ಸಾವಿತ್ರಿ ದಾನ್ಯಮಾಲಾ ಪುಷ್ಪವತಿ ಲೋಕ
ಪಾವನಿ ಮೌಳಿ ಮೌಕ್ತಿಕ ಸಿಂಧು ಧರ್ಮಕು
ಶಾವಂತಿನಿ ಚಕ್ರತೀರ್ಥ ಭವ ನಾಶಿನಿ
ವರದಾ ಮಲಾಪಹಾರಿ (೩)

ಸ್ವಾಮಿ ಪುಷ್ಕರಣಿ ಮಾನಸ ಚಂದ್ರ ಪುಷ್ಕರಣಿ
ಭೂಮಂಡಲದೊಳ್ ಉತ್ತಮೋತ್ತಮ ತ್ರಿಪುಷ್ಕರಣಿ
ಶ್ರೀ ಮಧ್ವ ನಿತ್ಯ ಪುಷ್ಕರಣಿ ಸೀತಾ
ಪದ್ಮಸರ ಚಂದ್ರಭಾಗ ತೀರ್ಥ
ವಾಮನ ಮಯೂರ ಪಂಪಾ ಸರೋವರ ಪುಣ್ಯ
ಧಾಮ ವ್ಯಾಸ ಸಮುದ್ರ ಧವಳಗಂಗಾ ಸುಸಾ
ಧ್ಯಮೃತ ಸಮುದ್ರ ಗುರು ಭೀಮಸೇನ ತಟಾಕ
ರೋಮಹರ್ಷ ತೀರ್ಥ (೪)

ದ್ವಾರಕಾನಗರ ಸಾಲಗ್ರಾಮ ಟರರ ಬದರಿ ಕೇ
ದಾರ ನರನಾರಾಯಣ ಶ್ರೀ ಮಜ್ಜಗನ್ನಾಥ ಶ್ರೀ ಮುಷ್ಣ
ಮೇರು ಪಾಶ್ರ್ವ ಮಂದರ ಸುಪಾಶ್ರ್ವ
ಮೈನಾಕ ಕೈಲಾಸ ಕಂಚಿ
ಶ್ರೀರಂಗನಾಥ ನೈಮಿಷ ದ್ವೈತವನ ಚಂಪ
ಕಾರುಣ್ಯ ಕಾಶಿ ಪಂಪಾವಂತಿಕಾ ಪುರಿ
ಗೌರಿ ಮಯೂರ ಸಿಂಹಾದ್ರಿ ಪಾಟಲ
ಹರಿದ್ವಾರ ಛಾಯಾಪಿಪ್ಪಲ (೫)

ಕೇದಾರ ಸಾಗರ ಮಂದಾಕಿನಿ ಕುಸುಮವತಿ
ಆದಿಸುಬ್ರಹ್ಮಣ್ಯ ಕೋಟೇಶ್ವರ ನಂದಿ
ಪಾದ ಕ್ರೌಂಚಾದ್ರಿ ಮಹಾನಂದಿ ಶಂಕರ ನಾಮ
ನಾರಯಣ ನಿವರ್ತಿ
ವೇದಪಾದ ಯಯಾತಿ ಗಿರಿ ಕಾಲಹಸ್ತಿ ಕೌ
ಮೋದಕೀ ಪಾಡುರಂಗ ಕ್ಷೇತ್ರ ಶ್ರೀ ವಿಷ್ಣು
ಪಾದ ಗಯಾ ಕಾಳೇಶ್ವರೀ ಹಸ್ತನಾಪುರಿ
ಪಾಟಲೀ ಮಂತ್ರಾಲಯ (೬)

ಗೋವರ್ಧನಾದ್ರಿ ಮೈನಾಕ ಮಂದರ ಮಲಯ
ಕೈವಲ್ಯನಾಥ ಕಾಶೀರ ಜಾಂಬವತಿ ವೃಂ
ದಾವನ ಧನುಷ್ಕೋಟಿ ವಾತಾಪುರಿ
ಕನ್ಯಾಕುವರಿ ಕೈಲಾದ್ರಿ ವೃಷಭಾ
ಶ್ರೀ ವಿರೂಪಾಕ್ಷ ಕುಂದರ ನಂದಪುರಿ ಮಾಯಾ
ಶ್ರೀವತ್ಸ ಗಂಧಮಾದನ ಚಿತ್ರಕೂಟ ದ್ವಾ
ರಾವತಿ ವ್ಲಾಘ್ರಪುರಿಗೋಕುಲ
ನರಾಚಲಾ ಸೌಭದ್ರಿ ಆದಿನಾಥ (೭)

ಈ ಮಹಿಮಂಡಲದೊಳಿಪ್ಪ ತೀರ್ಥಕ್ಷೇತ್ರ
ನಾಮಗಳ ಕಾಲತ್ರಯದಲ್ಲಿ ಸರಿಸುತಿಹ
ಧೀಮಂತರಿಗೆ ಸಂಚಿತಾಪ ಪರಿಹರದಾನಂತರದಲಿ
ಸೋಮಾರ್ಕರುಳನಕ ಸಕಲ ಭೋಗಗಳ ಸು
ತ್ರಾಮಲೊಕದ ಲುಣಿಸಿ ಕರುಣಾಳು ಪ್ರಾತ್ಯಕೆ ಸ್ವ
ಧಾಮ ಮುಕ್ತರ ಮಾಳ್ಪನು ಅಹುದು
ಅಹುದೆಂದು ಸೂತ ಶೌನಕಣೆ ಪೇಳ್ದ (೮)

ಈ ಭರತ ಖಂಡದೊಳಗುಳ್ಳ ತೀರ್ಥಕ್ಷೇತ್ರ
ವೈಭವಾಬ್ಜ ಭವಾಂಡ ಪಾರನದೊಳಗೆ ಹರಿ
ನಾಭಿ ಸಂಭವ ಪೇಳ್ದ ನಾರದನಿಗಿಸಿತೆಂದು
ಪರಮಕಾರುಣ ದಿಂದ
ಸ್ತ್ರೀಬಾಲ ಗೋವಿಪ್ರಮಾತ ಪಿತೃಗಳ ಧನ
ಲೋಭದಿಂದಲಿಕೊಂದ ಪಾತಕವ ಪರಿಹರಿಸಿ
ಶ್ರೀಭೂರಮಣ ಜಗನ್ನಾಥ ವಿಠ್ಠಲ ಕೊಡುವ
ಬೇಡಿದಿಷ್ಟಾರ್ಥಗಳನು (೯)


smarisi tIrthakShEtra sajjanaru nityadali
araNOdayadaleddu Bakti pUrvakavAgi
kaThiNaSramadi mALpa pApa rASigaLa
pariharisutta saMtayisuvA ||pa||

BAgIrathi sarasvati yamunA vArANA
SrI gOda PalguNi SONa BadrA narma
dA gaMDaki Bimarathi tuMgaBadre
prayAga trivENi hEmA
vEgavati gAyatrI kASi maNikarNi
kA gautami viyadgaMgA kumudvatI
kAginI nEtrAvati haima siMdhu
pApAGanASinI (1)

sarayu jayamaMgaLa jamadagni varatAmra
paraNi yOgAnaMda kRutamAlakuhu mahE
Svari SaMKa cakravati BavanASini gadAdhara mEnakA
dhunASi garuDa madirA
marudvati svarNamuKari vara JaratApini kALi sau
paraNi dakShiNOttara pinAki kapila SItaLa kAnaMda
kuramuKi praNavasiddha (2)

kAvEri sidhu mAlati gArgiNi hari
dravati iMdrANi kuMda kuMdini Saiva
dEvavati pAtALa gaMgA punaha nIrA kumAradhArA
sAvitri dAnyamAlA puShpavati lOka
pAvani mauLi mauktika siMdhu dharmaku
SAvaMtini cakratIrtha Bava nASini
varadA malApahAri (3)

svAmi puShkaraNi mAnasa caMdra puShkaraNi
BUmaMDaladoL uttamOttama tripuShkaraNi
SrI madhva nitya puShkaraNi sItA
padmasara caMdraBAga tIrtha
vAmana mayUra paMpA sarOvara puNya
dhAma vyAsa samudra dhavaLagaMgA susA
dhyamRuta samudra guru BImasEna taTAka
rOmaharSha tIrtha (4)

dvArakAnagara sAlagrAma Tarara badari kE
dAra naranArAyaNa SrI majjagannAtha SrI muShNa
mEru pASrva maMdara supASrva
mainAka kailAsa kaMci
SrIraMganAtha naimiSha dvaitavana caMpa
kAruNya kASi paMpAvaMtikA puri
gauri mayUra siMhAdri pATala
haridvAra CAyApippala (5)

kEdAra sAgara maMdAkini kusumavati
AdisubrahmaNya kOTESvara naMdi
pAda krauMcAdri mahAnaMdi SaMkara nAma
nArayaNa nivarti
vEdapAda yayAti giri kAlahasti kau
mOdakI pADuraMga kShEtra SrI viShNu
pAda gayA kALESvarI hastanApuri
pATalI maMtrAlaya (6)

gOvardhanAdri mainAka maMdara malaya
kaivalyanAtha kASIra jAMbavati vRuM
dAvana dhanuShkOTi vAtApuri
kanyAkuvari kailAdri vRuShaBA
SrI virUpAkSha kuMdara naMdapuri mAyA
SrIvatsa gaMdhamAdana citrakUTa dvA
rAvati vlAGrapurigOkula
narAcalA sauBadri AdinAtha (7)

I mahimaMDaladoLippa tIrthakShEtra
nAmagaLa kAlatrayadalli sarisutiha
dhImaMtarige saMcitApa pariharadAnaMtaradali
sOmArkaruLanaka sakala BOgagaLa su
trAmalokada luNisi karuNALu prAtyake sva
dhAma muktara mALpanu ahudu
ahudeMdu sUta SaunakaNe pELda (8)

I Barata KaMDadoLaguLLa tIrthakShEtra
vaiBavAbja BavAMDa pAranadoLage hari
nABi saMBava pELda nAradanigisiteMdu
paramakAruNa diMda
strIbAla gOvipramAta pitRugaLa dhana
lOBadiMdalikoMda pAtakava pariharisi
SrIBUramaNa jagannAtha viThThala koDuva
bEDidiShTArthagaLanu (9)

Leave a Reply

Your email address will not be published. Required fields are marked *

You might also like

error: Content is protected !!