Jaya Jahnavi devi

Composer : Shri Vijayadasaru

By Smt.Shubhalakshmi Rao

ಜಯ ಜಾಹ್ನವಿ ದೇವಿ ಜಯ ಭಕುತ ಸಂಜೀವಿ
ಜಯ ಪ್ರದಾಯಕ ವೀವೆ ಜಯ ಎಮ್ಮ ಕಾವೆ [ಪ]

ಅಜನ ಸಭೆಯಲಿ ವರುಣಗೆ ಶಾಪವು ಬರಲು
ಪ್ರಜಪಾಲನಾದ ಶಂತುನ ನಾಮದೀ
ನಿಜರೂಪದಲಿ ಬಂದು ಅಷ್ಟವಸುಗಳ ಪಡೆದೆ
ಭಜಿಸಬಲ್ಲೆನೆ ನಿನ್ನ ಬಹು ಭಾಗ್ಯವಂತೇ [೧]

ಭಗೀರಥಗೆ ವೊಲಿದು ಭವದೂರ ಪಾವನಕಾರೆ
ಸಗರರಾಯನ ವಂಶವನ್ನೆ ಉದ್ಧಾರೆ
ಅಗಣಿತೋದಯ ಪಾರಂವಾರೆ ಶುಭಶರೀರೆ
ಮುಗಿವೆನು ಕರವೆತ್ತಿ ಸಂತತ ವಾರಂವಾರೆ [೨]

ಏನು ಧನ್ಯರೊ ಎನ್ನ ಕುಲಕ ಪಾವನೆಯೆನಲು
ನೀನುಬ್ಬಿ ಪೊರದೆ ಉತ್ಸಾಹದಿ ಮೆರೆದೆ
ಮಾನನಿಧಿ ವಿಜಯವಿಠ್ಠಲನ ಸನ್ನಿಧಿಯಲ್ಲಿ
ಜ್ಞಾನಪೂರ್ವಕ ವೊಲಿದು ಭಕುತಿ ಕೊಡು ಎನಗೆ [೩]


jaya jAhnavi dEvi jaya Bakuta saMjIvi
jaya pradAyaka vIve jaya emma kAve [pa]

ajana saBeyali varuNage SApavu baralu
prajapAlanAda SaMtuna nAmadI
nijarUpadali baMdu aShTavasugaLa paDede
Bajisaballene ninna bahu BAgyavaMtE [1]

BagIrathage volidu BavadUra pAvanakAre
sagararAyana vaMSavanne uddhAre
agaNitOdaya pAraMvAre SuBaSarIre
mugivenu karavetti saMtata vAraMvAre [2]

Enu dhanyaro enna kulaka pAvaneyenalu
nInubbi porade utsAhadi merede
mAnanidhi vijayaviThThalana sannidhiyalli
j~jAnapUrvaka volidu Bakuti koDu enage [3]

Leave a Reply

Your email address will not be published. Required fields are marked *

You might also like

error: Content is protected !!