Composer : Shri Harapanahalli Bheemavva
ಗಂಗಾದೇವಿ ನಮೋ ನಮೋ ಗಂಗಾದೇವಿ ತರಂಗಿಣಿ
ನೀಮುದ್ದು ಮಂಗಳಾಂಗನ ಮುಖ ತೋರಿಸೇ ಗಂಗಾದೇವಿ |ಪ|
ವಾಮನ ನಖದಿಂದ ಒಡೆದು ಬ್ರಹ್ಮಾಂಡ
ಬಹಿರ್ ಆವರಣದಿಂದಿಳದೀಯೆ
ಬಹಿರಾವರಣದಿಂದಿಳಿದು ನಿರಂಜನ
ಆಲಯದೊಳು ಬಂದೆ ಭರದಿಂದೆ ||೧||
ಹರಿ ಪಾದೋದಕವಾಗಿ ಹರಿದು ಬಂದಿಯೆ ನೀನು
ಹರನ ಜಟೆಯಲ್ ವಾಸವ ಮಾಡಿ
ಹರನ ಜಟೆಯಲ್ ವಾಸಮಾಡಿ ನೀ
ಮೇರು ಗಿರಿಯಲ್ಲಿ ನಾಲ್ಕು ಸೀಳಾದಿಯೆ ||೨||
ಚಕ್ಷು ಭದ್ರಾ ಸೀತ ಎಂಬ ಮೂವರ ಬಿಟ್ಟು
ಭರತ ಖಂಡಕೆ ಬಂದಿ ಬಹು ದೂರ
ಭರತ ಖಂಡಕೆ ಬಂದಿ ಬಹು ದೂರ ಬಾಗಮ್ಮ
ಪ್ರತ್ಯಕ್ಷ ಅಳಕನಂದನ ತಾಯೀ ||೩||
ಸಾಗರನರಸಿ ಪ್ರಯಾಗದಿ ಮರದ ,
ಬಾಗಿಣವನು ಕೊಂಡು ವೇಣಿಯದಾನ
ಬಾಗಿಣವನು ಕೊಂಡು ವೇಣಿಯದಾನ ಮುತ್ತೈದೇ
ರಾಗೆಂದ್-ಹರಸಿ ಪೂಜೆಯಗೊಂಬೇ ||೪||
ಸಗರನ ಮಕ್ಕಳ ಅಳಿವೆ ಕಡಿವೆನೆಂದು
ಭಗೀರಥನ್ ಹಿಂದೆ ಬಂದಿಯೆನೀನು
ಭಗೀರಥನ್ ಹಿಂದೆ ಬಂದಿಯೆ ಹಿಮಾಲಯ ದಾಟಿ
ಜಗವನುಧ್ಧರಿಸುವ ಜಾಹ್ನವಿ ||೫||
ಯಮುನ ಸರಸ್ವತಿಕೂಡ ಗಮನ ಮಾಡುವ ಗಂಗ
ಸಮನಾಗಿ ಹರದಿ ಸಂಗಮಳಾಗಿ
ಸಮನಾಗಿ ಹರದಿ ಸಂಗಮಳಾಗಿ ತ್ರಿವೇಣಿ
ಯುಗಳ ಪಾದಗಳಾರು ತೋರಿಸೇ ||೬||
ಭೀಷ್ಮನ ಜನನಿ ಭೀಮೇಶ ಕೃಷ್ಣನ ಪುತ್ರಿ
ದೋಷವ ಕಳದು ಸಂತೋಷದಿ
ದೋಷವ ಕಳದು ಸಂತೋಷದಿ ಸಾಯುಜ್ಯ
ಬ್ಯಾಸರದಲೆ ಕೊಟ್ಟು ಸಲಹಮ್ಮಾ ||೭||
gaMgAdEvi namO namO gaMgAdEvi taraMgiNi
nImuddu maMgaLAMgana mukha tOrisE gaMgAdEvi |pa|
vAmana nakhadiMda oDedu brahmAMDa
bahir AvaraNadiMdiLadIye
bahirAvaraNadiMdiLidu niraMjana
AlayadoLu baMde bharadiMde ||1||
hari pAdOdakavAgi haridu baMdiye nInu
harana jaTeyal vAsava mADi
harana jaTeyal vAsamADi nI
mEru giriyalli nAlku sILAdiye ||2||
cakShu bhadrA sIta eMba mUvara biTTu
bharata khaMDake baMdi bahu dUra
bharata khaMDake baMdi bahu dUra bAgamma
pratyakSha aLakanaMdana tAyI ||3||
sAgaranarasi prayAgadi marada ,
bAgiNavanu koMDu vENiyadAna
bAgiNavanu koMDu vENiyadAna muttaidE
rAgeMd-harasi pUjeyagoMbE ||4||
sagarana makkaLa aLive kaDiveneMdu
bhagIrathan hiMde baMdiyenInu
bhagIrathan hiMde baMdiye himAlaya dATi
jagavanudhdharisuva jAhnavi ||5||
yamuna sarasvatikUDa gamana mADuva gaMga
samanAgi haradi saMgamaLAgi
samanAgi haradi saMgamaLAgi trivENi
yugaLa pAdagaLAru tOrisE ||6||
bhIShmana janani bhImESa kRuShNana putri
dOShava kaLadu saMtOShadi
dOShava kaLadu saMtOShadi sAyujya
byAsaradale koTTu salahammA ||7||
Leave a Reply