Composer : Shri Venkata Vittala
ವೃಂದಾವನ ನೋಡಿರೋ
ರಾಘವೇಂದ್ರ ರಾಯರ ವೃಂದಾವನಾ ನೋಡಿರೋ |ಪ|
ವೃಂದಾವನಾ ನೋಡಿ ಆನಂದ ಮದವೇರಿ |
ಚಂದದಿ ದ್ವಾದಶ ಪೌಂಡ್ರಾಂಕಿತಗೊಂಬ | ಅ.ಪ. |
ತುಂಗಾ ಭದ್ರ ನದಿಯ ತೀರದಿ ಇದ್ದು |
ತುಂಗಾ ಮಂಟಪದ ಮಧ್ಯದಲಿ |
ಶೃಂಗಾರ ತುಳಸೀ ಪದ್ಮಾಕ್ಷಿ ಸರಗಳಿಂದ |
ಮಂಗಳಕರ ಮಹಾಮಹಿಮೆಯಿಂದೊಪ್ಪುವ | ೧ |
ದೇಶ ದೇಶದಿ ಮೆಚ್ಚುತ ಇಲ್ಲಿಗೆ ಬಂದು |
ವಾಸವಾಗಿ ಸೇವಿಪ |
ಭಾಷೆ ಕೊಟ್ಟಂದಧಿ ಬಹುವಿಧ ವರಗಳ |
ಸೂಸುವ ಕರ ಮಹಾ ಮಹಿಮೆಯಿಂದೊಪ್ಪುವ | ೨ |
ನಿತ್ಯ ಸನ್ನಿಧಿ ಸೇವಿಪ ಭಕ್ತರಿಗೆಲ್ಲ |
ಮತ್ತೆ ಅಭೀಷ್ಟೆಯ ಕೊಡುವ |
ಸತ್ಯಾದಿ ಗುಣಸಿಂಧು ವೆಂಕಟ ವಿಠಲನ |
ನಿತ್ಯ ಸನ್ನಿಧಿಯಿಂದ ನಿರುತ ಪೂಜೆಯಗೊಂಬ | ೩ |
vRuMdAvana nODirO
rAghavEMdra rAyara vRuMdAvanA nODirO |pa|
vRuMdAvanA nODi AnaMda madavEri |
caMdadi dvAdaSa pouMDrAMkitagoMba | a.pa. |
tuMgA Badra nadiya tIradi iddu |
tuMgA maMTapada madhyadali |
SRuMgAra tuLasI padmAkShi saragaLiMda |
maMgaLakara mahAmahimeyiMdoppuva | 1 |
dESa dESadi mecchuta illige baMdu |
vAsavAgi sEvipa |
BAShe koTTaMdadhi bahuvidha varagaLa |
sUsuva kara mahA mahimeyiMdoppuva | 2 |
nitya sannidhi sEvipa Baktarigella |
matte aBIShTeya koDuva |
satyAdi guNasiMdhu veMkaTa viThalana |
nitya sannidhiyiMda niruta pUjeyagoMba | 3 |
Leave a Reply