Composer : Shri Vijayeendra tirtharu
ಯೋಗಿ ವ್ಯಾಸರಾಯರೆಂಬ ವಿಚಿತ್ರ ಮೇಘ
ಬೇಗ ವಿಷ್ಣುಪದವ ತೋರಿಸುತ್ತ ಬಂತಿದೆಕೊ [ಪ]
ಮಾಯಿಮತವೆಂಬ ತಾರಾಮಂಡಲವ ಮುಸುಕುತ್ತ
ವಾಯುಗತಿಯಂತೆ ಗಮಿಸುತಲಿ
ಹೇಯ ಕಾಮಾದಿಗಳೆಂಬ ರಜವನಡಗಿಸುತ
ನಾಯಕನುಪೇಂದ್ರ-ನಾಜ್ಞೆಯ ಪಡೆದು [೧]
ಅಂಗಜನಯ್ಯನೆ ಪರನೆಂದು ಘುಡಿಘುಡಿಸುತ್ತ
ಕಂಗಳೆಂಬ ಮಿಂಚನೆ ನೆರಹಿ ಲೋಕದಿ
ಹಿಂಗದೆ ಪರಿವ ಅಜ್ಞಾನವೆಂಬ ಕತ್ತಲೆಯ
ಭಂಗಿಸಿ ಸುರಪಥವ ತೋರಿಸುತ್ತ [೨]
ಸಿರಿಯರಸನ ಸಮ್ಯಕ್ ಜ್ಞಾನವೆಂಬ ಪೈರಿಗೆ
ಬೇರು ಬಿಡಿಸಿ ಹರಿಕಥೆಯೆಂಬ ಮಳೆಗರೆದು
ನೆರೆ ಶಿಷ್ಯ ಮನವೆಂಬ ಕೆರೆ ತುಂಬಿಸಿ
ಕರಗಳೆಂಬ ಭರಕೋಡಿ ಹರಿಸುತ ವಿಜಯೀಂದ್ರನ ಗುರು [೩]
yOgi vyAsarAyareMba vicitra mEGa
bEga viShNupadava tOrisutta baMtideko [pa]
mAyimataveMba tArAmaMDalava musukutta
vAyugatiyaMte gamisutali
hEya kAmAdigaLeMba rajavanaDagisuta
nAyakanupEMdra-nAj~jeya paDedu [1]
aMgajanayyane paraneMdu ghuDighuDisutta
kaMgaLeMba miMcane nerahi lOkadi
hiMgade pariva aj~jAnaveMba kattaleya
BaMgisi surapathava tOrisutta [2]
siriyarasana samyak j~jAnaveMba pairige
bEru biDisi harikatheyeMba maLegaredu
nere SiShya manaveMba kere tuMbisi
karagaLeMba BarakODi harisuta vijayIMdrana guru [3]
Leave a Reply