Rama Jaya Shri

Composer : Shri Jagannatha dasaru

By Smt.Shubhalakshmi Rao

ಶ್ರೀ ರಾಮಕಥಾಮೃತ
ರಾಮ ಜಯಾ ಶ್ರೀರಾಮ ಜಯಾ…..
ಅಸುರ ಬಾಧಿಸುತಿರಲು ಋಷಿಗಳು ಸ್ತುತಿಮಾಡೆ
ದಶರಥನ ಗರ್ಭದಲಿ ಜನಿಸಿಬಂದೆ |೧|

ಶಿಶುವಾಗಿ ಕೌಸಲ್ಯೆಗೆ ಬಾಲ ಲೀಲೆಯ ತೋರ್ದು
ಕುಶಲದಿಂ ನಾಲ್ವರ ಕೂಡಿ ಬೆಳೆದೆ |೨|

ಅಸುರರನೆ ಬಡಿದಟ್ಟಿ ಋಷಿಯ ಯಾಗವ ಕಾಯ್ದು
ವಸುಧೆಯೊಳು ಶಿಲೆಯನ್ನು ಸತಿಯ ಮಾಡಿ |೩|

ಮಿಥಿಲ ಪಟ್ಟಣಕೈದಿ ಮೃಡನ ಧನುವನೆ
ಮುರಿದು ಶಶಿಮುಖಿ ಜಾನಕಿಯ ಕರವ ಪಿಡಿದು |೪|

ಪಥದೊಳಗೆ ಬರುತ ಭಾರ್ಗವರೊಡನೆ ಹೋರಾಡಿ
ದಶರಥಗೆ ಏಕೀ ಭಾವವನೆ ತೋರಿ |೫|

ಪರಮ ಹರುಷದಲಿ ಸಾಕೇತ ನಗರಿಗೆ ಬಂದು
ಕಿರಿಯ ಮಾತೆಯ ಕಠಿಣ ನುಡಿ ಕೇಳಿ |೬|

ಚಿತ್ರಕೂಟಕೆ ಬಂದು ಕೃತ್ಯವೆಲ್ಲವ ನಡೆಸಿ
ಭ್ರಾತೃ ಭರತನಿಗೆ ಪಾದುಕೆನಿತ್ತು |೭|

ವನದೊಳಗೆ ಸಂಚರಿಸಿ ಘನಕಾರ್ಯಗಳ ಮಾಡಿ
ಹನುಮನ ಕಳುಹಿ ಮುದ್ರಿಕೆಯ ಕೊಡಲು |೮|

ಮಿತ್ರೆ ಜಾನಕಿಗರುಹಿ ರತ್ನಕೊಂಡು ಬರಲು
ಅತ್ಯಂತ ಹರುಷದಲಿ ಶರಧಿ ಕಟ್ಟಿ |೯|

ದುಷ್ಟ ರಾಕ್ಷಸ ಕುಲವ ಕುಟ್ಟಿ ಬೇರನು
ಸವರಿ ಸೃಷ್ಠಸಿತೆ ಜಾನಕಿಯ ಅಗ್ನಿ ಹೊಗಿಸಿ |೧೦|

ಪಟ್ಟಣಕೆ ಬಂದು ಭರತನಿಗೆ ಪೇಳೆ
ಅಷ್ಟಗಂಗೆ ಉದಕವನೆ ತಂದು |೧೧|

ಅಷ್ಟ ಋಷಿಗಳು ಎಲ್ಲ ಕೂಡಿಕೊಂಡು
ಪಟ್ಟಾಭಿಷೇಕವನು ಮಾಡುತಿರಲು |೧೨|

ಸೃಷ್ಠಿಯೊಳು ಜಗನ್ನಾಥವಿಟ್ಠಲನಿಗೆ
ಪುಷ್ಪ ವೃಷ್ಠಿಗಳನ್ನು ಕರೆದರಾಗ |೧೩|


SrI rAmakathAmRuta
rAma jayA SrIrAma jayA…..
asura bAdhisutiralu RuShigaLu stutimADe
daSarathana garBadali janisibaMde |1|

SiSuvAgi kausalyege bAla lIleya tOrdu
kuSaladiM nAlvara kUDi beLede |2|

asurarane baDidaTTi RuShiya yAgava kAydu
vasudheyoLu Sileyannu satiya mADi |3|

mithila paTTaNakaidi mRuDana dhanuvane
muridu SaSimuKi jAnakiya karava piDidu |4|

pathadoLage baruta BArgavaroDane hOrADi
daSarathage EkI BAvavane tOri |5|

parama haruShadali sAkEta nagarige baMdu
kiriya mAteya kaThiNa nuDi kELi |6|

citrakUTake baMdu kRutyavellava naDesi
BrAtRu Baratanige pAdukenittu |7|

vanadoLage saMcarisi GanakAryagaLa mADi
hanumana kaLuhi mudrikeya koDalu |8|

mitre jAnakigaruhi ratnakoMDu baralu
atyaMta haruShadali Saradhi kaTTi |9|

duShTa rAkShasa kulava kuTTi bEranu
savari sRuShThasite jAnakiya agni hogisi |10|

paTTaNake baMdu Baratanige pELe
aShTagaMge udakavane taMdu |11|

aShTa RuShigaLu ella kUDikoMDu
paTTABiShEkavanu mADutiralu |12|

sRuShThiyoLu jagannAthaviTThalanige
puShpa vRuShThigaLannu karedarAga |13|

Leave a Reply

Your email address will not be published. Required fields are marked *

You might also like

error: Content is protected !!