Composer : Shri Modalkal Sheshadasaru
[ಕ್ಷಮಾಪನಪೂರ್ವಕ ತ್ರಿವಿಧ ಶಾಪಗಳಿಂದ ಪ್ರಶಮನ ಮಾಡಿ
ಜಗದೀಶನಾದ ಶ್ರೀಹರಿಯನ್ನು ಹೃದ್ಗುಹದಲ್ಲಿ ತೋರಿಸಿರೆಂದು
ಭೀಷ್ಮ, ದ್ರೋಣಾದಿಗಳ ಪ್ರಾರ್ಥನೆ.]
ಧ್ರುವತಾಳ:
ಎಲೆ ಎಲೆ ಭೀಷ್ಮ ದ್ರೋಣ ಕೃಪ ಕರ್ಣ
ಅಶ್ವತ್ಥಾಮ ಸಲೆ ಕರುಣಿಗಳ ಪಾದ
ಸರಸಿರುಹಕೆ
ತಲೆ ಬಾಗಿ ನಮಿಸಿ ಸತತ ಕೈ ಮುಗಿದು
ಪ್ರಾರ್ಥಿಸುವೆ ಒಲಿದು ಪಾಲಿಸಬೇಕು
ಅನ್ಯನೆನ್ನದೆ ಛಲದಿ ನೋಡುವದಕ್ಕೆ ದ್ವೇಷಿ
ಆದವನಲ್ಲ ಕೆಲ ಕಾಲ
ತಪ್ಪದನುಬಂಧ ಉಂಟು
ಇಳಿಯ ಜನರ ತೆರದಿ ಉದರಗೋಸುಗವಾಗಿ
ಕುಲಗೇಡಿ ಕೃತ್ಯವನ್ನು ಚರಿಸಲಿಲ್ಲಖಳ
ವೈರಿ ಪಾದಗಳ ಜ್ಞಾನ ಲಕ್ಷಣ
ಮುಕುಟಾ ಭಕ್ತಾ-ವಳಿಯ ಮಸ್ತಕ
ಭರಣವೆಂದು ತಿಳಿದು ಮಲರಹಿತವಾದ
ನಮ್ಮಿಂದರ್ಚಿತವೆಂದು ತಿಳಿದಂಗೀಕರಿಸಿದ
ಬಗೆ ಎಲ್ಲ ತಿಳಿವದು“ಮೈಯೈವೈತೇ ನಿಹತಾಃ ಪೂರ್ವಮೇವ ”
ವೆಂಬಜಲಜನಾಭನ ವಿಮಲ ವಾಕ್ಯದಂತೆ
ವಿಲಯದಿ ಸ್ಥಿತಿ ನಿಯಮನ
ಜ್ಞಾನಾಜ್ಞಾನ ಬಲವದ್ರೂಪವಾದ
ಬಂಧ ಮೋಕ್ಷ ಬಲವಂತನಾದ
ಹರಿಯ ಆಧೀನವಲ್ಲದಲೆ(ದು)ರ್ಬಲ
ಜೀವರಿಂದಾಗುವದೆ ತಿಳಿಯಬಲ್ಲವರೊಳು
ಆಧಿಕ್ಯವಾದ ನಿಮಗೆ ಪೇಳಲಾಹದೇನೊ
ಬಿನ್ನಪವನಳಿನ ಸಂಭವ ಜನಕ
ಗುರು ವಿಜಯ ವಿಠ್ಠಲರೇಯಾ
ವೊಲಿವ ನಿಮ್ಮಯ ಕೃಪೆಗೆ ಆವಕಾಲ [೧]
ಮಟ್ಟತಾಳ
ಅನಾದಿ ಕರ್ಮದ ಪ್ರಾಬಲ್ಯ ಕಾರಣದಿ
ಪ್ರಾಣನಾಥನ ನಿಜ ಸಂಕಲ್ಪದಿ
ಕರಣ ಮಾನಿಗಳಾದಂಥ ನಿಮ್ಮಿಂದಲೆ
ಎನಗೆ ಹೀನವಾಗಿರುವ ಕಲಿಕೃತ
ಕಲ್ಮಷವ ಸಾನುರಾಗದಿ ನಿಮ್ಮ
ಪದಕೆರಗುವೆ ಸತತ ದೀನನಾದವನನ್ನು ದೂರ
ನೋಡದಲೆ ಪ್ರೀಣರಾಗಿ ಎನ್ನ ವಾಕ್ಯವ ಮನ್ನಿಸಿ
ತ್ರಾಣರಾಗುವದು ಅಪರಾಧ ವೆಣಿಸದಲೆ ದಾನವಾಂತಕ
ಗುರು ವಿಜಯ ವಿಠ್ಠಲ ರಾಯನಕಾಣುವ
ಉಪಾಯ ಕರುಣಿಸುವದು ಬೇಗ [೨]
ತ್ರಿವಿಡಿತಾಳ
ನಿಮ್ಮ ನಿಗ್ರಹದಿಂದ ಈ ಪೃಥ್ವಿಯಲಿ ಬಂದು
ಜನ್ಮವೈದಿದೆ ಬಲು ನೀಚವಾದ
ನಿಮ್ನವಾಗಿದ್ದು ಕಾಮ ಲೋಭಾರ್ಣವದಿ ಮುಳುಗಿ
ವೈ-ಷಮ್ಯ ಭಾವಾಭಿಜನ್ಯ ತ್ರಿವಿಧ
ಪಾಪ ಶ್ರಮಗಳನುಭವಿಸಿ ಮುಂಗಾಣದಲೆ
ಹರಿಯ ಜನ್ಮದೊಳಗೆ ಒಮ್ಮೆ ಸ್ಮರಿಸದಲೆ
ಖಮ್ಮಹಿಯೊಳಗೆಲ್ಲ ನಿಂದಿತನಾದೆ ಬಲು
ನಿಮ್ಮ ವಾಕ್ಯದಿಂದ ಇನಿತಾಯಿತು
ನಮೊ ನಮೊ ನಿಮ್ಮ ಪಾದ ಸರಸಿರುಹಕೆ
ಸಮ್ಮುಖರಾಗಿ ನೀವು ತವಕದಿಂದ
ಹಮ್ಮಿನಿಂದಲಿ ಯಿತ್ತ ತ್ರಿವಿಧ ಶಾಪಗಳನ್ನು
ಪ್ರಾ-ಶಮ್ಯ ಐದಿಸುವದು ಕರುಣ ಮಾಡಿ
ಬೊಮ್ಮ ಜನಕ ಗುರು ವಿಜಯ ವಿಠ್ಠಲರೇಯನೊಡ
ಸನ್ಮಂಗಳಾಂಗನ ತೋರುವದು [೩]
ಅಟ್ಟತಾಳ
ಗೋಪುರದ ಮೇಲೆ ಬೊಂಬೆಯು ಇದ್ದಂತೆ
ಸುಪರಾಕ್ರಮಿಯಾದ ವೀರನ ಕೈಯಲ್ಲಿ
ದೀಪುತವಾಗಿದ್ದ ಘನ್ನ ಶಸ್ತ್ರದಂತೆ
ಸುಪವಿತ್ರವಾದ ಯಜ್ಞಕರ್ತನ ಕೈಯ್ಯ
ದೀಪುತ ವಾಗಿದ್ದ ದರ್ವಿಯ ತೆರದಂತೆ
ವ್ಯಾಪಾರ ಮಾಡುವ ವಾಣಿಜ್ಯನ
ಕೈಯ್ಯ ಪ್ರಾಪುತವಾಗಿದ್ದ ಸೊಲಗಿಯ ತೆರದಂತೆ
ಆಪಜಾಸನ ಮುಖ್ಯ ಸುರರು ಇನಿತು ಯಿರಲು
ಈ ಪ್ರಪಂಚದಲ್ಲಿ ನಾನ್ಯಾತರವನಯ್ಯಾ
ಅಪಾರ ಮಹಿಮ ಗುರು ವಿಜಯ ವಿಠ್ಠಲರೇಯಾ
ದ್ವೀಪಾಧಿಪತಿ ಆಜ್ಞಾದವರೆ ಎಲ್ಲ [೪]
ಆದಿತಾಳ
ಕಾಲ ಕರ್ಮದಿಂದ ತನ್ನ ಕ್ಲಿಪ್ತಿಯನೆಯಿತ್ತು
ಈ ಲೋಕ ನಿಮಿತ್ಯವಾದ
ಕೀತ್ರ್ಯಪಕೀರ್ತಿಲೀಲೆಯಿಂದ ಪ್ರಾಣಿಗಳಿಗೆ ತಂದ
ದೇವ ತಾನೆ ಒಲಿದುಶ್ರೀ ಲೋಲ ಪ್ರಿಯ
ಗುರು ವಿಜಯ ವಿಠ್ಠಲರೇಯಾ
ಪಾಲಿಸಿದರು ಬರಿದೆ ಖ್ಯಾತಿಯ ತಂದಿತ್ತು [೫]
ಜತೆ
ಯುಗಳ ಪಾದ ನಮಿಸಿ ಮುಗಿವೆ ಕರಗಳನ್ನು
ಜಗದೀಶ ಗುರು ವಿಜಯ ವಿಠ್ಠಲನ್ನ ತೋರಿಪದು [೬]
[kShamApanapUrvaka trividha SApagaLiMda
praSamana mADi jagadISanAda SrIhariyannu
hRudguhadalli tOrisireMdu BIShma, drONAdigaLa prArthane.]
dhruvatALa:
ele ele BIShma drONa kRupa karNa
aSvatthAma sale karuNigaLa pAda
sarasiruhake
tale bAgi namisi satata kai mugidu
prArthisuve olidu pAlisabEku
anyanennade Caladi nODuvadakke dvEShi
Adavanalla kela kAla
tappadanubaMdha uMTu
iLiya janara teradi udaragOsugavAgi
kulagEDi kRutyavannu carisalillaKaLa
vairi pAdagaLa j~jAna lakShaNa
mukuTA BaktA-vaLiya mastaka
BaraNaveMdu tiLidu malarahitavAda
nammiMdarcitaveMdu tiLidaMgIkarisida
bage ella tiLivadu“maiyaivaitE nihatAH pUrvamEva ”
veMbajalajanABana vimala vAkyadaMte
vilayadi sthiti niyamana
j~jAnAj~jAna balavadrUpavAda
baMdha mOkSha balavaMtanAda
hariya AdhInavalladale(du)rbala
jIvariMdAguvade tiLiyaballavaroLu
AdhikyavAda nimage pELalAhadEno
binnapavanaLina saMBava janaka
guru vijaya viThThalarEyA
voliva nimmaya kRupege AvakAla [1]
maTTatALa
anAdi karmada prAbalya kAraNadi
prANanAthana nija saMkalpadi
karaNa mAnigaLAdaMtha nimmiMdale
enage hInavAgiruva kalikRuta
kalmaShava sAnurAgadi nimma
padakeraguve satata dInanAdavanannu
dUra nODadale prINarAgi enna vAkyava
mannisi trANarAguvadu aparAdha veNisadale
dAnavAMtaka guru vijaya viThThala rAyanakANuva
upAya karuNisuvadu bEga [2]
triviDitALa
nimma nigrahadiMda I pRuthviyali baMdu
janmavaidide balu nIcavAda
nimnavAgiddu kAma lOBArNavadi muLugi
vai-Shamya BAvABijanya trividha
pApa SramagaLanuBavisi muMgANadale
hariya janmadoLage omme smarisadale
KammahiyoLagella niMditanAde balu
nimma vAkyadiMda initAyitu
namo namo nimma pAda sarasiruhake
sammuKarAgi nIvu tavakadiMda
hamminiMdali yitta trividha SApagaLannu
prA-Samya aidisuvadu karuNa mADi
bomma janaka guru vijaya viThThalarEyanoDa
sanmaMgaLAMgana tOruvadu [3]
aTTatALa
gOpurada mEle boMbeyu iddaMte
suparAkramiyAda vIrana kaiyalli
dIputavAgidda Ganna SastradaMte
supavitravAda yaj~jakartana kaiyya
dIputa vAgidda darviya teradaMte
vyApAra mADuva vANijyana
kaiyya prAputavAgidda solagiya teradaMte
ApajAsana muKya suraru initu yiralu
I prapaMcadalli nAnyAtaravanayyA
apAra mahima guru vijaya viThThalarEyA
dvIpAdhipati Aj~jAdavare ella [4]
AditALa
kAla karmadiMda tanna kliptiyaneyittu
I lOka nimityavAda
kItryapakIrtilIleyiMda prANigaLige taMda
dEva tAne oliduSrI lOla priya
guru vijaya viThThalarEyA
pAlisidaru baride KyAtiya taMdittu [5]
jate
yugaLa pAda namisi mugive karagaLannu
jagadISa guru vijaya viThThalanna tOripadu [6]
Leave a Reply