Adavi acharyara

Composer : Shri Anantadreesharu

By Smt.Shubhalakshmi Rao
Smt.Nandini Sripad

Shri Madanur Vishnu Tirtharu: 1756–1806
EdamUkOpi vaagmithvum jadOpi prAgna moulitAm |
Yath krupAlEshatO yAti Sri Vishnu tIrtham tamAshraye ||
Aradhane : Magha krishna trayodashi

ಅಡವಿ ಆಚಾರ್ಯರ ಅಡಿಯ ಪೊಂದಿದ ಜನರು
ಅಡಿಗಡಿಗೆ ಬಹುಪುಣ್ಯ ಪಡೆದು ಕೊಂಬುವರು ||ಪ||

ಪೊಡವಿಯಲಿ ಸಂಸಾರ ಮಡುವಿನಲಿ ಮುಣಿ ಮುಣಿಗಿ
ಬಡವರಂತತಿ ಬಾಯ ಬಿಡುವರಲ್ಲವರು ||ಅ.ಪ||

ಪಂಚರತ್ನವ ಪಠಿಸಿ ಪಂಚ ಮೂರ್ತಿಗಳನ್ನು
ಮುಂಚೆ ತಿಳಿವರು ಈ ಪ್ರಪಂಚದಲ್ಲಿ
ಹಂಚಿಕೆಯಲಿ ಮತ್ತೆ ಪಂಚ ಭೇದವ ತಿಳಿದು
ಪಂಚ ಮಹಾ ಪಾಪಗಳ ಮುಂಚೆ ಕಳೆಯುವರು ||೧||

ಭಂಗ ಬಿಡಿಸುವ ಸುಧೆಯ ಮಂಗಳಾರ್ಥವ ತಿಳಿದು
ಅಂಗದಲಿ ಸುರಿವರು ಕಂಗಳೋದಕವ
ಮಂಗಳಾಂಗನ ಅಂತರಂಗದಿ ಸ್ಮರಿಸುತ್ತ
ಮುಂಗೈಯ್ಯ ಮುದ್ರೆಗಳ ಧರಿಸುವರಿವರು ||೨||

ವಾಸುದೇವನ ದಾಸ ದಾಸರಾದೆವೆಂಬೊ
ಆಶೆಯಲಿ ಅವನ ಸಹವಾಸ ಬಯಸುವರು
ಶ್ರೀ ಸುಧಾರ್ಥಾನಂತಾದ್ರೀಶನಲ್ಲೇ ಭಕುತಿ
ಯೇಸು ಕಾಲಕು ಬಿಡದೆ ಬ್ಯಾಸರದೆ ಬೇಡುವರು ||೩||


aDavi AcAryara aDiya poMdida janaru
aDigaDige bahupuNya paDedu koMbuvaru ||pa||

poDaviyali saMsAra maDuvinali muNi muNigi
baDavaraMtati bAya biDuvarallavaru ||a.pa||

paMcaratnava paThisi paMca mUrtigaLannu
muMce tiLivaru I prapaMcadalli
haMcikeyali matte paMca bhEdava tiLidu
paMca mahA pApagaLa muMce kaLeyuvaru ||1||

BaMga biDisuva sudheya maMgaLArthava tiLidu
aMgadali surivaru kaMgaLOdakava
maMgaLAMgana aMtaraMgadi smarisutta
muMgaiyya mudregaLa dharisuvarivaru ||2||

vAsudEvana dAsa dAsarAdeveMbo
ASeyali avana sahavAsa bayasuvaru
SrI sudhArthAnaMtAdrISanallE Bakuti
yEsu kAlaku biDade byAsarade bEDuvaru ||3||

Leave a Reply

You might also like

error: Content is protected !!