Varada Vishnutirtha

Composer : Shri Anantadreesharu

By Smt.Shubhalakshmi Rao

Shri Madanur Vishnu Tirtharu:
EdamUkOpi vaagmithvum jadOpi prAgna moulitAm |
Yath krupAlEshatO yAti Sri Vishnu tIrtham tamAshraye ||
1756–1806
Aradhane : Magha krishna trayodashi

ವರದ ವಿಷ್ಣು ತೀರ್ಥ ಕರುಣದಿ ನೀ ಕೊಡು ಪುರುಷಾರ್ಥ ||ಪ.||
ವರದ ಅಭೀಷ್ಟೆಯ ಕರೆದು ಎನಗೆ ನೀ ವರದನೆಂಬ
ನಿನ್ನ ಬಿರುದು ಕಾಯಬೇಕೊ ||ಅ.ಪ.||

ಅಜನ ಜನಕನಲ್ಲಿ ಇರುವಿಯೊ ವಿಜನ ದೇಶದಲ್ಲೀ
ಸುಜನರು ಇದ್ದಲ್ಲಿ ಬರುವೆಯೊ ಭಜನೆ ಮಾಡುವಲ್ಲೀ
ಸುಜನರ ತಾಪಕೆ ವ್ಯಜನನು ನೀನು
ಸುಜನ ಕಲ್ಪತರು ಕುಜನ ಕುಠಾರಾ [೧]

ನಂದನಂದನವನೂ ಅವನಿನ್ನ ಬಂಧನದಲ್ಲಿಹನು
ಅಂಧನಾಗಿ ನಾನು ಸಂಸೃತಿ ಬಂಧನದೊಳಗಿಹೆನು
ನೊಂದೆನು ಬೆಂದೆನು ಬಂದೆನು ನಿನ್ನಲ್ಲಿ
ಬಂಧನ ಬಿಡಿಸೋ ಬಂದಿಹೆ ಬಿಡದೆ [೨]

ಮರೆತೆನು ನಾನಿನ್ನ ಎನ್ನವಗುಣ ಮರೆತು ಪಾಲಿಸೆನ್ನ
ಪರತರಗುಣ ನಿನ್ನ ಹೊರೆತು ಅನ್ಯಗತಿ ಗುರುತತಿಲ್ಲೋ ಮುನ್ನಾ
ಅರಿತು ಅನಂತಾದ್ರಿ ನಿಲಯನ ತೋರಿಸೊ
ತ್ವರಿತ ಮೋದ ಪುರನಿರತ ಸದ್ಗುರುವೆ [೩]


varada viShNu tIrtha karuNadi nI koDu puruShArtha ||pa.||
varada abhIShTeya karedu enage nI varadaneMba
ninna birudu kAyabEko ||a.pa.||

ajana janakanalli iruviyo vijana dEshadallI
sujanaru iddalli baruveyo bhajane mADuvallI
sujanara tApake vyajananu nInu
sujana kalpataru kujana kuThArA [1]

naMdanaMdanavanU avaninna baMdhanadallihanu
aMdhanAgi nAnu saMsRuti baMdhanadoLagihenu
noMdenu beMdenu baMdenu ninnalli
baMdhana biDisO baMdihe biDade [2]

maretenu nAninna ennavaguNa maretu pAlisenna
parataraguNa ninna horetu anyagati gurutatillO munnA
aritu anaMtAdri nilayana tOriso
tvarita mOda puranirata sadguruve [3]

Leave a Reply

You might also like

error: Content is protected !!