-
Eetane Prahladanu gururaya
Composer : Shri Harapanahalli Bheemavva ಈತನೆ ಪ್ರಹ್ಲಾದನು ಗುರುರಾಯಈತನೆ ಪ್ರಹ್ಲಾದ ಭೂತಳದೊಳು ಮೆರೆವಉತ್ತಮ ಭಕುತಿಗೆ ಎತ್ತಿ ವರವ ಕೊಡುವ ||ಅ.ಪ|| ನಿತ್ಯ ನಿತ್ಯದಲ್ಲಿ ನಿತ್ಯ ವ್ಯಾಪಕನೆಂದುನಿತ್ಯ ಶ್ರೀ ಹರಿಯ ಪ್ರಕಾಶ ತೊರುತಿಹನು ||೧|| ಸಡಗರದಲಿ ಬಂದು ಸುಖ ಶಾಸ್ತ್ರ ಕರ ಪಿಡಿದುಪೊಡವಿಯೊಳಗೆ ತಾನೆ ಹರಿನಾಮ ರಸ ಕುಡಿದ ||೨|| ಹಸಿವೆ ತೃಷೆಯಿನ್ದ ವರವೀವ ರಾಘವೇಂದ್ರವಸುಧಿಯೊಳಗೆ ಭೀಮೇಶ ಕೃಷ್ಣನ ದಾಸ ||೩|| eetane prahlAdanu gururAyaeetane prahlAda bhUtaLadoLu merevauttama bhakutige etti varava koDuva ||a.pa||…
-
Endendu intha chodya
Composer : Shri kanakadasaru ಎಂದೆಂದು ಇಂಥ ಚೋದ್ಯ ಕಂಡಿದ್ದಿಲ್ಲವೋ |ಪ| ಅಂಗಡಿಯ ಬೀದಿಯೊಳೊಂದು ಆಕಳ ಕರು ನುಂಗಿತುಲಂಘಿಸುವ ಹುಲಿಯ ಕಂಡು ನರಿಯು ನುಂಗಿತು [೧] ಹುತ್ತದೊಳಾಡುವ ಸರ್ಪ ಮತ್ತಗಜವ ನುಂಗಿತುಉತ್ತರ ದಿಶೆಯೊಳು ಬೆಳದಿಂಗಳಾಯಿತಮ್ಮಾ [೨] ಯೋಗಮಾರ್ಗಿ ಕಾಗಿನೆಲೆಯಾದಿಕೇಶವರಾಯಭಾಗವತರ ಬೆಡಗಿದು ಬೆಳದಿಂಗಳಾಯಿತಮ್ಮಾ [೩] eMdeMdu iMtha cOdya kaMDiddillavO |pa| aMgaDiya bIdiyoLoMdu AkaLa karu nuMgitulaMGisuva huliya kaMDu nariyu nuMgitu [1] huttadoLADuva sarpa mattagajava nuMgituuttara diSeyoLu beLadiMgaLAyitammA [2] yOgamArgi kAgineleyAdikESavarAyaBAgavatara…
-
Jaya Jaya Jaya Raya
Composer : Shri Vyasarajaru ಜಯ ಜಯ ಜಯರಾಯ |ದಯದಿಂದ ಪಾಲಿಸೋ ಮಹರಾಯ || ಪ || ಪ್ರತಿಜನ್ಮದಿ ತ್ವಚ್ಚರಣದಲಿಸದ್ರತಿಯನಿತ್ತು ಕಾಯೋ ಕರುಣದಲಿ |ಅತಿ ಬಲದಿಂ ಹೃದ್ಗತ ತಮವಳಿದ್ಉನ್ನತಿಯನು ಕೊಡು ಸನ್ನುತ ಭರದಿ || ೧ || ಅಚ್ಯುತ ಪಾದಾಂಬುಜ ಭೃಂಗನಿನ್ನರ್ಚನೆಯನು ಕೊಡು ಕಮಲಾಂಗ ಗುರು |ತ್ವಚ್ಚರಿತೆಯ ತೋರೋ ಗುಣಸಾಂದ್ರಪ್ರಚ್ಚುತ ದೂಷಣ ಸಚ್ಚಿತ ಭೂಷಣಮೆಚ್ಚಿಪೆ ನಿನ್ನನು ಮುನಿತುಂಗ || ೨ || ಬೃಂದಾರಕ ವೃಂದಾರಾಧ್ಯಅಘವೃಂದವಿದೂರ ಕುಜನಭೇದ್ಯ |ಆನಂದತೀರ್ಥರ ಮತ ಜನಬೋಧ್ಯಸುಂದರ ತಾಂಡವದಿಂದಿಹ ಕೃಷ್ಣನವಂದಿಪ ಸದ್ಗುರು ನಿರವದ್ಯ ||…
